ವಿಜಯಪುರ: ವಿಶ್ವಜ್ಞಾನಿ ಎಂದು ವಿಶ್ವ ಮಾನ್ಯತೆ ಪಡೆದ ಡಾ ಬಿ ಆರ್ ಅಂಬೇಡ್ಕರ್ ಅವರು ಯಾವುದೇ ಜಾತಿ, ಮತ ಪಂಥಗಳಿಗೆ ಸೀಮಿತವಾಗದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಎಂ ಪಾಟೀಲ ಹೇಳಿದರು.
ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ವತಿಯಿಂದ ವೃತ್ತಿಪರ ಬಾಲಕರ ವಸತಿ ನಿಲಯ ಸಾಯಿಪಾರ್ಕ್ ನಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಶೋಷಿತ ವರ್ಗದವರಿಗಾಗಿ ದೀನ ದಲಿತರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಸಮಾಜದ ಎಲ್ಲಾ ವರ್ಗಗಳ ನ್ಯಾಯಕ್ಕಾಗಿ ಶ್ರಮಿಸಿದವರು. ಶೈಕ್ಷಣಿಕ,ಆರ್ಥಿಕ, ಸಾಮಾಜಿಕವಾಗಿ, ಸಮಾನತೆಗಾಗಿ ಹೋರಾಡಿದ ಮಹಾ ನಾಯಕರು. ಮಹಿಳೆಯರ ಬಗ್ಗೆ ವಿಶೇಷವಾದಂತ ಸಾಮಾಜಿಕ ಸ್ಥಾನಮಾನಕ್ಕಾಗಿ ಹೋರಾಡಿದ ಧೀಮಂತ ನಾಯಕ ಹಿಂದುಳಿದ ವರ್ಗಗಳ ಜನರ ಏಳಿಗೆಗಾಗಿ ಶ್ರಮಿಸಿದರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಯಿ ಪಾರ್ಕ್ ವಸತಿ ನಿಲಯ ಪಾಲಕ ಸದಾನಂದ ಬಡಿಗೇರ ಮಾತನಾಡಿ, ಅಂಬೇಡ್ಕರ್ ಅವರು ಸಮಾಜದ ಕಟ್ಟ ಕಡೆ ವ್ಯಕ್ತಿಗೂ ಸಾಮಾಜಿಕ ಸ್ಥಾನಮಾನ ಕಲ್ಪಿಸಿಕೊಟ್ಟರು. ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಶಾಂತಿಯುತವಾಗಿ ಬಾಳುವಂತ ಅವಕಾಶ ಕಲ್ಪಿಸಿಕೊಟ್ಟವರು. ಅವರ ಆದರ್ಶಗಳನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಿಕೊಂಡು ಹೋಗಬೇಕು. ಅಂಬೇಡ್ಕರ್ ಅವರಂತೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಯುಗದಲ್ಲಿ ಶ್ರಮವಹಿಸಿ ಸಾಧನೆಯ ಮೆಟ್ಟಿಲನ್ನು ಹತ್ತಬೇಕು. ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂದು ಹೇಳಿದರು
ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ವಿಶ್ವಾಸ್ ಕೊರವಾರ ಮತ್ತು ಹನುಮಂತ ಮಣೂರ್ ರವರು ಮಾತನಾಡಿ, ಅಂಬೇಡ್ಕರ್ ಅವರ ಸಮಗ್ರ ಜೀವನವೇ ಆದರ್ಶ, ಮಾನವೀಯ ಮೌಲ್ಯ ಶಿಕ್ಷಣ, ಸಮಾನತೆಯ ಪ್ರತಿಪಾದನೆಯ ಪ್ರಮುಖ ಹರಿಕಾರಾಗಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲಿದ್ದ ಅರವಿಂದ ಲಂಬು, ಕೆ ಬಿ ಕೋರೆ, ಬಸವರಾಜ ಸಾವಳಗಿ, ಎ.ಬಿ ಕಲಶೆಟ್ಟಿ, ಎಂ ಎಸ್ ವಾಲಿಕಾರ, ವೀರೇಶ್ ಹೊನವಾಡ, ಯುವ ಸಾಹಿತಿ ಸಾಯಬಣ್ಣ ಮಾದರ, ಉಪಸ್ಥಿತರಿದ್ದರು.
ಜಯಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಹಲವು ಕ್ರೀಡಾಕೂಟಗಳನ್ನು ಆಯೋಜಿಸಿದ್ದು ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಪಿಯುಸಿಯಲ್ಲಿ ಜಿಲ್ಲೆಗೆ ಉತ್ತಮ ಸಾಧನೆ ಮಾಡಿದ ವಸತಿ ನಿಲಯ ವಿದ್ಯಾರ್ಥಿಯಾದ ಮಲ್ಲಪ್ಪ ಬಸವರಾಜ ಮಾದರ ವಿದ್ಯಾರ್ಥಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು
ಬಾಬು ಗೋಗಿ ನಾಗೇಶ್ ಲೋಹಾರ್ ಮುಂತಾದ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

