Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕೃಷ್ಣಾನದಿ ಮತ್ತು ಆಲಿಮಟ್ಟಿ ಜಲಾಶಯಕ್ಕೆ ಸಂಬಂಧಿಸಿದಂತೆ ಜಲಾಶಯದ ಎತ್ತರ, ನಷ್ಟಗೊಂಡ ರೈತರಿಗೆ ಪರಿಹಾರ, ಪುರ್ನವಸತಿ, ಬೆಳೆ ಪರಿಹಾರ, ಬರಗಾಲ ಪರಿಹಾರ, ಸೇರಿದಂತೆ ಹಲವಾರು ರೈತರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಇಂದು ನಾವೆಲ್ಲರೂ ಸೇರಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಕುಬಕಡ್ಡಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.೨೦೨೪ ನೇ ಸಾಲಿನ ಸಮಗ್ರ ಹೋರಾಟ ಹಾಗೂ ವರ್ಷವಿಡಿ ಹೋರಾಟದ ರೂಪರೇಷಗಳನ್ನು ಸಿದ್ದಪಡಿಸಲು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರ್ಷವಿಡಿ ಕಾರ್ಯಕ್ರಮದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಈ ಜಿಲ್ಲೆಯಲ್ಲಿ ರೈತ ಸಂಘ ಬಲಿಷ್ಠಗೊಳ್ಳಬೇಕಾದರೆ ವರ್ಷವಿಡಿ ಸಂಘಟನೆ ಹಾಗೂ ಹೋರಾಟ ಹಾಗೂ ತರಬೇತಿ ಅವಶ್ಯಕ ಎಂದು ಹೇಳಿದರು.ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡುತ್ತಾ ಆಲಿಮಟ್ಟಿ ಜಲಾಶಯ ಎತ್ತರಗೊಂಡರೆ ಮಾತ್ರ ವಿಜಯಪುರ ಜಿಲ್ಲೆಯ ಕಟ್ಟಕಡೆಯ ಹಳ್ಳಿಯ ಕೊನೆಯ ರೈತನಿಗೂ ನೀರು ಸಿಗುತ್ತದೆ, ಆ ನೀರು ಸಿಗಬೇಕಾದರೆ…
ವಿಜಯಪುರ: ಜಿಲ್ಲಾಡಳಿತದ ವತಿಯಿಂದ ವಿಜಯಪುರ ನಗರದ ಗಾಂಧಿ ಭವನದಲ್ಲಿ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನದಲ್ಲಿ ಹಮ್ಮಿಕೊಂಡ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿಭವನವು ಸೆಪ್ಟಂಬರ್ ೩೦ಕ್ಕೆ ಉದ್ಘಾಟನೆಗೊಂಡು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿಯವರ ತತ್ವಾದರ್ಶದ ಅಂಶಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.ಗಾಂಧಿಭವನವನ್ನು ಪ್ರೇರಣಾ ತಾಣವನ್ನಾಗಿಸಲು ರೂಪುರೇಷೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಗಾಂಧಿಭವನಕ್ಕೆ ಭೇಟಿ ನೀಡಿ ಗಾಂಧೀಜಿಯವರು ಸ್ವಾತಂತ್ರ‍್ಯಕ್ಕಾಗಿನ ಹೋರಾಟಗಳು, ಸತ್ಯ ಅಹಿಂಸೆ ಮಾರ್ಗಗಳ ಹಲವು ವಿಚಾರಗಳನ್ನೊಳಗೊಂಡ ವಿಷಯಗಳು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದ್ದು, ಗಾಂಧಿಭವನಕ್ಕೆ ಭೇಟಿ ನೀಡುವ ಮೂಲಕ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳ ಕುರಿತು ಅರಿತುಕೊಳ್ಳಬೇಕು. ಇಂದಿನ ಪೀಳಿಗೆ ಗಾಂಧೀಜಿ ಅವರ ಚಿಂತನೆ ಅವರ ವಿಚಾರಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ್ ಅವರು ಮಾತನಾಡಿ, ಬಾಪೂಜಿ ಅವರ ಸತ್ಯ…
ವಿಜಯಪುರ: ಅಂಬೇಡ್ಕರ್ ಜೀವನ ಸಾಧನೆ ಸಂದೇಶಗಳನ್ನು ಪ್ರತಿಯೊಬ್ಬರಿಗೂ ಅರಿಯಬೇಕಾಗಿದೆ ಆ ನಿಟ್ಟಿನಲ್ಲಿ ಪ್ರತಿಯೊಂದು ಗ್ರಾಮಕ್ಕೂ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಭಾರತ ದೇಶದ ಸಂವಿಧಾನದ ಹಿರಿಮೆಯನ್ನು ಪ್ರತಿ ನಾಗರಿಕರು ತಿಳಿದುಕೊಳ್ಳಲು ಇದೊಂದು ಸದಾವಕಾಶವಾಗಿದೆ ಎಂದು ವಿಜಯಪುರ ಸಮಾಜ ಕಲ್ಯಾಣ ನಿರ್ದೇಶಕ ಪುಂಡಲೀಕ ಮಾನವರ ಹೇಳಿದರು.ಮಂಗಳವಾರ ವಿಜಯಪುರ ಬೆಂಗಳೂರು ಬೈಪಾಸ್ ಬಳಿ ಬೈಕ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ರು ಶೋಷಿತರು ದಲಿತರು ದೀನರ ಬದುಕು ಹಸನಾಗಿಸಲು ಶ್ರಮಿಸಿದ ಮಹಾನುಭಾವರು ಎಂದು ಹೇಳಿದರು.ಬೆಂಗಳೂರು ಬೈಪಾಸಿನಿಂದ ಹೊರಟ ಬೈಕ್ ಜಾಥ ಸಂವಿಧಾನದ ಆಸೆ-ಆಶಯಗಳ ಘೋಷಣೆ ಮೂಲಕ ಹಿಟ್ನಳ್ಳಿ ಗ್ರಾಮಕ್ಕೆ ತಲುಪಿತು. ಗ್ರಾಮ ಪಂಚಾಯತಿ ಅಧ್ಯಕ್ಷ ರವಿಕುಮಾರ್ ಕಡಿಮನಿ ಮತ್ತು ಸದಸ್ಯರು, ಊರಿನ ಗಣ್ಯರು ಜಾಥವನ್ನು ಅದ್ದೂರಿಯಾಗಿ ಸ್ವಾಗತಿಸಿದರು.ಹಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಉಪ ನಿರ್ದೇಶಕ ಎಸ್ ಎಂ ಪಾಟೀಲ್ ಅವರು, ಅಂಬೇಡ್ಕರ್ ಅವರ ಹಚ್ಚಿದ ದೀಪ ಮನೆ…
ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ಸಿಟಿಎಸ್ ನಂ ೨೧೪೨/೩ ಮತ್ತು ೨೧೪೨/೪ ಜಾಗೆಯಲ್ಲಿ ಕಾನೂನು ಬಾಹಿರವಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಅದನ್ನು ತಡೆಹಿಡಿಯುವಂತೆ ಆಗ್ರಹಿಸಿ ವಿವಾದಿತ ಜಾಗೆಯ ಬಳಿಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಗೆ ಮನವಿ ಪತ್ರ ಸಲ್ಲಿಸಿದರು.