Author: editor.udayarashmi@gmail.com

ವಿಜಯಪುರ: ಕಾಂಗ್ರೆಸ್ ಸರ್ಕಾರ ಸಿದ್ಧಸಿರಿ ಸಕ್ಕರೆ ಹಾಗೂ ಎಥೆನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗೂ ಮುಚ್ಚುವ ಷಡ್ಯಂತರಕ್ಕೆ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಸೋಮವಾರ ತಡೆ ನೀಡಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕಾರ್ಖಾನೆ ಅಧ್ಯಕ್ಷರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು, ಕಾರ್ಖಾನೆಯನ್ನು ನಂಬಿರುವ ಸಾವಿರಾರು ರೈತರು, ಉದ್ಯೋಗಿಗಳ ಬಗ್ಗೆ ಎಳ್ಳಷ್ಟು ಕರುಣೆ ತೋರದೆ ಹಾಗೂ ರಾಜಕೀಯವಾಗಿ ಎದುರಿಸಲಾಗದೆ, ನೋಟಿಸ್ ನೀಡಿರುವವರ ಹುನ್ನಾರಕ್ಕೆ ಉಚ್ಛ ನ್ಯಾಯಾಲಯ ತಡೆ ನೀಡಿದೆ.ಕಳೆದ ಎರಡು ವರ್ಷಗಳಿಂದ ಇಲ್ಲದಿದ್ದ ಮಾಲಿನ್ಯ ಈಗ ಈ ಕುರುಡ ಸರ್ಕಾರಕ್ಕೆ ಕಾಣಿಸಿದೆ. ನೋಟಿಸ್ ಹಿಂದೆ ಇರುವ ಭ್ರಷ್ಟರ ವಿರುದ್ಧ ಹೋರಾಟ ಇನ್ನೂ ಇಮ್ಮಡಿಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

Read More

ವಿಜಯಪುರ: ನಗರದ ಕನಕದಾಸ ಬಡಾವಣೆಯಲ್ಲಿರುವ ಐರಿಶ್ ಎಜುಕೇಶನಲ್ ಅಕ್ಯಾಡೆಮಿಯಲ್ಲಿ ರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭ ಐರಿಶ್ ಶಾಲೆಯ ಮುಖ್ಯಸ್ಥೆ ಶ್ರೀಮತಿ ದೀಪಾ ಆದಿತ್ಯ ಗೋಟಸಗಿ ಮಾತನಾಡಿ, ಮಕ್ಕಳಿಗೆ ಕ್ರೀಯಾತ್ಮಕ ಚುಟವಟಿಕೆಗಳ ಶಿಕ್ಷಣ ಅವಶ್ಯಕತೆ ಇದೆ. ಮಕ್ಕಳ ಬೌದ್ದಿಕ ಮತ್ತು ದೈಹಿಕ ಶಿಕ್ಷಣದಿಂದ ಮಕ್ಕಳು ಸದೃಢವಾಗಿ ಬೆಳೆಯಬೇಕು. ಈಗಿಂದಲೇ ಮಕ್ಕಳಿಗೆ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಸಸ್ಯದ ಭಾಗಗಳ ಕಲಾ ಕೃತಿಗಳನ್ನು ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ವಿಜುಗೌಡ ಕಾಳಶೆಟ್ಟಿ , ಶಿಕ್ಷಕಿಯರಾದ ಶ್ರೀಮತಿ ಧನಲಕ್ಷ್ಮೀ ದೊಡಮನಿ, ಶೃತಿ ಗಾಯಕವಾಡ ಹಾಗೂ ಭೋದಕ ಭೋದಕೇತರ ಸಿಬ್ಬಂದಿ ಹಾಜರಿದ್ದರು.

