Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕಣ್ಮನ ಸೆಳೆವ ಅದ್ಬುತ ಸೌಂದರ್ಯದ ದುಬೈನ ಮಿರಾಕಲ್ ಗಾರ್ಡನ್
ವಿಶೇಷ ಲೇಖನ

ಕಣ್ಮನ ಸೆಳೆವ ಅದ್ಬುತ ಸೌಂದರ್ಯದ ದುಬೈನ ಮಿರಾಕಲ್ ಗಾರ್ಡನ್

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

ಅದು ನಮ್ಮ ಕಡೆ ಕಾಣ ಸಿಗುವ ಮಧ್ಯಾಹ್ನ ಮಲ್ಲಿಗೆ ಇಲ್ಲವೇ ತ್ರಿಕಾಲ ಮಲ್ಲಿಗೆ ಎಂದು ಕರೆಯಲ್ಪಡುವ ಒಂದು ಜಾತಿಯ ಪೊದೆಯಂತಹ ಹೂವಿನ ಗಿಡ. ಆ ಹೂವಿನಲ್ಲಿ ಹಲವಾರು ಬಣ್ಣಗಳನ್ನು ಹೊಂದಿರುವ ವರ್ಷದ 12 ತಿಂಗಳು ಹೂ ಬಿಡುವ ಈ ಗಿಡ ಅಲ್ಲಲ್ಲ ಪೊದೆಗೆ ಎಲ್ಲೆಂದರಲ್ಲಿ ಹಬ್ಬಿ ಹರಡುವ ಸಾಮರ್ಥ್ಯವಿದೆ. ಬಹುಶಹ ಅತ್ಯಂತ ಕಡಿಮೆ ನಿರ್ವಹಣೆಯನ್ನು ಬಯಸುವ ಈ ಒಂದು ಪೊದೆಯಿಂದಲೇ ಒಂದು ಸುಂದರವಾದ ಅದ್ಭುತ ಮಿರಾಕಲ್ ಗಾರ್ಡನ್ ನ ಸೃಷ್ಟಿ ಮರುಭೂಮಿ ನಾಡು ದುಬೈನಲ್ಲಿ ಆಗಿದೆ. ಈ ಹೂಗಳನ್ನು ಬಿಟ್ಟರೆ ಇಲ್ಲಿ ಇರುವ ಬೇರೆ ಹೂಗಳೆಂದರೆ ಗುಲಾಬಿ,ಟುಲಿಪ್, ಮೆರಿಗೋಲ್ಡ್ ಮುಂತಾದವು. ಸುಮಾರು 72,000 ಚದರ ಮೀಟರ್ ವಿಸ್ತೀರ್ಣದ ಮಿರಾಕಲ್ ಗಾರ್ಡನ್ ನಲ್ಲಿ 25 ಮಿಲಿಯನ್ ಗಿಡಗಳಿದ್ದು 50 ಮಿಲಿಯನ್ಗಿಂತಲೂ ಹೆಚ್ಚು ಹೂಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಹೂಗಳ ತೋಟ ಈ ಮಿರಾಕಲ್ ಗಾರ್ಡನ್. 2013 ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ದಿನ ಈ ಮಿರಾಕಲ್ ಗಾರ್ಡನ್ ಉದ್ಘಾಟನೆಯಾಯಿತು. ತಂಪಾದ ವಾತಾವರಣದಲ್ಲಿ ಸುಮಾರು 50 ಮಿಲಿಯಕ್ಕಿಂತಲೂ ಹೆಚ್ಚು ಹೂಗಳು ಅರಳುವ ಭೂಲೋಕದ ಸ್ವರ್ಗ ಎಂದು ಈ ಹೂಗಳ ತೋಟವನ್ನು ಕರೆಯಬಹುದು.
