Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದಲ್ಲಿ ಫೆ.೨ ರಿಂದ ೪ ರವರೆಗೆ ಜಗದ್ಗುರು ಲಿಂ.ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ೧೧ ಪುಣ್ಯಾರಾಧನೆ, ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ಪಟ್ಟಾಧಿಕಾರ ದಶಮಾನೋತ್ಸವ ಹಾಗೂ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ, ನೂತನ ರಥೋತ್ಸವ ಲೋಕಾರ್ಪಣೆ, ಸಾಮೂಹಿಕ ವಿವಾಹ, ೨೦೦೮ ತಾಯಂದಿರಿಂದ ಕುಂಭೋತ್ಸವ, ೫೦೦೮ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ, ೨೫ ಮಠಾಧೀಶರ ಮಂಟಪ ಪೂಜೆ, ಸಂಗನಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಸಿದ್ದತೆ ಭರದಿಂದ ನಡೆದಿದೆ. ಈಗಾಗಲೇ ಕಾರ್ಯಕ್ರಮದಂಗವಾಗಿ ಜ.೧೭ ರಿಂದ ಕಲಬುರಗಿ ಶರಣಬಸವೇಶ್ವರ ಪುರಾಣ ಜರಗುತ್ತಿದೆ. ಕಾರ್ಯಕ್ರಮಕ್ಕೆ ವಿಶಾಲವಾದ ಶಾಮಿಯಾನ, ಆಗಮಿಸುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ನಾಡಿನ ಅನೇಕ ಪೂಜ್ಯರು, ಡಿಸಿಎಂ, ಅನೇಕ ಸಚಿವರು, ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಆಗಮಿಸಲಿದ್ದಾರೆ ಎಂದರು.ಫೆ.೨…
ವಿಜಯಪುರ: ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಕಳೆಯಬಾರದು. ಸಮಯ ಅಮೂಲ್ಯವಾದದ್ದು, ಯಾವ ವ್ಯಕ್ತಿಯಲ್ಲಿ ಸಂಸ್ಕೃತಿ, ಸಂಸ್ಕಾರ ಇರುತ್ತದೆಯೋ ಅಂತಹ ವ್ಯಕ್ತಿಗಳಲ್ಲಿ ವಿನಯತೆ ಇರುತ್ತದೆ ಎಂದು ಜ್ಞಾನಯೋಗಾಶ್ರಮದ ಶ್ರೀಗಳಾದ ಬಸವಲಿಂಗ ಶ್ರೀಗಳು ಹೇಳಿದರು.ಬಂಜಾರಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ‘ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ’ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು. ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿರುವ ಶಿಕ್ಷಕ ಎಂದಿಗೂ ಅಪವ್ಯಯ ಆಗಲು ಸಾಧ್ಯ ಇಲ್ಲ. ನಿರಂತರ ಪರಿಶ್ರಮ ಶ್ರದ್ಧೆಯಿಂದ ಪ್ರಯತ್ನಪಟ್ಟಲ್ಲಿ ನಿಮ್ಮ ಗುರಿ ಸುಲಭವಾಗುತ್ತದೆ. ಶಿಕ್ಷಣವು ಮಾನವವೀಯತೆಯ ಮೌಲ್ಯಗಳನ್ನು ಬೆಳೆಸುತ್ತದೆ. ವ್ಯಕ್ತಿ ಹೆಚ್ಚು ಹೆಚ್ಚು ಶಿಕ್ಷಣ ಪಡೆದಂತೆ ಆತನ ಜ್ಞಾನವು ವೃದ್ಧಿಯಾಗಿ ಸಂಸ್ಕಾರ ಕಲಿಯುತ್ತಾನೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ಹೊಸಮನಿಯವರು ಮಾತನಾಡುತ್ತ. ಆತ್ಮವಿಶ್ವಾಸ, ಬದ್ಧತೆ, ದಕ್ಷತೆ, ಸ್ಥಿರತೆ ಈ ನಾಲ್ಕು ಅಂಶಗಳನ್ನು ಜೀವನದಲ್ಲಿ ಸಾಧಿಸಬೇಕು. ಇದಕ್ಕೆ ಪ್ರಮುಖವಾಗಿ ಏಕಾಗ್ರತೆ ಇರಬೇಕು. ವಿದ್ಯೆಯೊಂದಿಗೆ ವಿದ್ಯಾರ್ಥಿಗಳಿಗೆ…
ವಿಜಯಪುರ: ಧಾರವಾಡದ ಸಿಡಾಕ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ವತಿಯಿಂದ ನಿರುದ್ಯೋಗ ಯುವಕ-ಯುವತಿಯರಿಗೆ ೧೦ ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮ ವಿಜಯಪುರದಲ್ಲಿ ಏರ್ಪಡಿಸಲಾಗಿದೆ.ಶಿಬಿರದಲ್ಲಿ ಉದ್ಯಮದ ಆಯ್ಕೆ ವಿಧಾನ, ಬ್ಯಾಂಕ್ ಮತ್ತು ಕೈಗಾರಿಕಾ ಇಲಾಖೆಯಿಂದ ದೊರೆಯುವ ಸಹಾಯ-ಸೌಲಭ್ಯ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಸುವ ವಿಧಾನ, ಜಿಎಸ್‌ಟಿ, ಪ್ಯಾಕೇಜಿಂಗ್ ಮತ್ತು ಬ್ರಾಂಡಿಂಗ್ ಸೇರಿದಂತೆ ಸಮಗ್ರ ಮಾಹಿತಿ ಒದಗಿಸಲಾಗುವುದು. ಆಸಕ್ತರು ಮೊ: ೮೮೮೪೧೮೪೪೯೩ ಸಂಖ್ಯೆಗೆ ಸಂಪರ್ಕಿಸಿ ದಿನಾಂಕ : ೦೭-೦೨-೨೦೨೪ರೊಳಗಾಗಿ ನೊಂದಾಯಿಸಿಕೊಳ್ಳುವಂತೆ ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಫೆ.೧ ರಂದು ಮಧ್ಯಾಹ್ನ ೩ ರಿಂದ ೪ ಗಂಟೆಯವರೆಗೆ ಕಬ್ಬಿನಲ್ಲಿ ಗೊಣ್ಣೆ ಹುಳುವಿನ ನಿರ್ವಹನೆ ಮತ್ತು ಫೆ.೨ ರಂದು ಮಧ್ಯಾಹ್ನ ೩ ರಿಂದ ೪ ಗಂಟೆಯವರೆಗೆ ಸಮಗ್ರ ಕೃಷಿ ಪದ್ಧತಿ ವಿಷಯಗಳ ಕುರಿತು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಗಿದೆ.ಆಸಕ್ತ ರೈತರು ಈ ಗೂಗಲ್ ಮೀಟ್ ಲಿಂಕ್ https://meet.google.com/xjy-juqo-mxy ಬಳಸಿ ತರಬೇತಿಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಲಕ್ಷ್ಮೀ ಕಾಮಗೊಂಡ ಮೊ: ೮೨೭೭೯೩೦೬೧೯ ಸಂಖ್ಯೆಗೆ ಸಂಪರ್ಕಿಸುವಂತೆ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಹಾಗೂ ಅಲೆಮಾರಿ-ಅರೆಅಲೆಮಾರಿ ಪ್ರವರ್ಗ-೧ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಯೋಜನೆ ಸೌಲಭ್ಯಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: ೧೫-೦೨-೨೦೨೪ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರಕ್ಕೆ ಇಂಡಿ ಉಪವಿಭಾಗದ ಬಸನಾಳ ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾಗತಿಸಲಾಯಿತು.ಸರ್ಕಾರದ ಆದೇಶದ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ “ಸಂವಿಧಾನ ಜಾಗೃತಿ ಜಾಥಾ” ರಾಜ್ಯಾಧ್ಯಾಂತ ಹಮ್ಮಿಕೊಂಡಿದ್ದು, ಅದರಂತೆ ವಿಜಯಪುರ ಜಿಲ್ಲೆಯಲ್ಲಿ ದಿನಾಂಕ: ೩೧.೦೧.೨೦೨೪ರಂದು ಇಂಡಿ ಉಪವಿಭಾಗದ ಬಸನಾಳ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ನಂತರ ತಾಂಬಾ, ಬೆನಕನಹಳ್ಳಿ, ಅಥರ್ಗಾಕ್ಕೆ ಸಂಜೆ ಬಂದು ಗ್ರಾಮ ಪಂಚಾಯತಿಗಳ ವತಿಯಿಂದ “ಸಂವಿಧಾನ ಜಾಗೃತಿ ಜಾಥಾ” ದ ಸ್ಥಬ್ಧ ಚಿತ್ರವನ್ನು ಅತ್ಯಂತ ವಿಜೃಂಭಣೆಯಿಂದ ಸ್ವಾಗತ ಮಾಡಿಕೊಂಡು, ಕಾರ್ಯಕ್ರಮ ನೇರವೇರಿಸಲಾಯಿತು.ಸದರಿ ಗ್ರಾಮ ಪಂಚಾಯತಿಗಳ ಆವರಣದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರು ಸೇರಿ ಅತ್ಯಂತ ವಿಜೃಂಬಣೆಯಿಂದ “ಸಂವಿಧಾನ ಜಾಗೃತಿ ಜಾಥಾ”ದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಜೆ ಇಂಡಿ, ಅಧೀಕ್ಷಕ ಚನ್ನಲಿಂಗಪ್ಪ ಚೌದರಿ, ಸೇರಿದಂತೆ ಗ್ರಾಮದ ಗಣ್ಯರು, ಮುಖಂಡರು ಭಾಗವಹಿಸಿದ್ದರು.ಹತ್ತಳ್ಳಿ ಗ್ರಾಮ…
ದೇವರಹಿಪ್ಪರಗಿ: ಪಟ್ಟಣದ ೧೫ನೇ ವಾರ್ಡಿನಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗೆ ಚಾಲನೆ ನೀಡಿ, ಪೂರ್ಣಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ೧೫ನೇ ವಾರ್ಡಿನ ನಿವಾಸಿಗಳು ಬುಧವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ೨೦೨೨-೨೩ನೇ ಸಾಲಿನಲ್ಲಿ ಸೋಮನಗೌಡ ಪಾಟೀಲ(ಸಾಸನೂರ) ಶಾಸಕರಾದ ಸಂದರ್ಭದಲ್ಲಿ ನಗರೋತ್ಥಾನ ವಿಶೇಷ ಅನುದಾನದಡಿ ಮಂಜೂರಾದ ಕಾಮಗಾರಿಯನ್ನು ಆರಂಭಿಸಿ ನಂತರ ನಿಲ್ಲಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ.ಕಳೆದ ಒಂದು ವರ್ಷದ ಹಿಂದೆ ಜೆಸಿಬಿ ಯಂತ್ರದಿಂದ ಅಗೆದ ರಸ್ತೆ ಈವರೆಗೆ ದುರಸ್ತಿ ಕಾಣದೇ ಇರುವುದರಿಂದ ಸಾರ್ವಜನಿಕರ ತಿರುಗಾಟಕ್ಕೆ ತೊಂದರೆಯಾಗಿದೆ. ರಸ್ತೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲು ಕಾರಣವಾದರೂ ಏನು? ಯಾಕೆ ಪೂರ್ಣಗೊಳ್ಳಲಿಲ್ಲ ಎಂಬುದರ ಕುರಿತು ಆಡಳಿತಾಧಿಕಾರಿಗಳಾದ ತಹಶೀಲ್ದಾರ ಕೂಡಲೇ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬರುವ ದಿನಗಳಲ್ಲಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸದೇ ಇದ್ದಲ್ಲಿ ವಾರ್ಡಿನ ನಿವಾಸಿಗಳು ಹೋರಾಟದ ಹಾದಿ ಆಯ್ದುಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿ, ಮನವಿ ಸಲ್ಲಿಸಿದರು.ಕಾಶೀನಾಥ ವಡ್ಡೋಡಗಿ, ಜ್ಞಾನೇಶ್ವರ…
ದೇವರಹಿಪ್ಪರಗಿ: ನರ್ಸರಿ ಸೇರಿದಂತೆ ಒಂದರಿಂದ ಐದನೇ ತರಗತಿಯ ಮಕ್ಕಳು ವಿಜ್ಞಾನ, ಆಹಾರ, ಕೃಷಿ ಮೇಳದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.ಪಟ್ಟಣದ ಇಂದುಮತಿ ಸಾವಳಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಜರುಗಿದ ಒಂದು ದಿನದ ಪ್ರದರ್ಶನ ಮೇಳದಲ್ಲಿ ೬೦ ಕ್ಕೂ ಹೆಚ್ಚು ಮಕ್ಕಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಸೌರವ್ಯೂಹ ರಚನೆ, ವಿದ್ಯುತ್ ಉತ್ಪಾದನೆ. ಆಹಾರ ಹಾಗೂ ಕೃಷಿಗೆ ಸಂಬಂಧಿತ ಬೆಳೆಗಳು ಹಾಗೂ ಹಣ್ಣುಗಳ ಬೆಳೆಯುವ ಹಂತ, ಮಾರಾಟದ ವಿಧಾನಗಳು. ಅರಣ್ಯಿಕರಣ ಹಾಗೂ ಅದರ ಮಹತ್ವ ಸಾರುವ ವಿವಿಧ ನಮೂನೆಗಳನ್ನು ತಯಾರಿಸಿ ವಿವರಿಸಿದರು.ವಿವರಣೆ ನೀಡುವ ಮಕ್ಕಳ ತೊದಲು ನುಡಿ ಹಾಗೂ ಅವರ ಹಾವಭಾವಗಳು ಎಲ್ಲರ ಗಮನ ಸೆಳೆದವು.ಬೆಳಿಗ್ಗೆ ಆರಂಭಗೊಂಡ ಮಕ್ಕಳ ಒಂದು ದಿನದ ಪ್ರದರ್ಶನ ಮೇಳಕ್ಕೆ ಸಿಆರ್‌ಸಿ ವಿಜಯಲಕ್ಷ್ಮೀ ನವಲಿ ಸೇರಿದಂತೆ ಪಾಲಕರು ಹಾಗೂ ಸಾರ್ವಜನಿಕರು ಭೇಟಿ ನೀಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಸ್ಥಾಪಕ ಅಧ್ಯಕ್ಷ ಶಾಂತಪ್ಪ ಸಾವಳಗಿ, ಕಾರ್ಯದರ್ಶಿ ಸಂತೋಷ ಸಾವಳಗಿ, ಸಿಬ್ಬಂದಿ ಭಾಗ್ಯಶ್ರೀ ಹಂಚಾಟೆ, ಪವಿತ್ರಾ ಹಳಿಮನಿ, ಪೂಜಾ ಹಿರೇಮಠ ಮಕ್ಕಳಾದ ಪ್ರೀತಂ…
ಸಿಂದಗಿ: ಇಸ್ರೋ ಸಂಸ್ಥೆಯಲ್ಲಿ ಶ್ರೀ ಗುರುಕೃಪಾ ಶಾಲೆಯ ವಿದ್ಯಾರ್ಥಿಗಳು ಬರಬೇಕು, ಭವ್ಯ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಹಕಾರಿಯಾಗಬೇಕೆಂದು ಇಸ್ರೋ ವಿಜ್ಞಾನಿ ಅಭಿಷೇಕ ಅರವಿಂದ ದೇಶಪಾಂಡೆ ಅವರು ಕರೆ ನೀಡಿದರು.