Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಮಕ್ಕಳ ಆಸಕ್ತಿಕರ ಕಲಿಕೆಯಲ್ಲಿ ಶಾಲಾ ಆವರಣ ಹಾಗೂ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಸರ್ಕಾರಿ ಉರ್ದು ಶಾಲೆಗೆ ಇತ್ತೀಚಿಗೆ ಭೇಟಿ ನೀಡಿ ಶಾಲೆ ಹಾಗೂ ಕೋಣೆಗಳು ರೈಲು ಮಾದರಿಯಲ್ಲಿ ಬಣ್ಣ ಬಳಿದುಕೊಂಡು ಅಲಂಕೃತಗೊಂಡ ಬಗ್ಗೆ ತಮ್ಮ ಹರ್ಷ ವ್ಯಕ್ತಪಡಿಸಿ ಶಾಲಾ ಸಿಬ್ಬಂದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇವೆ ಎಂದು ಬಹುತೇಕ ಶಾಲೆಗಳ ಕುರಿತು ದೂರು ಬರುತ್ತಿರುವ ಈ ಸಂದರ್ಭದಲ್ಲಿ ಇರುವ ಸೌಲಭ್ಯಗಳನ್ನು ಬಳಕೆ ಮಾಡಿಕೊಂಡು ವ್ಯವಸ್ಥಿತವಾಗಿ ಶಾಲೆಯನ್ನು ಸುಂದರವನ್ನಾಗಿಸಿ, ಮಕ್ಕಳ ಮನಸೆಳೆಯವಲ್ಲಿ ಮುಖ್ಯಗುರು ಹಾಗೂ ಸಿಬ್ಬಂದಿ ಶ್ರಮಿಸಿದ್ದಾರೆ. ಅವರ ಶ್ರಮ ಹಾಗೂ ವಿಶೇಷ ಪ್ರಯತ್ನವನ್ನು ಪಾಲಕರು ಅರಿತುಕೊಂಡು ಸಹಕಾರ ನೀಡುವಂತೆ ಸಲಹೆ ನೀಡಿದರು. ನಂತರ ಶಾಲಾ ಸಿಬ್ಬಂದಿಯಿಂದ ಸನ್ಮಾನ ಸ್ವೀಕರಿಸಿದರು.ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಮ್.ವಾಲೀಕಾರ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಮುಖ್ಯಗುರು ಆರ್.ಎಮ್.ಹಳ್ಳಿ, ಸಿಬ್ಬಂದಿ ಎಮ್.ಎ.ಹೆಬ್ಬಾಳ, ಎಂ.ಜಿ.ಯಂಕಂಚಿ, ಬಂದೇನವಾಜ್ ಸೇರಿದಂತೆ ಎಸ್‌ಡಿಎಮ್‌ಸಿ ಅಧ್ಯಕ್ಷ ಮುಸ್ತಫಾ ಮುಲ್ಲಾ, ಅಮೀರ್…
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಫೆ.೭ ರಂದು ಬೆಳಗ್ಗೆ ೧೧ ಗಂಟೆಗೆ ಫೆ.೧೦ ರಂದು ಆಚರಿಸಲ್ಪಡುವ ಕಾಯಕ ಶರಣರ ಜಯಂತಿ, ಫೆ.೧೫ ರಂದು ಆಚರಿಸಲ್ಪಡುವ ಸಂತ ಸೇವಾಲಾಲ್ ಜಯಂತಿ ಆಚರಣೆ ಕಾರ್ಯಕ್ರಮವನ್ನು ತಾಲೂಕಾಡಳಿತದಿಂದ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಸಭೆಗೆ ಎಲ್ಲ ಇಲಾಖೆಯ ಮುಖ್ಯಾಧಿಕಾರಿಗಳು, ಮಾದರ ಚನ್ನಯ್ಯ, ಮಾದರ ದೂಳಯ್ಯ, ಸಮಗಾರ ಹರಳಯ್ಯ,ಡೋಹರ ಕಕ್ಕಯ್ಯ, ಉರಲಿಂಗ ಪೆದ್ದಿ ಸಮುದಾಯದ ಮುಖಂಡರು, ತಾಲೂಕಿನ ಸಮಸ್ತ ಎಸ್ಸಿ,ಎಸ್ಟಿ ಜನಾಂಗ ಬಾಂಧವರು, ಬಂಜಾರ ಸಮಾಜದ ಅಧ್ಯಕ್ಷರು, ಸರ್ವ ಪದಾಧಿಕಾರಿಗಳು, ಮುಖಂಡರು, ತಾಲೂಕಿನ ಸಮಸ್ತ ವಿವಿಧ ಸಮಾಜದ ಬಾಂಧವರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಗಣ್ಯರು ಆಗಮಿಸಿ ಸಲಹೆ-ಸೂಚನೆ ನೀಡಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಡಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯು ತಾಲೂಕಿನ ಫೆ.೭ ರಂದು ಸಂಜೆ ೪ ಗಂಟೆಗೆ ಮುತ್ತಗಿ ಗ್ರಾಮದ ಮೂಲಕ ಬಸವನಾಡಿಗೆ ಜ್ಯೋತಿ ರಥಯಾತ್ರೆಯು ಪ್ರವೇಶ ಮಾಡಲಿದೆ. ರಥಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡ ನಂತರ ಫೆ. ೮ ರಂದು ಬೆಳಗ್ಗೆ ೧೦ ಬಸವನಬಾಗೇವಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜ್ಯೋತಿ ರಥಯಾತ್ರೆ ಸಂಚರಿಸಿ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ,ಸಂಸ್ಕ್ರತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವಜನತೆಗೆ ಕನ್ನಡದ ಅರಿವು ಬಿಂಬಿಸಲಾಗುವುದು. ಇದೇ ದಿನ ತಾಲೂಕಿನ ಮಸಬಿನಾಳ, ಇಂಗಳೇಶ್ವರ, ದಿಂಡವಾರ, ಹೂವಿನಹಿಪ್ಪರಗಿಯಲ್ಲಿ ಸಂಚರಿಸಿ ಹೂವಿನಹಿಪ್ಪರಗಿಯಲ್ಲಿ ವಾಸ್ತವ್ಯ ಮಾಡಲಿದೆ. ಫೆ.೯ ರಂದು ಹುಲಬೆಂಚಿ, ಬಳಗಾನೂರ ಗ್ರಾಮದ ಮೂಲಕ ತಾಳಿಕೋಟಿ ತಾಲೂಕಿಗೆ ಜ್ಯೋತಿ ರಥಯಾತ್ರೆಯನ್ನು ಬೀಳ್ಕೊಡಲಾಗುತ್ತದೆ. ಜ್ಯೋತಿ ರಥ ಯಾತ್ರೆಯ ಸ್ವಾಗತ, ಬೀಳ್ಕೊಡುಗೆ,ವಿವಿಧ ಗ್ರಾಮದಲ್ಲಿ ಸಂಚರಿಸುವ ಸಂದರ್ಭದಲ್ಲಿ ತಾಲೂಕಿನ ಜನಪ್ರತಿನಿಧಿಗಳು, ಕನ್ನಡಪರ ಒಕ್ಕೂಟಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು,…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಜೆಡಿಎಸ್ ಮುಖಂಡ ಸೋಮನಗೌಡ (ಅಪ್ಪುಗೌಡ) ಪಾಟೀಲ ಅವರನ್ನು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಹಿರಿಯ ಉಪಾಧ್ಯಕ್ಷರನ್ನಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಅವರ ಆಪ್ತ ವೈಭವ ಪಾಟೀಲ ತಿಳಿಸಿದ್ದಾರೆ.