ಬಂಡೆಯನ್ನು ಗುದ್ದಿ ನೀರನ್ನು ತೆಗೆಯಬಹುದು ಎಂಬ ಮಾತನ್ನು ಹಲವಾರು ಬಾರಿ ಕೇಳಿದ್ದೆವು, ಆದರೆ ನೀರೇ ಇಲ್ಲದ ಮರುಭೂಮಿಯಲ್ಲಿ ವರ್ಷದ 12 ತಿಂಗಳು ಹಸಿರಾಗಿರುವಂತಹ ಈ ಮಿರಾಕಲ್ ಗಾರ್ಡನ್ ದುಬೈ ಜನರ ಅಪಾರ ಜೀವನೋತ್ಸಾಹ ಮತ್ತು ಅಸೀಮ ಶ್ರದ್ಧೆಗೆ ಕಾರಣವಾಗಿದೆ ಎಂದರೆ ತಪ್ಪಲ್ಲ.
ಮಿರಾಕಲ್ ಗಾರ್ಡನ್ ನ ಒಳಗೆ ಪ್ರವೇಶಿಸುತ್ತಲೇ ನಮಗೆ ದೊಡ್ಡ ದೊಡ್ಡ ಕಮಾನುಗಳಿಗೆ ಸುತ್ತಿಕೊಂಡಿರುವ ಬಣ್ಣದ ಹೂಗಳ ನೋಟ ಕಾಣ ಸಿಗುತ್ತದೆ. ಸುತ್ತ ಹಚ್ಚ ಹಸುರಿನ ಕೃತಕವಾಗಿ ಬೆಳೆಸಲ್ಪಟ್ಟ ವನಸಿರಿಯನ್ನು ಹೊಂದಿರುವ ಮಿರಾಕಲ್ ಗಾರ್ಡನ್ ಒಳ ಹೋಗುತ್ತಲೆ ಮನಸ್ಸು ಹೂವಿನಷ್ಟೇ ಹಗುರಾಗಿ ದೇಹಕ್ಕೆ ತಂಪಿನ ಅನುಭವವಾಗುತ್ತದೆ. ಕಣ್ಣು ಹಾಯಿಸಿದಷ್ಟು ದೂರ ದೂರಕ್ಕೆ ಹಸಿರು ವನಸಿರಿ ಮತ್ತು ಬಣ್ಣ ಬಣ್ಣದ ಹೂಗಳು ಕಣ್ಮನ ಸೆಳೆದು ಮೈ ಮನದ ದಣಿವನ್ನು
ನೀಗಿಸುತ್ತವೆ.


ಕಮಾನುಗಳ ಮೂಲಕ ಒಳ ಪ್ರವೇಶಿಸಿದ ಕೂಡಲೇ ಎದುರಿಗೆ ಮರುಭೂಮಿಯ ವಾಹನ ಒಂಟೆಯ ಆಕೃತಿಯಲ್ಲಿ ಬೆಳೆಸಿರುವ ಎರಡು ಬೃಹತ್ ಗಿಡಗಳನ್ನು ನೋಡಬಹುದು. ಸುಮಾರು ನಾಲ್ಕಾಳೆತ್ತರದ ಈ ಒಂಟೆಗಳ ಆಕೃತಿ ಆಕರ್ಷಣೀಯವಾಗಿದೆ.
