Author: editor.udayarashmi@gmail.com

ಮಹಾನಗರ ಪಾಲಿಕೆ ಸಾಮಾನ್ಯ ಸಭೆ | ಉಸ್ತವಾರಿ ಸಚಿವ ಡಾ.ಎಂ.ಬಿ.ಪಾಟೀಲ ಖಡಕ್ ಸೂಚನೆ ವಿಜಯಪುರ: ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ತತಕ್ಷಣ ಕಾರ್ಯ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಕಟ್ಟುನಿಟ್ಟಾಗಿ ಹೇಳಿದರು.ಸೋಮವಾರ ನಗರದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನಗರಕ್ಕೆ ೮೪ ಎಂ.ಎಲ್.ಡಿ ನೀರು ಅವಶ್ಯಕತೆ ಇದ್ದು, ಸದ್ಯ ನಮಗೆ ೫೦ ಎಂ.ಎಲ್.ಡಿ ನೀರು ಲಭ್ಯವಾಗುತ್ತಿದೆ. ಆದ್ದರಿಂದ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಖಡಕ್ ಸೂಚನೆ ನೀಡಿದರು.ನಗರದಲ್ಲಿರುವ ಹಲವಾರು ಐತಿಹಾಸಿಕ ಭಾವಿಗಳನ್ನು ಈಗಾಗಲೇ ಸ್ವಚ್ಚಗೊಳಿಸಲು ಕ್ರಮವಹಿಸಿದ್ದು, ಈ ಬಾವಿಗಳಲ್ಲಿರುವ ನೀರನ್ನು ಇತರ ಗೃಹೋಪಯೋಗಿ ಉಪಯೋಗಗಳಿಗೆ ಬಳಕೆ ಮಾಡಿದಲ್ಲಿ ಕುಡಿಯುವ ನೀರಿನ ಒತ್ತಡ ತಗ್ಗಿಸಬಹುದಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಿದ್ದು, ಈಗಾಗಲೇ ಕೊರೆಯಿಸಿದ ಬೋರ್‌ವೆಲ್‌ಗಳಿಗೆ ಶೀಘ್ರವಾಗಿ ಮೋಟಾರ್‌ನ್ನು ಅಳವಡಿಸಿ ನೀರನ್ನು ಬಳಸುವಂತೆ…