ವಿವಾದಿತ ಕಟ್ಟಡ ನಿರ್ಮಿಸುತ್ತಿರುವ ಪ್ಲಾಟ್‌ಗಳು ಗೃಹ ಬಳಕೆಗಾಗಿ ಅಂತಾ ಆದೇಶವಾಗಿವೆ. ಆದರೆ ಸದರಿ ಪ್ಲಾಟ್‌ಗಳಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಅಲದೇ ಇಲ್ಲಿ ಸಾರ್ವಜನಿಕ ರಸ್ತೆಗಳನ್ನೂ ಸಹ ಅತಿಕ್ರಮಣ ಮಾಡಲಾಗದೆ. ಇಲ್ಲಿ ಶಾಲೆ ನಿರ್ಮಿಸಲು ಪುರಸಭೆಯಿಂದ ಯಾವುದೇ ಕಟ್ಟಡ ಪರವಾನಿಗೆ ಕೂಡ ಪಡೆದಿಲ್ಲ. ಕಾರಣ ಈ ಕೂಡಲೇ ಅನಧಿಕೃತವಾಗಿ ನಿರ್ಮಿಸುತ್ತಿರುವ ಈ ಶಾಲಾ ಕಟ್ಟಡವನ್ನು ಬಂದ ಮಾಡಬೇಕು. ಮತ್ತು ಯಾವುದೇ ತರಹದ ಕಟ್ಟಡ ಪರವಾನಿಗೆ ನೀಡಬಾರದು, ತಪ್ಪಿದ್ದಲ್ಲಿ ತಮ್ಮ ಕಾರ್ಯಾಲಯದ ಎದುರು ಬಡಾವಣೆಯ ಸಾರ್ವಜನಿಕರು ಉಗ್ರ ಪ್ರತಿಭನೆ ನಡೆಸುವದಾಗಿ ಮನವಿಯಲ್ಲಿ ತಿಳಿಸಲಾಗಿದೆ.ವಾಯ್.ಎಸ್.ನಾಗರದಿನ್ನಿ, ಗೌರಮ್ಮ ಹುನಗುಂದ, ಶೃತಿ ಮದರಖಂಡಿ, ಚನ್ನಬಸಪ್ಪ ಗೌಡರ, ಕೆ.ಜಿ.ಬಡಿಗೇರ, ಎನ್.ಬಿ.ಸಜ್ಜನ, ಎ.ಬಿ.ಮಾಳಜಿ, ಎನ್.ಜಿ.ಕುಲಕರ್ಣಿ, ಎಸ್.ಎಸ್.ಕುಂಬಾರ, ಎನ್.ಆರ್.ದೊಡಮನಿ, ಎಸ್.ಡಿ.ರಾಠೋಡ ಸೇರಿದಂತೆ ೨೨ ಜನ…
ಮುದ್ದೇಬಿಹಾಳ: ಸಾಕಷ್ಟು ಜನರ ತ್ಯಾಗ ಬಲಿದಾನದಿಂದ ಭಾರತ ಸ್ವತಂತ್ರವಾಗಿದೆ. ಅದನ್ನು ಉಳಿಸಿಕೊಳ್ಳಬೇಕಾದಲ್ಲಿ ನಾವು ಸದಾ ಜಾಗ್ರತರಾಗಿರಬೇಕು ಎಂದು ಜ್ಞಾನಭಾರತಿ ಪ್ರೌಢ ಶಾಲೆಯ ಮುಖ್ಯುಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯರ್ಯಕ್ರಮದಲ್ಲ್ದಿವರು ಮಾತನಾಡಿದರು.ಭಾರತದ ಸ್ವಾತಂತ್ರ‍್ಯದ ಹೋರಾಟದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಿಕೊಡಬೇಕು. ೧೮೫೭ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದಿಂದ ಹಿಡಿದು ಸ್ವಾತಂತ್ರ‍್ಯ ಬರುವವರೆಗಿನ ಅವಧಿಯಲ್ಲಿ ಸಾಕಷ್ಟು ಜನ ದೇಶ ಭಕ್ತರು ಸ್ವಾತಂತ್ರ‍್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅದರಲ್ಲಿಯೂ ಮಹಾತ್ಮ ಗಾಂಧೀಜಿಯವರು ೧೯೧೬ರಿಂದ ತಮ್ಮ ಹೋರಾಟಕ್ಕೆ ಒಂದು ಸಾಂಸ್ಥಿಕ ರೂಪವನ್ನು ಕೊಟ್ಟರು. ಪರೋಕ್ಷ ಪ್ರತಿರೋಧ, ಅಹಿಂಸೆ ಮತ್ತು ಸತ್ಯಾಗ್ರಹ ಎನ್ನುವ ಮೂರು ಅಸ್ತ್ರಗಳು ಬಹಳ ಪ್ರಮುಖವಾದವುಗಳಾಗಿವೆ. ಇವು ಅಶಕ್ತರ ಅಸ್ತ್ರವಲ್ಲ. ಸಾಧಿಸುತ್ತೇನೆಂಬ ಗುರಿ ಮತ್ತು ಛಲವುಳ್ಳವರ ಅಸ್ತ್ರಗಳಾಗಿವೆ. ಭಾರತ ಕೇವಲ ವಿಶ್ವಗುರುವಾದರೆ ಸಾಲದು, ವಿಶ್ವಶಕ್ತಿ, ವಿಶ್ವಗುರು, ಜಗನ್ಮಾತೆಯಾಗಿ ಹೊರಬರಬೇಕಾಗಿದೆ. ಅದನ್ನು ಸಾಧಿಸುವ ಸಂಕಲ್ಪ ಮತ್ತು ಅನುಷ್ಠಾನವೆರಡು ನಮ್ಮಿಂದಲೇ ಆಗಿಬೇಕಾಗಿದೆ. ಅದುವೆ ಹುತಾತ್ಮರಿಗೆ ನಾವು…
ಮುದ್ದೇಬಿಹಾಳ: ಕುಷ್ಠ ರೋಗ ಆನುವಂಶಿಕ ರೋಗವಲ್ಲ. ಇದು ಮೈಕ್ರೋಬ್ಯಾಕ್ಟೀರಿಯಂ ಲೆಪ್ರಯಿಂದ ಉಂಟಾಗುವ ರೋಗ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೇರದಾಳ ಹೇಳಿದರು.ಪಟ್ಟಣದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಳ ಸಂಯಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕುಷ್ಠ ರೋಗ ಶಾಪಗ್ರಸ್ತವೂ ಅಲ್ಲ. ಪಾಪದ ಫಲವೂ ಅಲ್ಲ. ಚರ್ಮದ ಮೇಲೆ ತಿಳಿ-ಬಿಳಿ ತಾಮ್ರವರ್ಣದ ಮಚ್ಚೆಗಳಿಗೆ ಸ್ಪರ್ಶ ಜ್ಞಾನವಿರುವುದಿಲ್ಲ. ಈ ರೋಗದ ಲಕ್ಷಣಗಳು ಕಂಡು ಬಂದಾಗ ಗ್ರಾಮದಲ್ಲಿನ ಆರೋಗ್ಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ತಿಳಿಸಿ ಮಾರ್ಗದರ್ಶನ ಪಡೆಯಬೇಕು. ಸಧ್ಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು ಜನೆವರಿ ೩೦ ರಿಂದ ಫೆಬ್ರವರಿ ೧೫ರ ವರೆಗೆ ಜಿಲ್ಲಾದ್ಯಂತ ನಡೆಯಲಿದೆ. ತಾಲೂಕಿನಾದ್ಯಂತ ಶಾಲೆ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ವಿದ್ಯಾರ್ಥಿಗಳಿಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನದ ಭಿತ್ತಿಪತ್ರಗಳನ್ನು ವಿತರಿಸಿ ಪ್ರತಿಜ್ಞಾ…
ಮುದ್ದೇಬಿಹಾಳ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನ ಅವ್ಯವಹಾರ ತನಿಖೆಗಾಗಿ ಮತ್ತು ಪಟ್ಟಣದ ಅಂಬೇಡ್ಕರ್ ವೃತ್ತದ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಯ ಅಪೂರ್ಣವಾದ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದು, ಯಾವುದೇ ಕ್ರಮವಾಗದ ಹಿನ್ನೆಲೆ ಫೆ.೨ ರಂದು ಮುಖ್ಯಮಂತ್ರಿಗಳ ಆಗಮನದ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧರಾಗಿದ್ದೇವೆ ಎಂದು ಡಿ.