ಹಲವಾರು ಕವಲುಗಳಲ್ಲಿ ಉದ್ಯಾನವನ್ನು ಸುತ್ತಿ ಬರಲು ಅವಕಾಶವಿದ್ದು ನಾವು ಬಲ ಪಾರ್ಶ್ವದಿಂದ ಉದ್ಯಾನದ ಒಳಹೊಕ್ಕೆವು. ಕೃತಕವಾಗಿ ನಿರ್ಮಿಸಿದ ಪುಟ್ಟ ಸರೋವರ ಅದಕ್ಕೆ ಅಳವಡಿಸಿರುವ ಏತ ನೀರಾವರಿ ವ್ಯವಸ್ಥೆ ಅಲ್ಲಲ್ಲಿ ಕುಳಿತು ದಣಿವಾರಿಸಿಕೊಳ್ಳಲು ಕುರ್ಚಿಗಳ ವ್ಯವಸ್ಥೆ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಛತ್ರಿಗಳ ದೊಡ್ಡ ಹಾಸನ್ನೇ ಚಪ್ಪರದಂತೆ ಹಾಸಿದ್ದು ಬಿಸಿಲು ಸೋಂಕದಂತಹ ಅದ್ಭುತ ನೆರಳಿನ ವ್ಯವಸ್ಥೆ ಅಲ್ಲಿದೆ. ಮುಂದೆ ಸಾಗುತ್ತಾ ಹೋದರೆ ಅಲ್ಲೊಂದು ವಿಮಾನ. ಬಹುಶಹ ಕಸದಿಂದಲೂ ರಸ ತೆಗೆಯುವ ಕಲೆ ದುಬೈ ಜನರಿಗೆ ದಕ್ಕಿದೆ. ಇಡೀ ವಿಮಾನವನ್ನು ಬಣ್ಣ ಬಣ್ಣದ ಹೂಗಳಿಂದ ಹಸಿರು ಎಲೆಗಳಿಂದ ಆವೃತಗೊಳ್ಳುವಂತೆ ಬೆಳೆಸಿರುವ ವಿಮಾನದ ಪ್ರತಿಯೊಂದು ಭಾಗವು ಅತ್ಯಂತ ಆಕರ್ಷಣೀಯವಾಗಿ ಕಾಣುವಂತೆ ಮಾರ್ಪಡಿಸಲಾಗಿದೆ. ಮುಂದೆ ಸಾಗುತ್ತಿದ್ದಂತೆ ದೊಡ್ಡ ದೊಡ್ಡ ಗಾತ್ರದ ಸ್ಮರ್ಫ್ ಕಾರ್ಟೂನ್ಗಳನ್ನು ಅಲ್ಲಲ್ಲಿ ಅಳವಡಿಸಲಾಗಿದ್ದು ಅವುಗಳ ಮುಂದೆ ಆ ಕಾರ್ಟೂನ್ ಗಳು ನಿಂತಿರುವ ಭಂಗಿಯಲ್ಲಿಯೇ ಫೋಟೋ ತೆಗೆದುಕೊಳ್ಳುವ ನೂರಾರು ಜನರ ಗುಂಪು ಅಲ್ಲಿತ್ತು. ನಾವು ಕೂಡ ಅಲ್ಲಲ್ಲಿ ನಿಂತು ಫೋಟೋಗಳನ್ನು ತೆಗೆಸಿಕೊಂಡು ಮುಂದೆ ಸಾಗಿದಾಗ ಅಲ್ಲಿ ಬೃಹದಾಕಾರದ ಗಿಡಗಳನ್ನು ಪೆಂಗ್ವಿನ್ ಮಾದರಿಯಲ್ಲಿ ಕತ್ತರಿಸಿ ಬೆಳೆಸಲಾಗಿತ್ತು. ಮುಂದೆ ಸಾಗಿದಾಗ ಅಲ್ಲಿ ನಮ್ಮ ಸೂರ್ಯಕಾಂತಿಯನ್ನು ಹೋಲುವ ಕೆಲ ಹೂಗಳನ್ನು ಬೆಳಸಲಾಗಿತ್ತು. ಮೊದಲ ಬಾರಿಗೆ ಬೇರೊಂದು ರೀತಿಯ ಪುಷ್ಪವನ್ನು ಕಂಡಾಗ ಕಣ್ಣರಳಿತ್ತು. ಹಾಗೆಯೇ ಮುಂದೆ ಸಾಗಿದಾಗ ಅಲ್ಲೊಂದು ಬೃಹದಾಕಾರದ ಮರ ಆ ಮರದಲ್ಲಿ ದೊಡ್ಡ ರಾಕ್ಷಸನಂತಹ ಮುದ್ದಾದ ಆಕೃತಿ ಮತ್ತು ಅದರ ಮಕ್ಕಳ ಆಕೃತಿಗಳು. ಇದನ್ನು ನೋಡಿದಾಗ ನನಗೆ ನಾವು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಹುಣಸೆ ಮರದಲ್ಲಿ ವಾಸವಾಗಿರುತ್ತಿದ್ದ ಏಳು ಮಕ್ಕಳ ತಾಯಿ ನೆನಪಾದಳು.