Read More

ಕನಮಡಿಯಲ್ಲಿ 110ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ಭೂಮಿಪೂಜೆ ಸಲ್ಲಿಸಿದ ಸಚಿವ ಎಂ.ಬಿ.ಪಾಟೀಲ ಮಾಹಿತಿ ವಿಜಯಪುರ: ಜಿಲ್ಲೆಯಲ್ಲಿ ನೀರಾವರಿ ಜೊತೆಗೆ ವಿದ್ಯುತ್ ಕ್ಷೇತ್ರದಲ್ಲಿಯೂ ಕ್ರಾಂತಿಕಾರಿ ಕೆಲಸಗಳಾಗಿದ್ದು ವಿಜಯಪುರವನ್ನು ದೇಶದಲ್ಲಿಯೇ ಅತ್ಯಂತ ಶ್ರೀಮಂತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ಕೆಪಿಟಿಸಿಎಲ್ ವತಿಯಿಂದ ನಿರ್ಮಿಸಲಾಗುತ್ತಿರುವ 110 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ಭೂಮಿಪೂಜೆ ರವಿವಾರ ಸಂಜೆ ನೆರವೇರಿಸಿ ಅವರು ಮಾತನಾಡಿದರು.ವಿದ್ಯುತ್ ಕ್ಷೇತ್ರದಲ್ಲಿ ಕಳೆದ 65 ವರ್ಷಗಳಲ್ಲಿ ಎಷ್ಟು ಕೆಲಸ ನಡೆದಿವೆಯೋ ಅಷ್ಟೇ ಪ್ರಮಾಣದ ಕೆಲಸಗಳು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಆಗಿವೆ. ರೈತರಿಗೆ ನೀರಿನ ಜೊತೆ ವಿದ್ಯುತ್ ಕೂಡ ಅಷ್ಟೇ ಅಗತ್ಯವಾಗಿದೆ. ಈಗ ಕನಮಡಿಯಲ್ಲಿ ಸುಮಾರು ರೂ. 20 ಕೋ. ವೆಚ್ಚದಲ್ಲಿ ವಿದ್ಯುತ್ ಕೇಂದ್ರ ನಿರ್ಮಿಸಲಾಗುತ್ತಿದ್ದು, ಸಪ್ಟೆಂಬರ್ ವೇಳೆಗೆ ಪೂರ್ಣವಾಗಲಿದೆ. ಆಗ ಈ…

Read More

ವಿಜಯಪುರ: ಗಮಕ ಕಲೆಯು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದು ೬೪ ಕಲೆಗಳಲ್ಲಿ ಒಂದಾಗಿದೆ. ಇದನ್ನು ಉಳಿಸಿ ಬೆಳೆಸುವ ಹೊಣೆ ಇಂದಿನ ಯುವ ಗಮಕ ಕಲಾದರ ಮೇಲಿದೆ ಎಂದು ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಕನ್ನಡ ವಿಭಾಗ ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) ಬೆಂಗಳೂರು, ಜಿಲ್ಲಾ ಘಟಕ ವಿಜಯಪುರ, ಸಹಯೋಗದಲ್ಲಿ “ಮಹಾಕವಿ ಕುಮಾರವ್ಯಾಸ ಜಯಂತಿ ಹಾಗೂ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಮಕ ಇಂದು ಮರೆಯಾಗುತ್ತಿದ್ದು, ಅದರ ಉಳಿವು ಅಗತ್ಯವಾಗಿದೆ. ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ಗಮಕ ಪರಂಪರೆಯನ್ನು ಮುಂದುವರೆಸುವ ಅಗತ್ಯವಿದೆ ಎಂದು ಹೇಳಿದರು.ಪ್ರಾಚಾರ್ಯ ಡಾ. ಆರ್.ಎಂ.ಮಿರ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಗಮಕ ಕಲೆಯು ಹೆಚ್ಚು ಹೆಚ್ಚು ಮುನ್ನೆಲೆಗೆ ಬರಬೇಕಾಗಿದೆ. ಇದು ಕಾಲೇಜು ಹಂತದಲ್ಲಿ ನಡೆಯುತ್ತಾ ಸಾಗಿದರೆ ವಿದ್ಯಾರ್ಥಿಗಳಿಗೆ ಪ್ರಾಚೀನ ಕನ್ನಡ ಕಾವ್ಯಗಳ…

Read More

ವಿಜಯಪುರ: ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನರಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ವಿತರಿಸುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಫೆಬ್ರವರಿ ೧೫ ಕೊನೆಯ ದಿನವಾಗಿದೆ.ಕುಟುಂಬ ವಾರ್ಷಿಕ ಆದಾಯ ರೂ.೨ ಲಕ್ಷ ಒಳಗಿರಬೇಕು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಪಡೆದಿರಬೇಕು. ದೈಹಿಕ ವಿಕಲಚೇತನರ ಶೇ.೭೫ರಷ್ಟು ಇದಕ್ಕಿಂತ ಹೆಚ್ಚಿನ ವಿಕಲಚೇತನ ಹೊಂದಿದ ಯಂತ್ರ ಚಾಲಿತ ದ್ವಿಚಕ್ರ ವಾಹನ ಚಾಲನೆ ಮಾಡುವ ಸಾಮರ್ಥ್ಯ ಹೊಂದಿದ, ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಚಲಾಯಿಸಲು ಇತರೇ ಎಲ್ಲಾ ರೀತಿಯಲ್ಲಿ ಸದೃಢರಾಗಿರುವ ವಿಕಲಚೇತನರಾಗಿರಬೇಕು. ಸರ್ಕಾರದಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಪಡೆದಿರಬಾರದು.ಹೆಚ್ಚಿನ ಮಾಹಿತಿಗಾಗಿ ವಿಜಯಪುರ – ರವಿ ರಾಠೋಡ ( ಮೊ.೯೦೩೫೫೫೩೩೩೭), ಇಂಡಿ – ಪರಶುರಾಮ ಭೋಸಲೆ (ಮೊ.೯೯೭೨೪೪೧೪೬೪), ಸಿಂದಗಿ – ಮುತ್ತುರಾಜ ಸಾತಿಹಾಳ (ಮೊ.೯೯೮೦೦೧೯೬೩೫), ಬಸವನ ಬಾಗೇವಾಡಿ – ಎಸ್. ಡಿ ಬಿರಾದಾರ (ಮೊ.೮೭೨೨೧೩೫೬೬೦) ಹಾಗೂ ಮುದ್ದೇಬಿಹಾಳ – ಎಸ್.ಕೆ. ಘಾಟಿ (ಮೊ.೯೭೪೦೬೮೨೯೭೯) ಕಚೇರಿ ದೂರವಾಣಿ ಸಂಖ್ಯೆ ೦೮೩೫೨-೭೯೬೦೬೦ಗೆ ಸಂಪರ್ಕಿಸುವಂತೆ…

Read More

ಕಲಕೇರಿ: ಕಲಬುರ್ಗಿ ನಗರದ ಕೋಟನೂರ್ ಲುಂಬುಣಿ ಉಧ್ಯಾನವನದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿರುವ ದುಷ್ಕರ್ಮಿಗಳನ್ನು ಬಂದಿಸಿ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ಸದಸ್ಯರು ಕಲಕೇರಿ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದಿಂದ ಮುಖ್ಯ ಬಜಾರ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.ಬ್ರಹತ್ ಪ್ರತಿಭಟನಾ ರ‍್ಯಾಲಿ ಮುಖಾಂತರ ಮುಖ್ಯ ಬಜಾರ ತಲುಪಿ ಅಲ್ಲಿ ಟೈರ್‌ಗೆ ಬೆಂಕಿಯನ್ನು ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾಳಿಕೋಟಿ ಕಂದಾಯ ನೀರಿಕ್ಷಕ ದುಂಡಯ್ಯ ಮಠಪತಿ ಅವರ ಮೂಲಕ ಘನವೆತ್ತ ರಾಜ್ಯಪಾಲರಿಗೆ ತಲುಪುವಂತೆ ಮನವಿಯನ್ನು ಪ್ರತಿಭಟನಾಕಾರರು ಸಲ್ಲಿಸಿದರು.ಈ ಸಂದರ್ಭದಲ್ಲಿ ಅನೇಕ ಪ್ರತಿಭಟನಾಕಾರರು ಮಾತನಾಡಿ, ಈ ಘಟನೆಗೆ ಸಂಬಂಧಿಸಿದ ಎಲ್ಲ ದುಷ್ಕರ್ಮಿಗಳನ್ನು ಬಂದಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಆಗ್ರಹಪಡಿಸಿದರು. ಇಂತಹ ದುಷ್ಕೃತ್ಯಗಳು ಮತ್ತೆ ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತಿ ಮತ್ತು ಗುಪ್ತಚರ ಇಲಾಖೆಗಳು ಕ್ರಮವಹಿಸಬೇಕೆಂದು…