Read More

ಯಡ್ರಾಮಿ: ನಾಡಿನ ಖ್ಯಾತ ಸಂಶೋಧಕ-ಸಾಹಿತಿ ಡಿ.ಎನ್.ಅಕ್ಕಿ ಗೋಗಿ ಅವರ ಸಾಹಿತ್ಯಿಕ ಸೇವೆಯನ್ನು ಗುರುತಿಸಿ ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಸಾರಥ್ಯದ ನಮ್ಮ ಕರ್ನಾಟಕ ಸೇನೆ ಬೆಂಗಳೂರಿನ ಅರಮನೆ ಗಾಯತ್ರಿ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದ.ರಾ.ಬೇಂದ್ರೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಲಾಯಿತು.ಸಂಗಮ ಹರ್ಷ: ಡಿ.ಎನ್.ಅಕ್ಕಿ ಅವರು ದ.ರಾ.ಬೇಂದ್ರೆ ಪ್ರಶಸ್ತಿ ಸ್ವೀಕರಿಸಿದ ಈ ಸಂದರ್ಭದಲ್ಲಿ ಯಡ್ರಾಮಿ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ನ ಅಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮಿಗಳು, ಪ್ರಕಾಶ ಸಾಹು ಬೆಲ್ಲದ, ಪ್ರಶಾಂತ ಅಂಗಡಿ, ಆರ್.ಜಿ.ಪುರಾಣಿಕ, ಬಸವರಾಜ ಅರಕೇರಿ, ಸಿದ್ದು ಹೂಗಾರ, ಪತ್ರಕರ್ತ ಮಲ್ಲಿಕಾರ್ಜುನ, ಲೇಖಕ ಕಿಶೋರ್ ಕುಮಾರ್, ಪತ್ರಕರ್ತ ವಿಜಯೇಂದ್ರ ಕುಲಕರ್ಣಿ, ಇತರರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣದ ಈರಕಾರ ಮುತ್ಯಾನ ದೇವಸ್ಥಾನದಲ್ಲಿ ಜ.೩೦ ರಂದು ಬೆಳಗ್ಗೆ ೧೧ ಗಂಟೆಗೆ ತಾಲೂಕಿನ ಬಂಜಾರಾ ಸಮಾಜದ ಜನಪ್ರತಿನಿಧಿಗಳ, ಮುಖಂಡರ ಸಭೆ ಕರೆಯಲಾಗಿದೆ.ಈ ಸಭೆಯಲ್ಲಿ ಸಂತ ಸೇವಾಲಾಲ ಅವರ ಜಯಂತಿ ಆಚರಣೆ, ಸಮಾಜ ಸಂಘಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನಪ್ರತಿನಿಧಿಗಳು, ಮುಖಂಡರು, ಮಾಜಿ ಜಿಪಂ, ತಾಪಂ ಸದಸ್ಯರು,ಯುವಕರು, ಮಹಿಳಾ ಪ್ರತಿನಿಧಿಗಳು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಪುರಸಭೆ ಸದಸ್ಯ ನೀಲಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಪ್ರಥಮ ಸ್ಕಂದ ಭಾಗವತ ಮೋದ ಪ್ರಯುಕ್ತ ಸೌರಭ ಸಾಹಿತ್ಯ ಪರೀಕ್ಷಾ ಉದ್ಘಾಟನಾ ಸಮಾರಂಭ ಜರುಗಿತು.ಸೌರಭ ದಾಸ ಸಾಹಿತ್ಯದ ವಿದ್ಯಾಲಯದ ಅರ್ಧ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಉದ್ಘಾಟನೆ ಈ ಕಾರ್ಯಕ್ರಮವು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅನುಗ್ರಹ ಹಾಗೂ ಆಶೀರ್ವಾದದಿಂದ ಜರುಗಿತು.ಕಾರ್ಯಕ್ರಮದ ಸಾನಿಧ್ಯವನ್ನು ಪ್ರಮೋದಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆನಂದ ಜೋಶಿಯವರು ದಾಸ ಸಾಹಿತ್ಯದ ಸವಿಸ್ತಾರ ವಿವರಣೆಯನ್ನು ಮಾಡಿ ಸಾಹಿತ್ಯದ ಘನತೆಯನ್ನು ತಿಳಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಬಸವನಬಾಗೇವಾಡಿ ಸಂಚಾಲಕಿ ಜಯಶ್ರೀ ಜಯತೀರ್ಥ ವಹಿಸಿದ್ದರು. ವಿಜಯಪುರ ಜಿಲ್ಲಾ ಗ್ರಾಮೀಣ ಸಂಚಾಲಕಿ ವಿದ್ಯಾ ಕುಲಕರ್ಣಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲತೆಗಳನ್ನು ಕಲ್ಪಿಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಅನೇಕ ದಾಸರ ಹಾಗೂ ಶ್ರೀರಾಮಚಂದ್ರ ದೇವರ ಫಲಕಗಳನ್ನು ಅಲಂಕರಿಸಿ ದಾಸ ಸಾಹಿತ್ಯದ ವೈಭವವನ್ನು ನಿರೂಪಿಸುವಂತೆ ಸುಸಜ್ಜಿತಗೊಳಿಸಲಾಗಿತ್ತು.ಕೃಷ್ಣಾಜಿ ಕುಲಕರ್ಣಿ ,ರಾಘವೇಂದ್ರ ಆಶ್ರೀತ, ಪಿ.ಸಿ. ಕುಲಕರ್ಣಿ, ವಸಂತಆಚಾರ್ಯ ಇಂಗಳೇಶ್ವರ ಇತರರು ಇದ್ದರು.ಗೋವಿಂದರಾಜ್ ದೇಶಪಾಂಡೆ, ಅನಂತ ಕುಲಕರ್ಣಿ ನಿರೂಪಿಸಿದರು.