ಮತ್ತೆ ಮುಂದೆ ತಿರುವಿನಲ್ಲಿ ಸಾಗಿದಾಗ ಅಲ್ಲಲ್ಲಿ ಇಗ್ಲೂ ಗಳಂತಹ ರಚನೆಗಳು ಮತ್ತು ಅವುಗಳ ಮೇಲೂ ಕೂಡ ಹಬ್ಬಿದ ಹೂಗಳ ಪೊದೆಗಳು ಕಾಣಸಿಕ್ಕವು. ನಂತರ ಅಲ್ಲೊಂದು ಬೃಹದಾಕಾರದ ಮನೆ. ಬೆಂಗಳೂರಿನ ಟಿಪ್ಪು ಪ್ಯಾಲೇಸ್ ನಂತೆ ತೋರುವ ಆ ಬೃಹತ್ ಭವನಕ್ಕೆ ಹೂವಿನ ಬಳ್ಳಿಗಳ ಶೃಂಗಾರ! ಅಬ್ಬಾ ವರ್ಣಿಸಲಸದಳ. ಇಳಿ ಮಧ್ಯಾಹ್ನದ ಆ ಹೊತ್ತಿನಲ್ಲಿ ಆ ಬೃಹತ್ ಭವನದ ಹಿನ್ನೆಲೆಯಲ್ಲಿ ಹೂಗಳ ಸೌಂದರ್ಯ ಕಣ್ಮನ ಸೆಳೆಯುವಂತಿತ್ತು. ಅತ್ಯಾಕರ್ಷಕವಾದ ಹಸಿರು ಮತ್ತು ಹೂಗಳ ವರ್ಣ ಸಂಯೋಜನೆ ಅದ್ಭುತ. ಅಲ್ಲಿಯೇ ಪಕ್ಕದಲ್ಲಿ ಹೂಗಳಿಂದಲೇ ನಿರ್ಮಿಸಿದ ಬೃಹತ್ ಗಡಿಯಾರ ಇದೆ. ಸಾಗಿದಷ್ಟು ದೂರದವರೆಗೂ ಕಣ್ಣಂಚಿನ ಕೊನೆಯ ನೋಟದವರೆಗೂ ಉದ್ಯಾನವನ್ನು ವೀಕ್ಷಿಸುತ್ತಾ ಕಾಲುಗಳು ದಣಿದಿದ್ದರೂ, ಮನಸ್ಸು ಅನಿರ್ವಚನೀಯ ಆನಂದವನ್ನು ಅನುಭವಿಸುತ್ತಿತ್ತು. ಮತ್ತೆ ಹಲವಾರು ಭವನಗಳು ತುಸು ಎತ್ತರದ ಪ್ರದೇಶದ ಮೇಲೆ ಹೂಗಳ ಅಲಂಕಾರದಿಂದ ನಿರ್ಮಿಸಲ್ಪಟ್ಟಿದ್ದು ಅವುಗಳನ್ನು ತಲುಪುವ ದಾರಿಯಲ್ಲಿ ಹಸಿರಿನಿಂದ ಕೂಡಿದ ಮೆಟ್ಟಿಲುಗಳು ಬಣ್ಣ ಬಣ್ಣದ ಹೂಗಳ ಬಳ್ಳಿಗಳನ್ನು ಹಬ್ಬಿಸಿರುವ ಕಮಾನುಗಳು ದೊಡ್ಡ ದೊಡ್ಡ ದೀಪದ ಕಂಬಗಳು ಅವುಗಳಿಗೂ ಕೂಡ ತೂಗು ಬಿಟ್ಟಿರುವ ದೊಡ್ಡ ದೊಡ್ಡ ಹೂವಿನ ಕುಂಡಗಳು ಒಂದೇ ಎರಡೇ!! ಆ ನೋಟ ಮನಸ್ಸಿಗೆ ಮುದ ನೀಡುವುದರಲ್ಲಿ ಆಶ್ಚರ್ಯವೇ ಇಲ್ಲ.