ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ರ ಮತದಾನವು ಮೆ.೭ರಂದು ನಡೆಯಲಿದ್ದು, ಜಿಲ್ಲೆಯ ಎಲ್ಲಾ ೨೦೮೫ ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಸಲುವಾಗಿ ಮೇ ೫ ರಿಂದ ೭ ರವರೆಗೆ ಮತದಾನ ಮುಕ್ತಾಯವಾಗುವರೆಗೂ ಜಿಲ್ಲೆಯಲ್ಲಿ ಸೆಕ್ಷನ್ ೧೪೪ ರ ಪ್ರತಿಭಂದಕಾಜ್ಞೆ ಜಾರಿ ಮಾಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯಾದ ಟಿ. ಭೂಬಾಲನ್ ಆದೇಶ ಹೊರಡಿಸಿದ್ದಾರೆ.
ಮೇ ೫ ರಿಂದ ಮೇ ೭ ರಂದು ಮತದಾನ ಮುಗಿಯವವರೆಗೂ ೫ ಕ್ಕಿಂತ ಹೆಚ್ಚು ಜನರು ಗುಂಪು ಗುಂಪು ಸೇರುವುದು, ಮೆರವಣಿಗೆ, ಸಭೆ ಸಮಾರಂಭ ಜರುಗಿಸುವುದು ನಿಷೇಧಿಸಿದೆ. ಅದಲ್ಲದೇ, ಶಸ್ತಾçಸ್ತçಗಳನ್ನು ತೆಗೆದುಕೊಂಡು ಸಂಚರಿಸುವುದು, ಮತಗಟ್ಟೆಗಳ ೧೦೦ ಮೀಟರ್ ಸುತ್ತಮುತ್ತ ರಾಜಕೀಯ ಪಕ್ಷಗಳ ಪೋಸ್ಟರ್, ಬ್ಯಾನರ್ ಹಾಗೂ ಪ್ರಚಾರ, ಸಾರ್ವಜನಿಕವಾಗಿ ಪ್ರಚೋಧನಕಾರಿ ಹೇಳಿಕೆ, ವ್ಯಕ್ತಿಗಳ ತೇಜೋವಧೆ ಮಾಡುವುದು, ಮತಗಟ್ಟೆಯ ಸುತ್ತಮುತ್ತ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ನಿರ್ಬಂದವಿರುತ್ತದೆ ಎಂದು ತಮ್ಮ ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