ಎಸ್.ಎಸ್.ಮುಖಂಡ ಹರೀಶ ನಾಟೆಕಾರ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದ ಗಾರ್ಡನ್ ನಲ್ಲಿ ವಿವಿಧ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ಬಂದಾಗಿನಿಂದ ಪ್ರತೀ ಮಾತಿಗೆ ಡಾ.ಬಾಬಾ ಸಾಹೇಬರ, ಬಸವಣ್ಣನವರ ಹೆಸರು ಹೇಳುವ ಇವರು, ಮೂರ್ತಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗುತ್ತಿಲ್ಲ. ಸಿಎಂ ಬರಲು ಇನ್ನೂ ಎರಡು ದಿನ ಇದೆ. ಕೂಡಲೇ ಹಣ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ದಿದ್ರೆ ನಾವು ಹೋರಾಟ ಮುಂದುವರೆಸುತ್ತೇವೆ. ನಮ್ಮನ್ನು ಬಂಧಿಸಿದರೂ ಜೈಲಿನಲ್ಲಿಯೇ ಧರಣಿ, ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದೇವೆ ಎಂದರು.ಮುಖಂಡ ಬಸವರಾಜ ಸಿದ್ದಾಪೂರ ಮಾತನಾಡಿ, ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರ, ದಬ್ಬಾಳಿಕೆ, ದುರ್ವರ್ತನೆ, ದೌರ್ಜನ್ಯ, ಎಸ್‌ಸಿಎಸ್‌ಟಿ ಅನುದಾನ ದುರ್ಬಳಕೆ, ಬ್ಯಾಂಕಿನ…
ವಿಜಯಪುರ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ೭೬ನೇ ಪುಣ್ಯತಿಥಿಯ ಅಂಗವಾಗಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹುತಾತ್ಮರ ದಿನವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಅಹಿಂಸಾಮೂರ್ತಿ, ಸರಳತೆಯ ಪ್ರತಿಪಾದಕ, ಜಗತ್ತಿನ ಹಲವಾರು ಮಹಾನ್ ಚಳುವಳಿಗಳಿಗೆ ಪ್ರೇರಕರಾಗಿದ್ದ ಮಹಾತ್ಮಾ ಗಾಂಧಿಯವರ ಕೊಡುಗೆಗಳನ್ನು ಯಾರೂ ಮರೆಯುವಂತಿಲ್ಲ. ಸತ್ಯ, ಶಾಂತಿ, ಅಹಿಂಸೆ, ಅಸ್ಪ್ರಶ್ಯತೆ ನಿವಾರಣೆಗಾಗಿ ಗಾಂಧಿಜಿಯವರು ಪಾಲಿಸಿದ ತತ್ವಗಳು ನಾವೆಲ್ಲರೂ ಸದಾ ಸ್ಮರಿಸುವಂತಾಗಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಬ್ಲಾಕ್ ಅಧ್ಯಕ್ಷ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಅಶ್ಫಾಕ ಮನಗೂಳಿ, ಎಸ್‌ಟಿ ಘಟಕದ ಅಧ್ಯಕ್ಷರಾದ ದೇವಾನಂದ ಲಚ್ಯಾಣ, ಅಬ್ಬುಲ್‌ಪೀರಾ ಜಮಖಂಡಿ, ಫಿರೋಜ ಶೇಖ, ಅನಸೂಯಾ ನಿಂಬರಗಿ, ಆಸ್ಮಾ ಕಾಲೇಬಾಗ, ಶಮಿಮಾ ಅಕ್ಕಲಕೋಟ, ರುಬಿನಾ ಹಳ್ಳೂರ, ಕಾಶಿಬಾಯಿ ಹಡಪದ, ಗಂಗಾಬಾಯಿ ಕಣಮುಚನಾಳ, ಅಬುಬಕರ ಕಂಬಾಗಿ, ಕೃಷ್ಣಾ ಲಮಾಣಿ, ತಾಜುದ್ದೀನ ಖಲೀಫಾ,…
