ದೇವರಹಿಪ್ಪರಗಿ: ಭಾರತರತ್ನ ಡಾ.ಅಂಬೇಡ್ಕರ್ ಯಾವುದೇ ಜಾತಿ, ಧರ್ಮ, ಮತ, ಪಂಥಗಳಿಗೆ ಸೀಮಿತವಾಗದೇ ಮಹಾಮಾನವತಾವಾದಿಯಾಗಿ ವಿಶ್ವಮಾನವರೆನಿಸಿದ್ದಾರೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಜರುಗಿದ ಡಾ. ಅಂಬೇಡ್ಕರವರ ೧೩೩ ನೇ ಜಯಂತಿಯಲ್ಲಿ ಪಾಲ್ಗೊಂಡು, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಮಾತನಾಡಿದರು. ಅಂಬೇಡ್ಕರ್ ಅವರ ಸಮಗ್ರ ಜೀವನವೇ ಆದರ್ಶ. ಭಾರತೀಯ ಸಂವಿಧಾನದ ಪಿತಾಮಹರಾದ ಇವರು ಮಾನವೀಯ ಮೌಲ್ಯಗಳು, ಶಿಕ್ಷಣ ಹಾಗೂ ಸಮಾನತೆಯ ಪ್ರತಿಪಾದನೆಯ ಪ್ರಮುಖ ಹರಿಕಾರರೆನಿಸಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜುನ್ನೂರ ಮಾತನಾಡಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಬಿಜೆಪಿ ಧುರೀಣ ಸಿದ್ದು ಬುಳ್ಳಾ, ದಲಿತ ಸಮಾಜ ಸುಧಾರಣಾ ಸಮೀತಿ ಅಧ್ಯಕ್ಷ ಕಾಶೀನಾಥ ತಳಕೇರಿ ಹಾಗೂ ಪ್ರಕಾಶ ಗುಡಿಮನಿ ಮಾತನಾಡಿದರು.
ಪಿಎಸ್‌ಐಗಳಾದ ಬಸವರಾಜ ತಿಪ್ಪಾರಡ್ಡಿ, ಬಿ.ಬಿ.ಕೊಳ್ಳಿ, ಶಿರಸ್ತೇದಾರ ಸುರೇಶ ಮ್ಯಾಗೇರಿ, ಪಟ್ಟಣ ಪಂಚಾಯಿತಿ ಮಾಜಿಆಧ್ಯಕ್ಷ ಭಾಸ್ಕರ್ ಗುಡಿಮನಿ, ಸದಸ್ಯ ಉಮೇಶ ರೂಗಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ನಿಂಗು ಯಂಭತ್ನಾಳ, ಮುನ್ನಾ ಮಳಖೇಡ, ಸಮುದಾಯದ ಪ್ರಮುಖರಾದ ಭೀಮಪ್ಪ ಗುಡಿಮನಿ, ಮಲೆಪ್ಪ ಮಲ್ಲಾರಿ, ಬಸವರಾಜ ತಳಕೇರಿ, ರಮೇಶ ಮ್ಯಾಕೇರಿ, ಪ್ರಕಾಶ ಮಲ್ಲಾರಿ, ರಾಘವೇಂದ್ರ ಗುಡಿಮನಿ, ರಾವುತ ತಳಕೇರಿ, ಜಾನು ಗುಡಿಮನಿ, ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