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ಬೆಂಗಳೂರಿನಲ್ಲಿ ಶುಕ್ರವಾರ ಕಂದಾಯ ಇಲಾಖೆಯ ಆಯುಕ್ತರಾದ ಪಮ್ಮಲು ಸುನೀಲಕುಮಾರ ಅವರಿಗೆ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಆಯುಕ್ತರೊಂದಿಗೆ ಮಾತನಾಡಿದ ಅವರು, ರೈತ ಬಾಂಧವರ ಪ್ರಮುಖ ಕೆಲಸಗಳಾದ ಟ್ರಿಬ್ಯುನಲ್ ಪ್ರಕರಣ, ಬಿನ್ ಶೇತ್ಕಿ, ಪಹಣಿ ತಿದ್ದುಪಡಿ, ಸರ್ಕಾರ ನಿರ್ಭಂದನೆ ಸೇರಿದಂತೆ ಹಲವಾರು ಕೆಲಸಗಳು ಕಂದಾಯ ಉಪವಿಭಾಗಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುವದರಿಂದಾಗಿ ದಿನನಿತ್ಯ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಬಿಟ್ಟು ವಿಜಯಪುರದಲ್ಲಿರುವ ಕಂದಾಯ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಇದರಿಂದಾಗಿ ರೈತ ಬಾಂಧವರಿಗೆ ತೊಂದರೆಯಾಗುತ್ತಿದೆ. ಬಸವನಬಾಗೇವಾಡಿಯು ಮಧ್ಯವರ್ತಿ ಕೇಂದ್ರ ಸ್ಥಾನದಲ್ಲಿರುವುದರಿಂದಾಗಿ ಇಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಿದರೆ ಬಸವನಬಾಗೇವಾಡಿ, ಮುದ್ದೇಬಿಹಾಳ ಸೇರಿದಂತೆ ಇದರ ಸುತ್ತಮುತ್ತ ಇರುವ ತಾಲೂಕಿನ ರೈತ ಬಾಂಧವರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಹೊನಕೆರೆಪ್ಪ ತೆಲಗಿ, ಪ್ರಭುಗೌಡ ಪೊತರೆಡ್ಡಿ, ಚಂದ್ರಾಮ ಹಿಪ್ಪಲಿ, ಪಾಂಡು ಹ್ಯಾಟಿ, ಜಯಪ್ರಕಾಶ…

Read More

ಮೋರಟಗಿ: ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣದಲ್ಲಿ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಸಾಹಿತಿ, ಉಪನ್ಯಾಸಕ ಶ್ರೀಕಾಂತ ಕೆಂಧೂಳಿ ಹೇಳಿದರು.ಗ್ರಾಮದ ಕಲ್ಪವೃಕ್ಷ ಕಾಲೇಜಿನಲ್ಲಿ ಹಮ್ಮಿಕೊಂಡ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಮನ್ವಯಾಧಿಕಾರಿ ಎಸ್.ವ್ಹಿ. ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಅಭ್ಯಾಸ ಮಾಡಿ, ಉನ್ನತ ಹುದ್ದೆಯ ಅಧಿಕಾರಿಗಳಾಗಿ ತಾವು ಕಲಿತ ಶಾಲೆಗೆ ಹೆಸರು ತರುವಂತ ಕಾರ್ಯವಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ಸಂಯೊಜಕ ಎಸ, ಎಸ್ದ.ನಿಗಡಿ, ಪ್ರಾಂಶುಪಾಲ ಎ,ಬಿ,ಸಿಂದಗಿ, ಸಿದ್ದು ಕೆರಿಗೊಂಡ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಕಲ್ಪವೃಕ್ಷ ಆಡಳಿತ ಮಂಡಳಿ ಉಪಸ್ಥತರಿದ್ದರು.