ಅಲ್ಲಿಯೇ ಒಂದೆಡೆ ಬೃಹದಾಕಾರದ ಟೆಡ್ಡಿ ಬೇರ್ ಗಳ ಆಕಾರದಲ್ಲಿ ಕತ್ತರಿಸಿದ ಗಿಡಗಳು ಅವುಗಳ ಕಣ್ಣಿನ ಜಾಗದಲ್ಲಿ ಪುಟ್ಟ ಕಪ್ಪು ಬಿಳಿ ಹೂಗಳ ಬೆಳೆಸುವಿಕೆ ಅದ್ಭುತ. ಅಲ್ಲಿಗೆ ಒಂದೆಡೆ ಬಿದಿರಿನ ಬೃಹದಾಕಾರದ ಕುಂಡಗಳು ಅವುಗಳ ಮೇಲೆ ಮತ್ತೆ ಬಣ್ಣ ಬಣ್ಣದ ಹೂಗಳು. ಸುತ್ತಿದಷ್ಟೂ ಮುಗಿಯದ, ನೋಡಿದಷ್ಟು ತಣಿಯದ ಹೂಗಳ ಸಾಮ್ರಾಜ್ಯ ಇಲ್ಲಿದೆ. ಸುಮಾರು ಎರಡು-ಮೂರು ಗಂಟೆಗಳ ಕಾಲ ಇಡೀ ಉದ್ಯಾನವನ ಸುತ್ತಿ ಅಲ್ಲಲ್ಲಿ ನಿಂತು ಫೋಟೋಗಳನ್ನು ತೆಗೆದುಕೊಂಡು ಕಣ್ಮನ ಸೆಳೆಯುವ ಅದ್ಬುತ ಸೌಂದರ್ಯವನ್ನು ಆಸ್ವಾದಿಸುತ್ತಾ ಅಂತಿಮವಾಗಿ ಮತ್ತೆ ಮುಂಭಾಗಕ್ಕೆ ಬಂದು ನಿಂತಾಗ ಸಣ್ಣದಾಗಿ ಹೊಟ್ಟೆ ಹಸಿದಿತ್ತು. ಅಲ್ಲಿಯೇ ಆನೆ ಆಕಾರದ ಗಿಡಗಳ ಕೆಳಗೆ ಕುಳಿತುಕೊಂಡು ನಮ್ಮದೊಂದು ಗ್ರೂಪ್ ಫೋಟೋ ತೆಗೆದುಕೊಂಡೆವು. ಅಲ್ಲಿಯೇ ಒಬ್ಬ ಐಸ್ ಕ್ರೀಂ ಮಾರುವವ ನಿಂದ ಐಸ್ ಕ್ರೀಮ್ ಕೊಂಡು ಅದನ್ನು ಸವಿಯುತ್ತಾ ಮತ್ತೊಮ್ಮೆ ಮಿರಾಕಲ್ ಗಾರ್ಡನ್ ನ ವಿಹಂಗಮ ದೃಶ್ಯಗಳನ್ನು ಆಸ್ವಾದಿಸಿದೆವು. ಉತ್ಸಾಹದಿಂದ -ನಡೆದು ಇಡೀ ಮಿರಾಕಲ್ ಗಾರ್ಡನ್ ಇಂಚಿಂಚು ಜಾಗವನ್ನು ನೋಡಿ ಕಣ್ತುಂಬಿಕೊಂಡ ನಮ್ಮ ಮನಸ್ಸು ತೃಪ್ತಿ ಮತ್ತು ಸಂತಸದ ಕಡಲಾಗಿತ್ತು. ಅಷ್ಟು ದೊಡ್ಡ ವಿಸ್ತೀರ್ಣದ ಹೂದೋಟದಲ್ಲಿ ಎಲ್ಲಿಯೂ ಉಸ್ತುವಾರಿ ಕೆಲಸದವರು ಕಾಣುತ್ತಿರಲಿಲ್ಲ. ಒಂದು ಚೂರು ಕಸವೂ ನೆಲದ ಮೇಲಿರಲಿಲ್ಲ. ಗಿಡದ ತರಗೆಲೆಗಳಾಗಲಿ ಉದುರಿದ ಹೂವಿನ ಕಸವಾಗಲಿ ಇಲ್ಲದೆ ಸ್ವಚ್ಛ ಸುಂದರವಾದ ತೋಟ ಅದಾಗಿದೆ.