ಶ್ರೀ ಗುರುಕೃಪಾ ಇಂಗ್ಲೀಷ ಮಾದ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಈ ಸಂಸ್ಥೆಯಲ್ಲಿ ದೇಶದ ಅತ್ಯುನ್ನತ ಸಂಸ್ಥೆ ಇಸ್ರೊಕ್ಕೆ ಸೇರಿಸುವ ಮಟ್ಟದಲ್ಲಿ ಈ ಗುರುಕೃಪಾ ಶಾಲೆಯಲ್ಲಿ ಬೋಧನೆ ಆಗುತ್ತಿದೆ, ಇಲ್ಲಿಯ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯಲ್ಲಿಯ ಶಿಕ್ಷಕರು ಉತ್ತಮ ಜ್ಞಾನಾರ್ಜನೆ ಮಾಡುತ್ತಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು, ಗುರುವಿನ ಸ್ಮರಣೆ ಸದಾ ನಮ್ಮಲ್ಲಿರಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳು ತಮ್ಮಲ್ಲಿ ಜಾಣ್ಮೆ ಇದ್ದು, ಸಂಕುಚಿತ ಮನೋಭಾವನೆ ಇಟ್ಟುಕೊಳ್ಳದೇ ಧೈರ್ಯದಲ್ಲಿ ಮುನ್ನುಗ್ಗಿ ಸಾಧನೆ ಮಾಡಿದಾಗಲೇ ಗುರಿ ಮುಟ್ಟಲು ಸಾಧ್ಯ. ಅದಕ್ಕೆ ನಾನೆ ಒಂದು ಉದಾಹರಣೆ ಎಂದರಲ್ಲದೆ, ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕಲಿತ ಶಾಲೆಗೆ ಕೀರ್ತಿ ತರುವಂತವರಾಗಬೇಕೆಂದರು.ಅತಿಥಿಯಾಗಿ ಬಸವ ಸಮಿತಿ ಅಧ್ಯಕ್ಷ…
’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ ಜೆ. ಅಬ್ಬಿಗೇರಿಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ತಪ್ಪು ಮಾಡುವುದು ಸಹಜ ತಿದ್ದಿ ನಡೆಯೋನೇ ಮನುಜ ಎಂದು ಬಲ್ಲವರು ಹೇಳುತ್ತಾರೆ.ಅಂದರೆ ತಪ್ಪು ಮಾಡುವದು ಮಾನವನ ಸಹಜ ಗುಣ. ಎಂಥ ಮಹಾನ್ ಸಾಧಕನೇ ಆಗಲಿ, ಏನಾದರೂ ಒಂದು ತಪ್ಪು ಮಾಡಿಯೇ ಮಾಡುತ್ತಾನೆ. ಮಾನವ ಪರಿಪೂರ್ಣನಲ್ಲ. ದೇವರು ಮಾತ್ರ ಪರಿಪೂರ್ಣ ತಪ್ಪುಗಳನ್ನು ನೋಡದೆ ಕೇವಲ ಗುಣಗಳನ್ನು ಮಾತ್ರ ಗಮನಿಸುವದೇ ಕ್ಷಮೆ ’ಒಮ್ಮೆ ತಪ್ಪು ಮಾಡಿದವರಿಗೆ ಸರಿಪಡಿಸಿಕೊಳ್ಳಲು ಅವಕಾಶ ಕೊಡುವುದು ಕ್ಷಮೆ. ಘೋರ ಅಪರಾಧ ಮಾಡಿದವನನ್ನು ಸರಿದಾರಿಗೆ ತರಲು ಕ್ಷಮೆಯಿಂದ ಮಾತ್ರ ಸಾಧ್ಯ ಎಂಬ ನಂಬಿಕೆ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ನಮಗೆ ಕಾಣುವುದೇ ಇಲ್ಲ. ನಮ್ಮ ತಪ್ಪುಗಳು ಅರಿವಿಗೆ ಬಂದರೂ ಅವುಗಳನ್ನು ಇತರರ ಮೇಲೆ ಹೊರಿಸಿ ಕೈತೊಳೆದುಕೊಳ್ಳಲು ನೋಡುತ್ತೇವೆ. ನಮ್ಮ ತಪ್ಪುಗಳ ಕುರಿತು ನಾವು ಕ್ಷಮಾಶೀಲರಾಗಿರುತ್ತೇವೆ.ನಮ್ಮ ಎಡೆಯಲ್ಲಿನ ಎಮ್ಮೆ ಕಾಣಿಸುವದಿಲ್ಲ ಮತ್ತೊಬ್ಬರ ಎಡೆಯಲ್ಲಿನ ನೊಣ ಕಾಣಿಸುತ್ತೆ ಅಂತ ಅದಕ್ಕೆ ಹಿರಿಯರು ಗಾದೆ ಮಾಡಿದ್ದು.ಕ್ಷಮಾ ಗುಣದ…