Read More

ಸಿಂದಗಿ: ಶಿಕ್ಷಣ ಎನ್ನುವದು ಒಂದು ಸಂಘಟನಾ ಶಕ್ತಿ. ಅದಕ್ಕೆ ಒಗ್ಗೂಡಿಸುವ ಶಕ್ತಿ ಇರುತ್ತದೆ ಎಂದು ನಿವೃತ್ತ ಆಯುಕ್ತ ಎಸ್.ಜಿ. ಬಿರಾದಾರ ಹೇಳಿದರು.ಪಟ್ಟಣದ ಆಲಮೇಲ ರಸ್ತೆಯ ಹೊರ ವಲಯದಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲ ಶಿಕ್ಷಣದಿಂದ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜದೊಳಗೆ ಎಲ್ಲರೊಳಗೆ ಒಂದಾಗಿ ಬದುಕಬೇಕು. ಅಸಾಧ್ಯವೆಂಬುದು ತೊರೆದು ಸಾಧ್ಯ ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಯ ಬದುಕು ಹಸನಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಾದವರು ಕಷ್ಟಪಟ್ಟು ಓದಿ ಯಶಸ್ಸು ಗಳಿಸಬೇಕೆಂದು ಸಲಹೆ ನೀಡಿದರು.ಅತಿಥಿಗಳಾದ ಎನ್.ಎಸ್.ಬಿರಾದಾರ, ಶರತ್ ನಾಡಗೌಡ ಮಾತನಾಡಿದರು.ಈ ವೇಳೆ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದ ೨೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷಕುಮಾರ ಕರ್ಜಗಿ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಪಿ.ಇ.ಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಯ್.ಬಿ. ಬಿರಾದಾರ, ಕೆ.ಎಚ್.ಸೋಮಾಪೂರ, ಪ್ರಾಚಾರ್ಯ ಆರ್.ಬಿ. ಗೋಡಕರ, ಜಿ.ಎಸ್.ಕಡಣಿ,…

Read More

ದೇವರಹಿಪ್ಪರಗಿ: ಮಧ್ಯಂತರ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ರೈತಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಆಗಮಿಸಿ, ಸರಕಾರದ ವಿರುದ್ಧ ಪ್ರತಿಭಟನೆ ಕೈಗೊಂಡರು.ಈ ಸಂದರ್ಭದಲ್ಲಿ ತಾಲ್ಲೂಕು ರೈತಸಂಘದ ಅಧ್ಯಕ್ಷ ಈರಪ್ಪ ಕುಳೇಕುಮಟಗಿ ಹಾಗೂ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಬರಗಾಲ ಬವಣೆಯಿಂದ ಇದ್ದ ಬೆಳೆಗಳೆಲ್ಲ ಒಣಗಿ ಫಸಲು ಬಾರದಂತಾಗಿದೆ. ಸರಕಾರ ಬರಗಾಲ ಎಂದು ಘೋಷಣೆ ಮಾಡಿದರೂ ರೈತರ ಖಾತೆಗೆ ಒಂದು ಪೈಸಾ ಹಣ ಜಮಾ ಮಾಡಿಲ್ಲ. ಎಲ್ಲಿಯೂ ಬರ ಪರಿಹಾರ ಕಾರ್ಯ ಪ್ರಾರಂಭಿಸಿಲ್ಲ. ಕನಿಷ್ಠ ಬದುಕಿಗೋಸ್ಕರವಾದರೂ ಬರಪರಿಹಾರ ನೀಡಬೇಕಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ವಿಷಯದಲ್ಲಿ ಚೆಲ್ಲಾಟವಾಡುತ್ತಿವೆ. ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬರಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತರ ಜಮೀನುಗಳಿಗೆ ಹೋಗುವ ದಾರಿ ಸಮಸ್ಯೆ ಇತ್ಯರ್ಥ ಪಡಿಸಬೇಕು.ಈ…