Read More

ವಿಜಯಪುರ: ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಪ್ರಾರಂಭಗೊಂಡ ಒಂದು ವರ್ಷದ ಅವಧಿಯಲ್ಲಿ ತನ್ನ ಅತ್ಯುತ್ತಮ ಸೇವೆಯಿಂದಾಗಿ ಜಿಲ್ಲಾದ್ಯಂತ ಗುರುತಿಸಿಕೊಂಡಿದೆ.ಲಕ್ಷಾಂತರ ರೋಗಿಗಳಿಗೆ ನೆರವಾಗುವುದರ ಮೂಲಕ ಒಂದು ವರ್ಷದ ಅವಧಿಯಲ್ಲಿ ಯಶಸ್ವಿ ಕಿಡ್ನಿ ಟ್ರಾನ್ಸ್ಪ್ಲಾಂಟ ಮಾಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಸದಾ ನಿಮ್ಮ ಸೇವೆಯಲ್ಲಿ ಎನ್ನುವ ಘೋಷವಾಖ್ಯದಡಿಯಲ್ಲಿ ಸೇವೆ ಸಲ್ಲಿಸುವ ಆಸ್ಪತ್ರೆಯು ಪ್ರಸ್ತುತ ಪ್ರಧಾನ ಮಂತ್ರಿಯವರ ಕನಸಿನ ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ ಯೋಜನೆಯನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸುವುದರೊಂದಿಗೆ ಅವಶ್ಯಕತೆಯುಳ್ಳ ಬಡವರಿಗೆ ನೆರವಾಗುವಲ್ಲಿ ಯಶಸ್ವಿಯಾಗಿದ್ದನ್ನು ಗಮನಿಸಿದ ಸರ್ಕಾರ ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡ ರಾಜ್ಯದ ಅತ್ಯುತ್ತಮ ಆಸ್ಪತ್ರೆ ಎಂದು ಘೋಷಿಸಿ, ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದೆ.ನಗರದ ಡಾ.ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ೭೫ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು.ಆಸ್ಪತ್ರೆಯ ಈ ಸಾಧನೆಗೆ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು ಹಾಗೂ ನಗರದ ವಿಧಾನಸಭಾ…

Read More

ಕೊಲ್ಹಾರ: ಪ್ರಜೆಗಳು ದೇಶದ ಸಂವಿಧಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ದೇಶದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸ ನಡೆಯುತ್ತಿರುವದರಿಂದ ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಬರುತ್ತಿದೆ. ಶಿಕ್ಷಣ ಮುಖಾಂತರ ಶೋಷಣೆ ರಹಿತ ಸಮಾಜ ನಿರ್ಮಾಣ ಮಾಡುವದು ಸರ್ಕಾರದ ಗುರಿಯಾಗಿರುತ್ತದೆ ಎಂದು ತಹಶೀಲ್ದಾರ ಎಸ್.ಎಸ್.ನಾಯಕಲ್‌ಮಠ ಹೇಳಿದರು.ಪಟ್ಟಣದ ಕನ್ನಡ ಗಂಡು ಮಕ್ಕಳ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕಾ ಆಡಳಿತ ವತಿಯಿಂದ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಮಹನೀಯರನ್ನು ಕೊಲ್ಹಾರ ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ ಚಲವಾದಿ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮುದ್ದೀನ, ಕೊಲ್ಹಾರ ಪಿಎಸ್‌ಆಯ್ ಪ್ರವೀಣಕುಮಾರ ಗರೇಬಾಳ, ಕೃಷಿ ಇಲಾಖೆ ಅಧಿಕಾರಿ ಪುರೋಹಿತ, ಆರೋಗ್ಯ ಇಲಾಖೆಯ ಲಕ್ಷ್ಮಿ ತೆಲ್ಲೂರ, ಉಪಖಜಾನೆ ಅಧಿಕಾರಿ ವಿನೋದಕುಮಾರ ಡೋಣೂರ, ಪಟ್ಟಣ ಪಂಚಾಯತಿಯ ಸರ್ವಸದಸ್ಯರು, ಪಟ್ಟಣದ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Read More

ಜ.೩೦ರಂದು ೩೦ ಪುಸ್ತಕಗಳ ಲೋಕಾರ್ಪಣೆ | ಬೆರಗು ಪ್ರಶಸ್ತಿ ಪ್ರದಾನ ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು ಪ್ರಕಟಿಸಿದ ೩೦ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜ್ಞಾನಯೋಗಿ ಶ್ರೀಸಿದ್ದೇಶ್ವರ ಶ್ರೀಗಳ ಸಂಸ್ಮರಣಾರ್ಥ ಜ.೩೦ ರಂದು ಕಡಣಿ ಗ್ರಾಮದ ಪಿ.ಬಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಬೆರಗು ಪ್ರಶಸ್ತಿಗಳನ್ನು ಬೆಂಗಳೂರು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರು ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದ ಡಾ.ಸಂಗಮನಾಥ ಲೋಕಾಪೂರ ಅವರಿಗೆ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ದತ್ತಿ ಪುಸ್ತಕ ಪ್ರಶಸ್ತಿ ಪಡೆದ ಕಲಬುರಗಿಯ ಡಾ. ಲಕ್ಷ್ಮಣ ಕೌಂಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಸಿಂದಗಿ ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸುವರು. ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟೊ.ಪೋತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶ್ರೀಶೈಲ ನಾಗರಾಳ ಪುಸ್ತಕ ಪರಿಚಯಿಸಲಿದ್ದಾರೆ,…

Read More