ವಿಜಯಪುರ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿದ ಜಾಗೃತಿ ನಾಗರಿಕ ವೇದಿಕೆ ಹಾಗೂ
ವಿಶ್ವ ಹಿಂದು ಪರಿಷತ್ ಜಿಲ್ಲಾ ಘಟಕದ ಕಾರ್ಯಕರ್ತರು ಹತ್ಯೆ ಆರೋಪಿಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವಿಹಿಂಪ ವಿಭಾಗ ಪ್ರಮುಖ ಶ್ರೀಮಂತ ದುದ್ದಗಿ, ಜಿಲ್ಲಾ ಕಾರ್ಯದರ್ಶಿ ಸಿದ್ದು ಹೂಗಾರ್, ಪ್ರಾಂತ ಪ್ರಮುಖ ಶ್ರೀಮತಿ ಮಾಯಕ್ಕ ಚೌದರಿ, ಮಂಚಾಲೇಶ್ವರಿ ಹಾಗೂ ಮುಖಂಡ ರಾಜು ಗಚ್ಚಿನಮಠ ಮಾತನಾಡಿ, ಗೃಹ ಸಚಿವರು ತನಿಖೆಗೂ ಮೊದಲೇ ಇದು ವೈಯಕ್ತಿಕ ಪ್ರೀತಿಗಾಗಿ ನಡೆದ ಕೊಲೆ ಎಂದು ಹಗುರವಾಗಿ ಹೇಳಿಕೆ ನೀಡಿ ತನಿಖೆ ದಾರಿಯನ್ನು ತಪ್ಪಿಸುವ ಹುನ್ನಾರ ಮತ್ತು ಮುಸ್ಲಿಂ ಓಟ್ ಬ್ಯಾಂಕ್ ಒಲೈಕೆಗೆ ನಾಂದಿ ಹಾಡಿದ್ದಾರೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ತಕ್ಷಣ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಹತ್ಯೆಗೆದ ಹಂತಕ ಫಯಾಜ್ನನ್ನು ಗಲ್ಲಿಗೇರಿಸಬೇಕು. ವಿದ್ಯಾರ್ಥಿನಿಯರಲ್ಲಿ ಅಡಗಿದ ಭಯವನ್ನು ದೂರಗೊಳಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ಪ್ರಮುಖ ಸುನಿಲ್ ಭೈರವಾಡಗಿ, ಚಂದ್ರಶೇಖರ್ ಹರನಾಳ, ಮಹೇಶ ಸಾಲೋಟಗಿ, ಅಶ್ವಿನ್ ಪಟ್ಟಣಶೆಟ್ಟಿ, ಶಿವಾನಂದ ನಾಗರಾಳ, ಅರ್ಜುನ್ ಬಡಚಿ, ಈರಣ್ಣ ಹಳ್ಳಿ, ಗೀತಾ ಅಂಗಡಿ, ಜಯಶ್ರೀ ಅಫ್ಜಲ್ಪುರ್, ಸುನೀಲ ಭೈರವಾಡಗಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