Read More

ಇಂಡಿ: ಇಂದು ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳನ್ನು ಅಕ್ಷರವಂತರಾಗಿ ಮಾಡಿದಾಗ ಮಾತ್ರ ದೇಶದ ಹಾಗೂ ಸಮಾಜದ ಪ್ರಗತಿಗೆ ಸಾಧ್ಯ ಎಂದು ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ೧೫ನೇಯ ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ನಗರದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.ಸಾನಿಧ್ಯ ವಹಿಸಿದ ಅಭಿನವ ರಾಚೋಟೇಶ್ವರ ಶ್ರೀಗಳು ಮಾತನಾಡಿದರು.ವೇದಿಕೆಯ ಮೇಲೆ ದಯಾನಂದ ಹಿರೇಮಠ, ಸಂಸ್ಥೆಯ ಅಧ್ಯಕ್ಷ ಸಂತೋಷ ಗೌಳಿ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಯ ಅಪ್ತಾಗಿರಿ, ಎನ್ ಎಸ್.ಕಟ್ಟಿಮನಿ, ಆಯ್,ಜಿ ಆಳೂರ, ಪಂಡಿತ ಬಿರಾದಾರ, ಮುಖ್ಯ ಗುರು ಎ.ಎಸ್.ಬೋರಾಮಣಿ, ಮುಖ್ಯ ಗುರುಮಾತೆಯರಾದ ಜಯಶ್ರೀ.ಟಿ.ಗೌಡ, ಕುಮಾರಿ ಭವಾನಿ ಗೌಡ, ಶ್ರೀದರ ಹಿಪ್ಪರಗಿ, ಸಿದ್ದಪ್ಪ ಗುನ್ನಾಪೂರ, ನಿರ್ದೇಶಕರಾದ ನಟರಾಜ್ ಗೌಳಿ, ಬಸವರಾಜ ನಾವಿ, ಧೂಳಪ ನಾವಿ, ಶಿವಾನಂದ ನಾವಿ, ನಾರಾಯಣ ರಾಠೋಡ, ಸಾಯಬಣ್ಣ ನಾವಿ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Read More

ಇಂಡಿ: ಕನ್ನಡವೇ ಸತ್ಯ-ಕನ್ನಡವೇ ನಿತ್ಯ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಮುಂತಾದ ಕನ್ನಡ ಜಯಘೋಷಗಳೊಂದಿಗೆ ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕನ್ನಡದ ಮನಸ್ಸುಗಳು ಕನ್ನಡ ರಥಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದವು.ರವಿವಾರ ಸಂಜೆ ಗ್ರಾಮದಲ್ಲಿ ತಾಲ್ಲೂಕು ಆಡಳಿತ ವರ್ಗ,ಗ್ರಾಮ ಪಂಚಾಯಿತಿ, ಹಿರೇರೂಗಿ ಕ್ಲಸ್ಟರ್ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಿ,ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆ ಮಾಡಲಾಯಿತು.ವಿವಿಧ ಮಹನೀಯರ ವೇಷಭೂಷಣ ತೊಟ್ಟ ಶಾಲಾ ಮಕ್ಕಳು, ಕುಂಭ-ಕಳಸ-ಆರತಿ ಹೊತ್ತ ಮಹಿಳೆಯರು, ಡೊಳ್ಳು ಕುಣಿತ, ಕರಡಿ ಮಜಲು, ಮಹಿಳೆಯರ ಕೋಲಾಟ ಮೆರವಣಿಗೆಯ ವಿಶೇಷವಾಗಿತ್ತು. ಕನ್ನಡ ಭಾವುಟ ಹಾರಾಡಿಸುತ್ತಾ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸುತ್ತಾ, ರಸ್ತೆಯುದ್ಧಕ್ಕೂ ಕನ್ನಡ ಪರ ಘೋಷಣೆಗಳನ್ನು ಮೊಳಗಿಸಿದರು.ತಾಲೂಕ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಾಬು ರಾಠೋಡ ಮಾತನಾಡಿದರು.ಹಿರೇರೂಗಿ ಪಿಡಿಓ ಬಸವರಾಜ ಬಬಲಾದ, ಶಿಕ್ಷಕ ಸಂತೋಷ ಬಂಡೆ ಮಾತನಾಡಿದರು.ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡಗಡ್ಡಿ, ಕಂದಾಯ ನಿರೀಕ್ಷಕ ಎಚ್ ಎಸ್ ಗುನ್ನಾಪುರ, ಗ್ರಾಮ ಆಡಳಿತಾಧಿಕಾರಿ ಶ್ರೀಶೈಲ ಹಂಚಿನಾಳ, ಯುವ ಮುಖಂಡರಾದ ಪರಶುರಾಮ ಹೊಸಮನಿ, ಸಂತೋಷ ಕೋಟಗೊಂಡ,…

Read More