ಬ್ರಹ್ಮದೇವನಮಡು: ಡಾ.ಅಂಬೇಡ್ಕರ್ ಮತ್ತೆ ಮತ್ತೆ ಹುಟ್ಟಿ ಬರುವುದಿಲ್ಲ. ಅವರ ಚಿಂತನೆಗಳು ಮಾತ್ರ ಜೀವಂತವಾಗಿರುತ್ತವೆ ಎಂದು ಶಿಕ್ಷಕ ಎಸ್.ಐ.ಯಳಸಂಗಿ ಹೇಳಿದರು.
ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೩ನೇ ಜನ್ಮದಿನಾಚರಣೆ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.
ದೇಶ ಮೌಢ್ಶತೆಯಿಂದ ಹೊರ ಬರಬೇಕು. ಭಾರತವನ್ನು ಪ್ರೀತಿಸುವುದು ಎಂದರೆ ಮೌಢ್ಶವನ್ನು ವಿರೋಧಿಸಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ವಗ೯ವನ್ನು ಮೀರಿ ಸಮಾಜಕ್ಕೆ ನ್ಶಾಯ ಕೊಡಿಸಿದ್ದಾರೆ. ಅವರ ಚಿಂತನೆಗಳು ಜೀವಂತವಾಗಿರಬೇಕು ಎಂದರೆ ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.
ಕಾಂಗ್ರೆಸ್ ಯುವ ಮುಖಂಡ ಕೆ.ಬಿ.ಮನಗೂಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಮಲ್ಲಿಕಾಜು೯ನ ಮನಗೂಳಿ, ಎಚ್.ಕೆ.ಸೀತನೂರ, ರೇವಣಸಿದ್ದ ಕೋರವಾರ, ಶಿವಪ್ಪ ಕರಿಕಲ್ಲ್, ಮಲ್ಲಿಕಾಜು೯ನ ಯಲಗೋಡ, ಖಾಸಿಂಸಾಬ್ ರಾಜಾಕೋಳ, ನಬಿಸಾಬ ಸೀತನೂರ, ಬಂದೇನಮಾಜ ಸೀತನೂರ, ಡಿ.ಕೆ.ಸೀತನೂರ, ಗೋಲ್ಲಾಳಪ್ಪ ಕರಿಕಲ್ಲ್, ಅಶೋಕ ಕರಿಕಲ್ಲ್, ಹಣಮಂತ ಯಂಟಮಾನ, ಶಿವು ಕೋಟಾರಗಸ್ತಿ, ನಿಂಗಪ್ಪ ಪೂಜಾರಿ, ಕಲ್ಲಪ್ಪ ತೊನಶ್ಶಾಳ, ಮನೋಹರ ದೊಡ್ಡಮನಿ, ಮಲ್ಲು ಕೆಂಭಾವಿ, ಅಮೃತ್ ದೊಡ್ಡಮನಿ, ಹುಚ್ಚಪ್ಪ ಕೆಂಭಾವಿ, ಭೀಮು ಕೆಂಭಾವಿ, ಅಶೋಕ ಯಂಟಮಾನ, ಮುಸ್ತಾಫ್ ಸೀತನೂರ ಸೇರಿದಂತೆ ದಲಿತ ಸಂಘಟನೆ ಪದಾಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

