ಸಿಂದಗಿ: ರಾಜ್ಯ ಕಾಂಗ್ರೆಸ್ ಸರಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯುವ ನಿಧಿಯ ಭರವಸೆಯನ್ನು ನೀಡಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡ ನಂತರ ಭಾರಿ ಪ್ರಮಾಣದಲ್ಲಿ ಮೋಸ ಮಾಡಿದೆ ಎಂದು ಸಿಂದಗಿ ಬಿಜೆಪಿ ಯುವ ಮೋರ್ಚಾ ತಾಲೂಕಾಧ್ಯಕ್ಷ ಅಶೊಕ ನಾರಾಯಣಪೂರ ಆರೋಪಿಸಿದರು.
ಗುರುವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಸಲುವಾಗಿ ವಿದ್ಯಾರ್ಥಿಗಳ ವಿದ್ಯಾಸಿರಿ, ವಿದ್ಯಾನಿಧಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿ ವೇತನಗಳನ್ನು ಮೋಟಕುಗೊಳಿಸಿ ವಿದ್ಯಾರ್ಥಿವೇತನದ ಹಣವನ್ನು ಸಹ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿರುವುದು ಖಂಡನೀಯ. ಬಡ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರದ ಈ ಒಂದು ಗ್ಯಾರಂಟಿ ಯೋಜನೆ, ಎಲ್ಲಾ ಯುವಕರಿಗೂ ತೊಂದರೆ ಉಂಟುಮಾಡಿದೆ.
ಈ ಉಚಿತ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿ ಮುಂದೊಂದು ದಿನ ರಾಜ್ಯ ದಿವಾಳಿಯಾಗುವುದು ಖಚಿತ. ಇಂತಹ ಉಚಿತ ಯೋಜನೆಗಳಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಬಿಜೆಪಿ ಸರ್ಕಾರ ರೈತರ ಮಕ್ಕಳಿಗೆ ಕೊಡುವಂತಹ “ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ ಯೋಜನೆಯನ್ನು ರದ್ದು ಮಾಡಿ ವಿದ್ಯಾರ್ಥಿಗಳಿಗೆ ಮೋಸ ಮಾಡಿದ ಕಾಂಗ್ರೆಸ್ ಸರಕಾರ. ಮತ್ತೇ ಎಲ್ಲವೂ ನಾವೇ ಕೋಡುತ್ತಿದ್ದೇವೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇಂತಹ ಸುಳ್ಳು ಭರವಸೆಗಳನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹೊರಟಿದೆ. ರಾಜ್ಯದ ಬೊಕ್ಕಸ ಖಾಲಿ ಮಾಡುವ ಕಾರ್ಯದೊಂದಿಗೆ ರಾಷ್ಟ್ರದ ಬೊಕ್ಕಸವೂ ಸಹ ಖಾಲಿ ಮಾಡಿ ನಮ್ಮ ಭಾರತ ದೇಶವನ್ನು ದಿವಾಳಿ ರಾಷ್ಟ್ರ ಮಾಡಿ ನರಿ ಬುದ್ದಿಯ ಕಾರ್ಯವೈಖರಿಗಳೊಂದಿಗೆ ದೇಶದ ಜನರನ್ನು ಬಲಿಪಶು ಮಾಡಲು ಮುಂದಾಗಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ. ಭಾರತೀಯ ಜನತಾ ಪಾರ್ಟಿ ಯುವ ಮೋರ್ಚ ಸಿಂದಗಿ ಮಂಡಲ ಖಂಡಿಸುತ್ತದೆ ಎಂದು ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

