ಇಂಡಿ: ನ್ಯಾಯ, ನೀತಿ,ಧರ್ಮ, ಸತ್ಯ, ಪ್ರಾಮಾಣಿಕತೆ, ಮಾನವೀಯತೆ ಇವೆಲ್ಲದರ ಪ್ರತೀಕ ಶ್ರೀ ರಾಮರವರು ಎಂದು ಜೈನಾಪುರ ಮಠದ ಶ್ರೀ ರೇಣುಕಾಶಿವಾಚಾರ್ಯರರು ಹೇಳಿದರು.
ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಶ್ರೀ ರಾಮ ಸಮಿತಿಯಿಂದ ನಡೆದ ಶ್ರೀ ರಾಮ ನವಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗಾವಿ ವಿಭಾಗದ ವಿಎಚ್‌ಪಿ ಪ್ರಮುಖ ಶ್ರೀಮಂತ ದುದ್ದಗಿ ಮಾತನಾಡಿ ಶ್ರೀ ರಾಮನನ್ನು ರಾಮಾಯಣದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಗಳು ಓರ್ವ ಸಾಮಾನ್ಯ ಮನುಷ್ಯನಾಗಿಯೇ ಚಿತ್ರಿಸಿ ಸಾರ್ಥಕ ಬದುಕಿನ ಅವರ ನಡುವಳಿಕೆಯಿಂದಲೇ ದೇವನನ್ನಾಗಿಸಿದ್ದಾರೆ ಎಂದರು.
ಡಾ.ಕುಮಾರಗೌಡ ಪಾಟೀಲ ಮಾತನಾಡಿ, ಸವೋತ್ತಮನೆಂದರೆ, ಪರಿಪೂರ್ಣ, ಶ್ರೇಷ್ಠ ಮನುಷ್ಯನೆಂದರೆ, ಮನುಷ್ಯನಿಂದಲೇ ದೇವನಾದವನು. ಅವರೇ ರಾಮ ಎಂದರು.
ವಿಎಚ್‌ಪಿ ಮುಖಂಡ ಪ್ರಕಾಶ ಬಿರಾದಾರ ಮಾತನಾಡಿದರು.
ಮಲ್ಲಿಕಾರ್ಜುನ ಪವಾರ, ವಿಠ್ಠಲ ಹೊಸಮನಿ, ನೇತಾಜಿ ಪವಾರ, ಗೋವಿಂದ ಹಿಬಾರೆ, ಮಹೇಶ ಪೂಜಾರಿ, ಶಿವರಾಜ ಬಿರಾದಾರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

