ವಿಜಯಪುರ: ದೇಶಕ್ಕೆ ಮೋದಿಯವರು ಬಿಟ್ಟರೆ ಪರ್ಯಾಯ ಇಲ್ಲ ಎಂಬುವುದು ಜನರಿಗೆ ತಿಳಿದಿದ್ದು, ಪ್ರತಿಯೊಬ್ಬರ ತಲೆಯಲ್ಲಿ ಮೋದಿ ಮತ್ತು ಬಿಜೆಪಿ ಪಕ್ಷ ಇದೆ. ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲಹೆ ನೀಡಿದರು.
ನಗರದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಸಂಜೆ ಬಿಜೆಪಿ ನಗರ ಮಂಡಲ ವತಿಯಿಂದ ನಡೆದ ಅಟಲ್ ಬಿಹಾರಿ ವಾಜಪೇಯಿ ಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದ ಅವರು, ಮೊದಲು ತಲೆಯಿಂದ ಜಾತಿ ಕಿತ್ತೊಗೆಯಿರಿ. ಮೋದಿಯವರು ಬಂದರೆ ಸನಾತನ ಧರ್ಮ ಉಳಿಯುತ್ತದೆ. ನಮ್ಮ ಜಾತಿಗಳು ಇರುತ್ತದೆ. ಎಲ್ಲ ಸಮುದಾಯದವರು ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದರು.
ನಗರದಲ್ಲಿ ಒಳ್ಳೆಯ ಮಹಾನಗರ ಪಾಲಿಕೆ ಸದಸ್ಯರಿದ್ದಾರೆ. ಪ್ರಾಮಾಣಿಕತೆವುಳ್ಳ ಪದಾಧಿಕಾರಿಗಳ ಒಳ್ಳೆಯ ತಂಡವಿದೆ. ವಾರ್ಡಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ನಮ್ಮ ಸರ್ಕಾರದ ಸಾಧನೆ ತಿಳಿಸಿ, ದೇಶದ ಹಿತದೃಷ್ಟಿಯಿಂದ ತಪ್ಪದೆ ಬಿಜೆಪಿಗೆ ಮತದಾನ ಮಾಡಲು ತಿಳಿಸಬೇಕು. ಎಲ್ಲರೂ ಸೇರಿ ಮತದಾನ ಪ್ರಮಾಣ ಹೆಚ್ಚಳ ಮಾಡಿದರೆ, ನಗರದಲ್ಲಿ ಕನಿಷ್ಠ ೨೫ ಸಾವಿರ ಲೀಡ್ ದೊರೆಯುತ್ತದೆ. ನಿರ್ಲಕ್ಷ್ಯ ಮಾಡಿದರೆ ೫ ವರ್ಷ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನಾನು ದೊಡ್ಡ ವ್ಯಕ್ತಿ ಸಲ್ಲ. ನಿಮ್ಮೊಳಗೆ ಸಾಮಾನ್ಯನಾಗಿದ್ದು, ಇನ್ನೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಕೈಯತ್ತಲು ಹಾಗೂ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಿ. ನಾಮಪತ್ರ ಸಲ್ಲಿಕೆ ಅಂಗವಾಗಿ ನಡೆದ ರೋಡ್ ಶೋ ಮತ್ತು ಬಹಿರಂಗ ಸಭೆಯಲ್ಲಿ ಸೇರಿರುವ ಜನಸ್ತೋಮ ನನ್ನ ಇಡೀ ರಾಜಕೀಯ ಜೀವನದಲ್ಲಿ ನೋಡಿಲ್ಲ. ನಿರೀಕ್ಷೆ ಮೀರಿ ಭಾಗವಹಿಸುವ ಮೂಲಕ ಜನರು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ ಎಂದರು.
ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಜವಾಹಾರ ಘೋಸಾವಿ, ಕುಮಾರ ಗಡಗಿ, ಸ್ವಪ್ನಾ ಕಣಮುಚನಾಳ, ಮುಖಂಡರಾದ ಪರಶುರಾಮ ರಜಪುತ, ವಿವೇಕಾನಂದ ಡಬ್ಬಿ, ಪ್ರಕಾಶ ಅಕ್ಕಲಕೋಟ, ಬಸವರಾಜ ಬೈಚಬಾಳ, ಮಳುಗೌಡ ಪಾಟೀಲ, ಬಸವರಾಜ ಕೋರಿ, ಮಹೇಶ ಒಡೆಯರ, ರಾಚು ಬಿರಾದಾರ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

