ಬಸವನಬಾಗೇವಾಡಿ: ಪಟ್ಟಣದ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಮಂಗಳವಾರ ಸಂಭ್ರಮ, ಸಡಗರದಿಂದ ಜರುಗಿತು. ಜಾತ್ರೆಯಂಗವಾಗಿ ಪಲ್ಲಕ್ಕಿ ಉತ್ಸವವು ಬಸವೇಶ್ವರ ದೇವಸ್ಥಾನದ ಬಸವತೀರ್ಥಕ್ಕೆ ಗಂಗಾಸ್ಥಳಕ್ಕೆ ತೆರಳಿದ ನಂತರ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿತು. ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಕೊಡೆಕಲ್ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ಜಾತ್ರೆಯಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು.
ಭಕ್ತರು ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ನೈವೇದ್ಯ, ಕಾಯಿ, ಕರ್ಪೂರ ಅರ್ಪಿಸಿ ಭಕ್ತಿಭಾವ ಅನುಭವಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಲ್ಲಕ್ಕಿ ಉತ್ಸವದಲ್ಲಿ ಈರಯ್ಯ ಕೊಡೆಕಲ್ಲಮಠ ಅವರು ಕೊಡೆಕಲ್ಲ ಬಸವೇಶ್ವರ ವಿರಚಿತ ಕಾಲಜ್ಞಾನ ಮಹಾಗ್ರಂಥ ಪಾರಾಯಣ ಮಾಡಿದರು.
ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಬಸವರಾಜ ಹಾರಿವಾಳ, ಚಂದ್ರಶೇಖರ ಮುರಾಳ, ಶಿವರಾಯ ರಾಯಗೊಂಡ, ಸಂಗು ಮುರಾಳ, ಮುತ್ತು ಹಾರಿವಾಳ, ಸುರೇಶ ಹಾರಿವಾಳ, ಸಂಗಪ್ಪ ರಾಯಗೊಂಡ, ಸುರೇಶ ಬಾಗೇವಾಡಿ, ಗುರಪ್ಪ ಮುರಾಳ, ಸಂಗಪ್ಪ ರಾಯಗೊಂಡ, ಪ್ರಕಾಶ ಮುರಾಳ, ಮಲ್ಲಯ್ಯ ನರಸಲಗಿಮಠ, ಮಹೇಶ ಹಾರಿವಾಳ, ಸೂರಪ್ಪ ಮುರಾಳ,ಸೋಮು ಹಾರಿವಾಳ, ವಿದ್ಯಾ ಮುರಾಳ, ಗೀತಾ ಮುರಾಳ, ಸವಿತಾ ಮುರಾಳ ಇತರರು ಭಾಗವಹಿಸಿದ್ದರು. ಸೋಮವಾರ ರಾತ್ರಿ ಗಂಧ ಏರಿಸುವ ಕಾರ್ಯಕ್ರಮ ಜರುಗಿತು.
Subscribe to Updates
Get the latest creative news from FooBar about art, design and business.
Related Posts
Add A Comment

