ಚಿಮ್ಮಡ: ಪರಸ್ಪರ ಸಹಕಾರದೊಂದಿಗೆ ಪರೀಶ್ರಮ ಸೇರಿದರೆ ಸರಕಾರಿ ಸಂಸ್ಥೆಗಳಲ್ಲಿಯೂ ಉತ್ತಮ ಸಾಧನೆ ಮಾಡಬಹುದೆಂದು ಚಿಮ್ಮಡ ಗ್ರಾಮದ ಸರಕಾರಿ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಹೇಳಿದರು.
ಗ್ರಾಮದ ಸರಕಾರಿ ಪದವಿ ಪೂರ್ವ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರ‍್ಯಾಂಕ್ ವಿದಾರ್ಥಿಗಳ ಸತ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರೊಂದಿಗೆ ಅಭೀವೃದ್ದಿ ಸಮೀತಿಯ ಸಹಕಾರದಿಂದ ನಮ್ಮ ವಿದ್ಯಾಲಯವು ಶೇ. ನೂರರಷ್ಟು ಫಲಿತಾಂಶ ಪಡೆಯಲು ಸಾಧ್ಯವಾಗಿದ್ದು ಇದೇ ಸಹಕಾರ ಮುಂದುವರೆದಲ್ಲಿ ಇದಕ್ಕಿಂತ ಉತ್ತಮ ಫಲಿತಾಂಶ ದೊರೆಯಲಿದೆ ಎಂದರು.
ಕಾಲೇಜು ಅಭಿವೃದ್ದಿ ಸಮೀತಿಯ ಅಧ್ಯಕ್ಷ ಬಸವರಾಜ ಕುಂಚನೂರ ಮಾತನಾಡಿ ಕಾಲೇಜು ಪ್ರಾರಂಭವಾಗಿ ಕೇವಲ ಮೂರು ವರ್ಷಗಲಾದರೂ ಖಾಸಗೀ ಶಾಲೆಗಳೂ ನೀಡದಷ್ಟು ಉತ್ತಮ ಫಲಿತಾಂಶ ನೀಡಲು ಕಾರಣೀಭೂತರಾದ ಎಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಪ್ರಭು ನೇಸೂರ, ಪ್ರವೀಣ ಮೈತ್ರಿ ಮಾತನಾಡಿದರು.
ಅಭಿವೃದ್ದಿ ಸಮೀತಿಯ ಬೀರಪ್ಪಾ ಹಳೆಮನಿ, ರಾಚಯ್ಯ ಮಠಪತಿ, ಶಂಕರಗೌಡ ಪಾಟೀಲ, ಅವ್ವನಪ್ಪಾ ಮುಗಳಖೋಡ, ಉಪನ್ಯಾಸಕರಾದ ಬಿ.ಬಿ. ಕುದರಿಮನಿ, ಎಚ್.ಎಂ. ಕುಂಬಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ ಕುಮಾರಿ ಲಕ್ಷಿö್ಮ ರಮೇಶ ಗೋವಿಂದಗೋಳ, ಕುಮಾರಿ ಅಂಬಿಕಾ ಸಂಗಪ್ಪಾ ಧಡೂತಿ, ಕುಮಾರಿ ಪವಿತ್ರಾ ಮಹಾಲಿಂಗಪ್ಪಾ ಪಾಟೀಲ ಹಾಗೂ ಕಲಾ ವಿಭಾಗದಲ್ಲಿ ಕುಮಾರಿ ಬೋರಮ್ಮ ಅರ್ಜುನ ವೆಂಕತ್ಯಾಪೂರ, ಕುಮಾರಿ ರೂಪಾ ಕೆಂಚಪ್ಪಾ ನಡುವಿನಮನಿ, ಕುಮಾರಿ ಜ್ಯೋತಿ ಶ್ರೀಶೈಲ ಪಟ್ಟಣಶೆಟ್ಟಿಯವರನ್ನು ಕಾಲೇಜು ಅಭಿವೃದ್ದಿ ಸಮೀತಿಯಿಂದ ಸತ್ಕರಿಸುವ ಮೂಲಕ ಗೌರವಿಸಲಾಯತು.
Subscribe to Updates
Get the latest creative news from FooBar about art, design and business.
Related Posts
Add A Comment