ಮಾನವ ನಿರ್ಮಿತ ಈ ಪುಷ್ಪೋದ್ಯಾನ ದುಬೈನ ಮುಕುಟಮಣಿಯಂತೆ ಶೋಭಿಸುತ್ತದೆ ಎಂದು ಹೇಳಿದರೆ ತಪ್ಪಿಲ್ಲ. ಕರ್ತೃತ್ವ ಶಕ್ತಿಗೆ ಇನ್ನೊಂದು ಹೆಸರು ದುಬೈನ ಮಿರಾಕಲ್ ಗಾರ್ಡನ್. ಜೀವನದಲ್ಲಿ ಸಾಧ್ಯವಾದರೆ ಒಮ್ಮೆ ನೋಡಿ ಉದ್ಯಾನದ ಸೌಂದರ್ಯವನ್ನು ಸವಿಯಿರಿ.

– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026

ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ

ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ

ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 19, 2026
    In ದಿನಪತ್ರಿಕೆ
  • ಸರ್ಕಾರಿ ಯೋಜನೆಗಳಿಂದ ಬದುಕು ರೂಪಿಸಿಕೊಳ್ಳಿ :ಇಂಡಿ
    In (ರಾಜ್ಯ ) ಜಿಲ್ಲೆ
  • ನಮ್ಮ ಪರಂಪರೆ ಸಂರಕ್ಷಿಸುವ ಜವಾಬ್ದಾರಿ ನಮ್ಮದು :ಡಾ.ಮಯೂರ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಲೋಕಾಯುಕ್ತ ಬಲೆಗೆ ಸರ್ಕಾರಿ ಸಿಬ್ಬಂದಿ!
    In (ರಾಜ್ಯ ) ಜಿಲ್ಲೆ
  • ನಮ್ಮ ನಿಸ್ವಾರ್ಥ ಸತ್ಕಾರ್ಯಗಳು ನಮ್ಮನ್ನು ಕಾಪಾಡುತ್ತವೆ :ಡಾ.ಗೀತಾ
    In (ರಾಜ್ಯ ) ಜಿಲ್ಲೆ
  • ಏ.೨೪ಕ್ಕೆ ಮೇರುನಟ ಡಾ.ರಾಜ್‌ಕುಮಾರ್ ಜನ್ಮ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಪ್ರತಿಷ್ಠಿತ ಶಾಲೆ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಏ.೨೨ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಏ.೨೨ರಿಂದ ಸಿಇಟಿ ಪ್ರರೀಕ್ಷೆ: ಸುಸೂತ್ರ ನಡೆಸಲು ಎಡಿಸಿ ಸೂಚನೆ
    In (ರಾಜ್ಯ ) ಜಿಲ್ಲೆ
  • ಹ್ಯಾಂಡ್ ಪೋಸ್ಟ್ ಟು ಕೋಟೆ ಜೋಡಿ ರಸ್ತೆ- ಹೈಟೆಕ್ ಪಾರ‍್ಕ್ ನಿರ‍್ಮಾಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.