ಆಲಮಟ್ಟಿ: ಕರ್ನಾಟಕ ಸರ್ಕಾರದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಶಾಲಾ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ” ಪ್ರಾಚ್ಯ ಪ್ರಜ್ಞೆ’ ಕಾರ್ಯಕ್ರಮದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲ್ಲೂಕಿನ ಗಣಿ ಗ್ರಾಮದ ವಿದ್ಯಾರ್ಥಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.ಗಣಿ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿ ವಿನಾಯಕ ಚಿತ್ರಗಾರ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ.ಆ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆ ಇಲ್ಲ. ಸ್ವಯಂ ಪ್ರೇರಣೆಯಿಂದ ಕಲಿತಿರುವ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕ ರವಿ ಚಿನಗುಂಡೆ ಮಾರ್ಗದರ್ಶನ ನೀಡಿದ್ದಾರೆ.
ನಿಡಗುಂದಿ: ತಾಲ್ಲೂಕಿನ ವಂದಾಲ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ಮಂಗಳವಾರ, ಕನ್ನಡ ನಾಡಿನ ಗತವೈಭವ ನೆನಪಿಸುವ ಸಾಂಸ್ಕೃತಿಕ ಕಲೆಗಳಲ್ಲೊಂದಾದ ಗ್ರಾಮದೇವತೆ (ದ್ಯಾಮವ್ವ ತಾಯಿ) ಯ ಸೋಗಿನ ಮೆರವಣಿಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬಂದಾಗ ಜಾತ್ರೆಗೆ ಬಂದ ಯಾತ್ರಿಕರೆಲ್ಲ ಭಾವ ಪರವಶರಾಗಿ ಭಕ್ತಿಯಿಂದ ನಮಿಸಿದರು. ಗ್ರಾಮದೇವತೆಯ ವೇಶದಲ್ಲಿ ಮಲ್ಲಿಕಾರ್ಜುನ ಕುಪ್ಪಸ್ತ ಕಂಗೊಳಿಸಿದರೆ, ಪೂಜಾರರಾಗಿ ಗೌತಮ ಜಾಲಿಮಿಂಚಿ, ಸುದರ್ಶನ ಹೆಬ್ಬಾಳ, ಚಾಮರ ಬೀಸುವ ಅಂಗರಕ್ಷಕರಾಗಿ ರಾಘವೇಂದ್ರ ವಡವಡಗಿ, ಸಂದೀಪ ಕುಪ್ಪಸ್ತ, ಪೋತರಾಜನಾಗಿ ಬಸವರಾಜ ಇಂಗಳೇಶ್ವರ ಜನಮನ ಸೂರೆಗೊಂಡರು.ಡೊಳ್ಳು ಕುಣಿತ ವಾದಕರಾಗಿ ಅಂಬರೀಶ್ ಹೆಬ್ಬಾಳ, ನವೀನ ಕೊಳ್ಳಿ, ವಿಜಯ ಪತಂಗೆ, ಶಂಕರ ಸರೂರ, ಸಂಗಮೇಶ ಜಾಲಿಮಿಂಚಿ, ಶಶಿಕುಮಾರ ಅರಳಿಚಂಡಿ, ಸಚಿನ ಪ್ಯಾಟಿಗೌಡ್ರ, ಮಹಾಂತೇಶ ತೆಳಗಡಿ ಗಮನ ಸೆಳೆದರು.
