ಬಸವನಬಾಗೇವಾಡಿ: ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಳ್ಳಿ ಗ್ರಾಮದ ರವಿ ಮಲ್ಲಿಕಾರ್ಜುನ ತಡಕಲ್(೪೧) ಡಿ.೧೨,೨೦೨೩ ರಂದು ಮನೆಯಿಂದ ಬೆಳಗ್ಗೆ ೮ ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಹೋದವರು ಇದುವರೆಗೂ ಮನೆಗೆ ಬಂದಿಲ್ಲ ಎಂದು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮಾ. ೧,೨೦೨೪ ರಂದು ರವಿ ತಡಕಲ್ ಅವರ ತಾಯಿ ಶಿವಬಾಯಿ ಮಲ್ಲಿಕಾರ್ಜುನ ತಡಕಲ್ ಪ್ರಕರಣ ದಾಖಲಿಸಿದ್ದಾರೆ.
ಅವರು ದಾಖಲಿಸಿರುವ ಪ್ರಕರಣದ ಮಾಹಿತಿಯಲ್ಲಿ ನನಗೆ ಅನ್ನಪೂರ್ಣ, ರವಿ, ನೀಲಮ್ಮ, ಸುಜಾತಾ, ಬಸವರಾಜ ಎಂದು ಐದು ಮಕ್ಕಳಿದ್ದು. ಎಲ್ಲ ಮಕ್ಕಳಿಗೂ ಮದುವೆಯಾಗಿದೆ. ಅದರಂತೆ ರವಿಗೂ ೧೨ ವರ್ಷದ ಹಿಂದೆ ರೇಖಾ ಎಂಬುವಳೊಂದಿಗೆ ಮದುವೆಯಾಗಿ ಸೌಮ್ಯ, ಸಂಗಮೇಶ ಎಂಬ ಇಬ್ಬರು ಮಕ್ಕಳಿದ್ದಾರೆ. ರವಿಗೆ ಕುಡಿಯುವ ಚಟವಿದ್ದರಿಂದಾಗಿ ಅವನು ಹಿಂದೆ ಅನೇಕ ಸಲ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆ ಬಿಟ್ಟು ಹೋಗಿ ಸುಮಾರು ತಿಂಗಳುಗಟ್ಟಲೆ ಹೊರಗೆ ಇದ್ದು ತಾನೇ ಬರುತ್ತಿದ್ದನು. ಆಗ ಅವನನ್ನು ವಿಚಾರಿಸಿದಾಗ ವಿಜಯಪುರದಲ್ಲಿ ಅಡತಿಯಲ್ಲಿ ಇದ್ದೇ ಅಂತ ಹೇಳುತ್ತಿದ್ದನು. ಆಗ ನಾವು ಅವನಿಗೆ ಮನೆ ಬಿಟ್ಟು ಹೋಗಬೇಡ ನಮ್ಮದೇ ಸಾಕಷ್ಟು ಹೊಲ ಇದೆ. ಇಲ್ಲಿಯೇ ದುಡಿದು ತಿನ್ನು ಎಂದು ಹೇಳಿದರೂ ಅವನು ಹಾಗೇ ಮಾಡುತ್ತಿದ್ದನು.ಡಿ.೧೨, ೨೦೨೩ ರಂದು ಮನೆಯಲ್ಲಿ ಯಾರಿಗೂ ಹೇಳದೇ ಮನೆ ಬಿಟ್ಟು ಹೋಗಿದ್ದಾನೆ. ಹಿಂದೆ ಇದೇ ರೀತಿಯಲ್ಲಿ ಮನೆ ಬಿಟ್ಟು ಹೋಗುತ್ತಿದ್ದರಿಂದಾಗಿ ಅವನು ಮನೆಗೆ ಮರಳಿ ಬರುತ್ತಾನೆ ಎಂದು ಸುಮ್ಮನಿದ್ದು, ಅವನು ಮನೆಗೆ ಮರಳಿ ಬಾರದೇ ಇರುವದರಿಂದಾಗಿ ವಿಜಯಪುರ, ರೇವತಗಾಂವ, ಚಡಚಣ, ಇಂಡಿ ಸೇರಿದಂತೆ ಎಲ್ಲ ಸಂಬಂಧಿಕರ ಹತ್ತಿರ ಇವನ ಬಗ್ಗೆ ವಿಚಾರಿಸಿ ಹುಡುಗಾಟ ಮಾಡಿದರೂ ಅವನು ಸಿಕ್ಕಿರುವುದಿಲ್ಲ. ನನ್ನ ಮಗ ನೋಡಲು ಸಾದಗೆಂಪು ಗೋಧಿ ಬಣ್ಣ, ಎತ್ತರ ೫ ಪೂಟ ೫ ಇಂಚು, ಗುಂಡು ಮುಖವಿದೆ. ಅವನು ಮನೆಯಿಂದ ಹೋಗುವಾಗ ನೀಲಿ ಕಲರ್ ಪ್ಯಾಂಟು, ಬಿಳಿ ಶರ್ಟ್ ಧರಿಸಿದ್ದಾನೆ. ಕನ್ನಡ ಭಾಷೆ ಮಾತನಾಡುತ್ತಾನೆ ಎಂಬ ಮಾಹಿತಿ ಪ್ರಕರಣದಲ್ಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