ಮುದ್ದೇಬಿಹಾಳ: ಕಸ ವಿಲೇವಾರಿ ವಾಹನ ಬರದ ಕಾರಣ ತಮ್ಮ ಮನೆಯ ಕಸವನ್ನು ತಂದು ಪುರಸಭೆ ಕಾರ್ಯಾಲಯದಲ್ಲಿ ಎಸೆದ ಘಟನೆ ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.ಪಟ್ಟಣದ ಹೊರಪೇಟ ಗಲ್ಲಿಯ ನಿವಾಸಿ ಮುತ್ತು ಪೂಜಾರಿ ಪುರಸಭೆ ಕಾರ್ಯಾಲಯದಲ್ಲಿ ಕಸ ಎಸೆಯುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಸಿದ್ದಾನೆ. ಈ ಬಗ್ಗೆ ಮಾಧ್ಯಮದ ದೊಂದಿಗೆ ಮಾತನಾಡಿದ ಅವರು ಪುರಸಭೆಗೆ ಅತ್ಯಂತ ಸಮೀಪವಿರುವ ನಮ್ಮ ಬಡಾವಣೆಗೆ ಕಳೆದ ೧೫ ದಿನಗಳಿಂದ ಕಸ ವಿಲೇವಾರಿ ವಾಹನ ಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದರೆ ಇಲ್ಲದ ಕುಂಟು ನೆಪ ಹೇಳುತ್ತಾರೆ. ಸ್ವಚ್ಛ ಭಾರತ ಅಂತಾ ದೊಡ್ಡದಾಗಿ ಪ್ರಚಾರ ಮಾಡುವ ಇವರು ೧೫ ದಿನಗಳ ವರೆಗೆ ಕಸವನ್ನು ಎಲ್ಲಿ ಇಟ್ಟುಕೊಂಡು ಕೂಡಬೇಕು? ಹಸಿ ಕಸ ಬೇರೆ ಮಾಡಿ ಒಣ ಕಸಬೇರೆ ಮಾಡಿ, ಸ್ವಚ್ಛತೆಯೇ ನಮ್ಮ ಸಂಸ್ಕಾರ ಎಂದು ಹಾಡು ಬರುತ್ತೆ ಆದರೆ ಪುರಸಭೆ ಅಧಿಕಾರಿಗಳ ಬಳಿಯೇ ಸ್ವಚ್ಛತೆಯ ಸಂಸ್ಕಾರ ಇಲ್ಲ. ಕಸ ವಿಲೇವಾರಿ ವಾಹನವನ್ನು ಕಳಿಸಿ ಎಂದು ದಿನಂಪ್ರತಿ ಹೇಳಿ ವಾಹನ ಬರದೇ ಇರುವದಕ್ಕೆ ಇವತ್ತು…
ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮದಲ್ಲಿ ಫೆ.೧೨ ರಿಂದ ಮಾ.೮ ರವರೆಗೆ ಕಡಕೋಳ ಶ್ರೀ ಮಡಿವಾಳೇಶ್ವರರ ಜೀವನ ಚರಿತ್ರೆ ಪ್ರವಚನವು ಸಾಯಂಕಾಲ ೭:೩೦ಗಂಟೆಯಿಂದ ಶ್ರೀಮಠದ ಶ್ರೀ ಪ್ರಭಲಿಂಗ ಶರಣರ ಅಮೃತ ವಾಣಿಯಿಂದ ಜರಗುವುದು. ಕಾರಣ ಹಿಕ್ಕಣಗುತ್ತಿ-ತಡವಲಗಾ ಹಾಗೂ ಗ್ರಾಮದ ಸುತ್ತ ಮುತ್ತಲಿನ ಸದ್ಭಕ್ತರು ಭಾಗವಹಿಸಬೇಕು. ಸಂಗೀತ ಸೇವೆಯನ್ನು ಬೋರಗಿಯ ವಿರೇಶ ವಿಶ್ವಕರ್ಮ, ಚಿಟಗುಪ್ಪಾದ ಪ್ರವೀಣ ವಿಶ್ವಕರ್ಮ, ನಂದಿ ಸೇವಯನ್ನು ಅಣ್ಣಾರಾಯಗೌಡ ಬಿರಾದಾರ ನಡೆಸಿಕೊಡುವರು ಎಂದು ಪಂಚಮಸಾಲಿ ಸಮಾಜ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ಈ ವೇಳೆ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಗ್ರಾಂಪ ಅಧ್ಯಕ್ಷ ಎನ್.ಎಸ್ ಬಿರಾದಾರ, ಉಪಾಧ್ಯಕ್ಷ ಅಮೃತ ಮರಬದ, ಚಂದ್ರಕಾಂತ ಸಣ್ಣಮನಿ, ಸಿದ್ದರಾಮ ಬಾದನ, ಶಿವಲಿಂಗಪ್ಪ ಸತಾಲಗಾವ್, ನಾಗಣ್ಣ ಬಿರಾದಾರ, ಎಚ್.ಎಂ.ಪಾಟೀಲ್ ಯಡಗಿ ಸೇರಿದಂತೆ ಗ್ರಾಮಸ್ಥರು ಇದ್ದರು.
