ಆಲಮಟ್ಟಿ: ಸಮೀಪದ ಸುಕ್ಷೇತ್ರ ಯಲಗೂರು ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ 4ಕ್ಕೆ ಉತ್ಸವ ಮೂರ್ತಿಯನ್ನು ಕೃಷ್ಣಾ ನದಿಗೆ ಒಯ್ದು ಅಲ್ಲಿ ಅಭಿವೃತ್ತ ಸ್ನಾನ ಮಾಡಿಸಲಾಯಿತು. ನದಿ ತೀರದಿಂದ ದೇವಸ್ಥಾನದವರೆಗೆ ನಾನಾ ವಾದ್ಯ ವೈಭವಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ದೇವಸ್ಥಾನ ಆವರಣದಲ್ಲಿ ಸೂರ್ಯೋದಯ ಸಮಯದಲ್ಲಿ ಹನುಮನ ತೊಟ್ಟಿಲು ಹಾಕುವ ಕಾರ್ಯಕ್ರಮ ಜರುಗಿತು. ನಂತರ ಪಾನಕ ಕೋಸಂಬರಿ ವಿತರಿಸಲಾಯಿತು.
ವೇದ ಮಂತ್ರಗಳೊಂದಿಗೆ ಪೂಜೆ ನೆರವೇರಿದ ಮೇಲೆ ಅನೇಕ ಮಹಿಳೆಯರು ಹನುಮನ ಭಕ್ತಿಗೀತೆಗಳನ್ನು ಹಾಡಿದರು. ಯಲಗೂರೇಶನಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ, ಮಹಾಪೂಜೆ, ಅಲಂಕಾರ, ಮಹಾನೈವೇದ್ಯ, ಅನ್ನ ಸಂತರ್ಪಣೆ ಜರುಗಿತು. ಹನುಮನಿಗೆ ಮಾವಿನ ಹಣ್ಣಿನ ಅಲಂಕಾರ ಭಕ್ತರ ಗಮನ ಸೆಳೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

