ಚಿಮ್ಮಡ: ಗ್ರಾಮದಿಂದ ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ತೆರಳಿದ್ದ ಮುನ್ನೂರಕ್ಕೂ ಹೆಚ್ಚು ಜನ ಭಕ್ತಾದಿಗಳು ಇಂದು ಗ್ರಾಮದ ದ್ವಾರ ಬಾಗಿಲಿನ ಮೂಲಕ ಸ್ವಗ್ರಾಮ ಪ್ರವೇಶಿಸಿದರು.
ಕಳೆದ ಹದಿನೈದು ದಿನಗಳ ಹಿಂದೆ ಹೋಳಿ ಹುಣ್ಣಿಮೆ ಕರಿ ದಿನದಂದು ಗ್ರಾಮದಿಂದ ನೆರೆಯ ಆಂದ್ರ ಪ್ರದೇಶದ ಶ್ರೀಶೈಲ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ, ವಾಹನಗಳ ಮೂಲಕ ತೆರಳಿದ್ದ ನೂರಾರು ಜನ ಭಕ್ತಾಧಿಗಳು ಕಳೆದ ನಾಲ್ಕು ದಿನಗಳಿಂದ ಗ್ರಾಮದಿಂದ ಹೊರಗಡೆಯಿರುವ ದೇವಸ್ಥಾನಗಳಲ್ಲಿ, ಶಾಲೆಗಳಲ್ಲಿ ಬೀಡು ಬಿಟ್ಟಿದ್ದರು, ವಾಸ್ತವ್ಯ ವಿರುವ ಸ್ಥಳದಲ್ಲಿಯೇ ಪಾದಯಾತ್ರಿಗಳಿಗೆ ಕಳೆದ ಮೂರು ದಿನಗಳವರೆಗೆ ಊಟ ಮತ್ತು ಉಪಹಾರದ ವ್ಯವಸ್ಥೆಯನ್ನು ಮುಸ್ಲಿಂ ಸಮಾಜಬಾಂಧವರೂ ಸೇರಿದಂತೆ ಹಲವಾರು ಜನ ಭಕ್ತಾಧಿಗಳು ವ್ಯವಸ್ಥೆಗೊಳಿಸಿ ಸಾಮರಸ್ಯ ಮೆರೆದರು. ಪ್ರತೀತಿಯಂತೆ ಐದೇಶಿಯ ಐದು ದಿನಗಳ ಮುಂಚಿನ ದಿನವಾದ ರವಿವಾರ ಮುಂಜಾನೆ ಶ್ರೀ ಪ್ರಭು ಮಹಾಸ್ವಾಮಿಗಳಿಂದ ಮಂಗಳಾರತಿ ನೆರವೇರಿಸುವ ಮೂಲಕ ಪಾದಯಾತ್ರಿಗಳನ್ನು ಗ್ರಾಮದೊಳಗೆ ಬರಮಾಡಿಕೊಳ್ಳಲಾಯಿತು. ಶ್ರೀ ಮಲ್ಲಯ್ಯದೇವರ ಕಂಬಿಯನ್ನು ಶ್ರೀಗಳು ಹೆಗಲಮೇಲೆ ಹೊತ್ತು ಗ್ರಾಮದ ದ್ವಾರ ಬಾಗಿಲಿನ ಮೂಲಕ ಗ್ರಾಮ ಪ್ರವೇಶಿಸಿದರು.
ನಂತರ ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ವೀಶೆಷ ಪೂಜೆ ಮದ್ಯಾಹ್ನದ ಪ್ರಸಾದ ಮಾಡಲಾಗಿತ್ತು ಸಂಜೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುವ ಮಹಾ ಮಂಗಲಪ್ರಸಾದ ಸ್ವೀಕಾರದೊಂದಿಗೆ ಪಾದಯಾತ್ರಿಗಳು ತಮ್ಮ ತಮ್ಮ ಮನೆಗಳಿಗೆ ತೆರಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