ಸಿಂದಗಿ: ತಾಯ್ತನವುಳ್ಳವರಿಂದ ಮಾತ್ರ ಮಕ್ಕಳ ಸಾಹಿತ್ಯ ರಚನೆ ಸಾಧ್ಯ. ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯ ಗಟ್ಟಿಯಾಗಿದೆ. ಜಿಲ್ಲೆ ಮಕ್ಕಳ ಸಾಹಿತ್ಯದ ಖಣಜವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಎಂ. ಪಡಶೆಟ್ಟಿ ಅಭಿಪ್ರಾಯಪಟ್ಟರು.ಪಟ್ಟಣದ ಸಾರಂಗಮಠದ ಆವರಣದಲ್ಲಿ ವಿದ್ಯಾಚೇತನ ಪ್ರಕಾಶನ ಹಮ್ಮಿಕೊಂಡಿದ್ದ ಐದು ಕೃತಿಗಳ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಪ.ಗು.ಸಿದ್ದಾಪೂರ ಗಟ್ಟಿಯಾಗಿ ನೆಲೆ ನಿಂತಿದ್ದಾರೆ. ಮಕ್ಕಳ ಸಾಹಿತ್ಯವನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವ ಜನಾಂದೋಲನ ಪ್ರಾರಂಭಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಮಾತನಾಡಿದರು.ಇದೇ ಸಂದರ್ಭದಲ್ಲಿ ಮಕ್ಕಳ ಸಾಹಿತಿ ಹ.ಮ. ಪೂಜಾರ ರಚಿತ ಚತುರ ಚಿಣ್ಣರು ಕಥಾ ಸಂಕಲನ, ಕೆಮ್ಮಿನ ಔಷಧಿ ಉಚಿತ ನಗೆ ಹನಿ ಪುಸ್ತಕ, ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ರಚಿತ ಅಕ್ಕರೆ ಅಜ್ಜ ನಾವು ಮತ್ತು ಗಾಂಧಿ ತಾತ ಕವನ ಸಂಕಲನ, ಶಿಕ್ಷಕ ಸಾಹಿತಿ ಎಸ್.ಎಸ್.ಸಾತಿಹಾಳ ರಚಿತ ಏನು ಚಂದವೋ ಮಕ್ಕಳ ಕವನ ಸಂಕಲನವನ್ನು ಸಾರಂಗಮಠ-ಗಚ್ಚಿನಮಠದ…
ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ಪ್ರದಾನ ವಿಜಯಪುರ: ಕೆಯುಡಬ್ಲೂಜೆ ಉತ್ತಮ ಜಿಲ್ಲಾ ಸಂಘ ಪ್ರಶಸ್ತಿಗೆ ಪುರಸ್ಕೃತವಾದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪ್ರಶಸ್ತಿ ಪ್ರದಾನ ಮಾಡಿದರು.ಪ್ರಶಸ್ತಿಗೆ ಪುರಸ್ಕೃತವಾದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಸಂಘದ ಸದಸ್ಯರ ಹರ್ಷೋದ್ಘಾರಗಳ ಮಧ್ಯೆ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.ಶಶಿಕಾಂತ ಪ್ರಶಸ್ತಿ ಸ್ವೀಕಾರ: ಇದೇ ವೇಳೆ ಅತ್ಯುತ್ತಮ ತನಿಖಾ ವರದಿಗೆ ಟಿ.ಕೆ. ಮಲಗೊಂಡ ರಾಜ್ಯ ಪ್ರಶಸ್ತಿಯನ್ನು ಖಾಸಗಿ ವಾಹಿನಿಯ ವರದಿಗಾರ ಶಶಿಕಾಂತ ಮೆಂಡೆಗಾರ ಸ್ವೀಕರಿಸಿದರು.ಬಳಿಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿ ಲಭಿಸಿರುವುದು ಮತ್ತು ನಾನೇ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ…
Udayarashmi kannada daily newspaper
ಇಂಡಿ: ಪಟ್ಟಣದ ಎಸ್.ಎಸ್.ವಿ.ವಿ. ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ತಾಲೂಕಾ ಆಸ್ಪತ್ರೆ ಎನ್.ಸಿ.ಡಿ ಘಟಕ ಹಾಗೂ ಎನ್.ಎಸ್.ಎಸ್, ರೆಡ್ ಕ್ರಾಸ್ ಮತ್ತು ಸ್ಕೌಟ್ಸ್ ಗೈಡ್ಸ್ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಸೋಮವಾರ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ರವಿ ಭತಗುಣಕಿ ಮಾತನಾಡಿ, “ಮಾರಕ ಕಾಯಲೆಯಾದ ಕ್ಯಾನ್ಸರ್ ರೋಗದ ಕುರಿತು ಕ್ಯಾನ್ಸರ್ ಜಾಗತಿಕ ಮಟ್ಟದಲ್ಲಿ ಸಾವಿನ ಎರಡನೆಯ ಪ್ರಮುಖ ಕಾರಣವಾಗಿದೆ. ಶೇಕಡಾ ಮೂರನೆಯ ಒಂದರಷ್ಟು ಕ್ಯಾನ್ಸರ್‌ಗಳಿಗೆ ನಮ್ಮ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ದತಿಗಳೇ ಪ್ರಮುಖ ಕಾರಣ ಎಂದರು.ಕಡಿಮೆ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ, ಕುಂಟಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆ, ಧೂಮ್ರಪಾನ -ಮಧ್ಯಪಾನದ ಅತೀಯಾದ ಸೇವನೆ, ಅಲ್ಟಾç ವೈಲೆಟ್ ವಿಕೀರಣಗಳು ನಗರ ಪ್ರದೇಶದಲ್ಲಿನ ಅತೀಯಾದ ವಾಯುಮಾಲಿನ್ಯ ಮತ್ತು ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳ ಬಳಕೆ ಕ್ಯಾನ್ಸರ್‌ಗೆ ಕಾರಾಣವಾಗುವ ಅಂಶಗಳಾಗಿವೆ. ಶೇಕಡಾ ಮೂರನೆಯ…
