Author: editor.udayarashmi@gmail.com

ವಿಜಯಪುರ: ಹಿಂದೆಂದೂ ಕಂಡು ಕಾಣದಂತಹ ಬೀಕರ ಬರಗಾಲ ನಮ್ಮ ರಾಜ್ಯಕ್ಕೆ ಒಕ್ಕರಿಸಿದೆ. ಕಳೆದ ೭-೮ ತಿಂಗಳಿನಿಂದ ಮಳೆ ಕಾಣದೇ ಕಂಗಾಲಾಗಿರುವ ರೈತ ಸಮುದಾಯವನ್ನು ಗಣನೆಗೆ ತೆಗೆದುಕೊಂಡು ನಾಳೆ ನಡೆಯಲಿರುವ ಬಜೆಟ್ ಪೂರ್ವ ಅಧಿವೇಶನದಲ್ಲಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ೮ ಶಾಸಕರುಗಳು ರೈತರ ಪರವಾಗಿ ಧ್ವನಿ ಎತ್ತಿ ರೈತರ ಮತದಿಂದ ಆರಿಸಿ ಬಂದಿರುವ ತಾವುಗಳು ಅವರ ಋಣ ತೀರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಪತ್ರಿಕೆ ಮೂಲಕ ಆಗ್ರಹಿಸಿದ್ದಾರೆ.ಅಧಿವೇಶನವೆಂದರೆ ಕೇವಲ ಜಗಳವಾಡುವುದು ಆಗಬಾರದು, ಜಿಲ್ಲೆಗೆ ಹಾಗೂ ಜಿಲ್ಲೆಯ ರೈತರಿಗೆ ಅವಶ್ಯವಾಗಿ ಬೇಕಾಗಿರುವ ಹೊಸ ಯೋಜನೆಗಳ ಕುರಿತು, ಹಾಗೆಯೇ ಹಿಂದೆ ನೆನಗುದಿಗೆ ಬಿದ್ದಿರುವ ಕಾಮಗಾರಿಗಳ ಹಣವನ್ನು ಮಂಜೂರು ಮಾಡುವಂತೆ ಜಿಲ್ಲೆಯ ೮ ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕೆಂದು ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಅನೇಕ ರೈತರು ಆತ್ಮಹತ್ಯ ಮಾಡಿಕೊಂಡಿದ್ದಾರೆ, ರೈತರ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಕನಿಕರ ತೊರದೇ ಬರಗಾಲದಿಂದ ತತ್ತರಿಸಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು,…

Read More

ಮೋರಟಗಿ-ಮುತ್ತಗಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ ವಿಜಯಪುರ: ಭಾರತದ ಸಂವಿಧಾನವು ದಿನವು ಐತಿಹಾಸಿಕ ಹಾಗೂ ಸಾಂಕೇತಿಕ ಮಹತ್ವವನ್ನು ಹೊಂದಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೌರಮ್ಮ ನಡುವಿನಕೇರಿ ಹೇಳಿದರು.ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿ ಕೊಳ್ಳಲಾಯಿತು. ಶಾಲಾ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳೆಯರಿಂದ ಕುಂಭಮೇಳ, ಸಾರ್ವಜನಿಕರು, ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಓದುವುದರ ಮೂಲಕ ಪ್ರಮಾಣ ಮಾಡಲಾಯಿತು. ಸಂವಿಧಾನ ಜಾಗೃತಿ ಜಾಥಾದ ಸ್ತಭ್ದಚಿತ್ರವು ಗುತ್ತರಗಿ, ಗಬಸಾವಳಿಗಿ ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನ ಕುರಿತು ಜಾಗೃತಿ ಮೂಡಿಸಿತು.ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ತಾರಾನಾಥ ರಾಠೋಡ, ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯತ್ ಮೋರಡಗಿ, ಪಿ.ಡಿ.ಒ ರಾಘವೇಂದ್ರ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು ಶಿವಲಿಂಗಪ್ಪ ಹಚಡದ, ಉಪಾಧ್ಯಕ್ಷರು ದೌಲಬಿ ನಡುವುನಕೇರಿ, ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.ಬಸವನಬಾಗೇವಾಡಿ: ಮುತ್ತಗಿಯಲ್ಲಿ…

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಬನ್ನಿಹಟ್ಟಿ (ಪಿ.ಟಿ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿ ಅಧ್ಯಕ್ಷರಾಗಿ ಮಹ್ಮದ ರಫೀಕ ಹಕೀಮ ಹಾಗೂ ಉಪಾಧ್ಯಕ್ಷರಾಗಿ ಪಾರ್ವತಿ ಕರೆಪ್ಪ ಪೂಜಾರಿ ಹಾಗೂ ಸದಸ್ಯರಾಗಿ ಇಮಾಂಬಿ ಮುಲ್ಲಾ, ರುದ್ರಗೌಡ ಬಿರಾದಾರ, ಸಾಹೇಬಗೌಡ ಗುಂಡಕನಾಳ, ರಾಬಿಯಾ ಮುಲ್ಲಾ, ರಾಮರಾವ ಕುಲಕರ್ಣಿ,ನಬಿಲಾಲ ವಾಲಿಕಾರ, ವೀರಭದ್ರಪ್ಪ ಕುಂಬಾರ, ಮಾಲನಬಿ ಶೇಖ, ಅಶೋಕ ಸುಧಾಕರ, ಶರಣಮ್ಮ ಕುಂಬಾರ, ಕಸ್ತೂರಿಬಾಯಿ ಹರಿಜನ, ಈರಯ್ಯ ಭಂಡಾರಿಮಠ, ಮಲ್ಲಮ್ಮ ಕುಂಬಾರ, ಮಡಿವಾಳಪ್ಪ ಮಾದರ, ಸಾಬವ್ವ ಹರಿಜನ, ಸುರೇಖಾ ಜಮಾದಾರ ಸದಸ್ಶರಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಶಗುರು ಜಿ.ಎನ್.ಪಾಟೀಲ ತಿಳಿಸಿದ್ದಾರೆ.ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಗ್ರಾಮದ ಪ್ರಮುಖರಾದ ನಿವೃತ್ತ ಶಿಕ್ಷಕ ಬಿ.ಎನ್.ಪಾಟೀಲ, ಹಿರಿಯ ವಕೀಲ ಬಿ.ಸಿ.ಪಾಟೀಲ, ಬಸವನ ಬಾಗೇವಾಡಿಯ ಬಿಇಒ ಕಛೇರಿಯ ಅಧೀಕ್ಷಕ ಸಿದ್ದನಗೌಡ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿನಿಧಿ ರವೀಂದ್ರ ಸುಧಾಕರ, ಗ್ರಾಪಂ ಸದಸ್ಯರು ಅಭಿನಂಧಿಸಿದರು.ಶಾಲೆ ಮುಖ್ಯಗುರು ಜಿ.ಎನ್.ಪಾಟೀಲ, ಉರ್ದು ಶಾಲೆಯ ಮುಖ್ಯಗುರು ಎಮ್.ಎಮ್.ಇಂಡಿ ಹಾಗೂ ಸಿಬ್ಬಂದಿ ಇದ್ದರು.

Read More

ಸಿಂದಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಗ್ರಾಮದ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾತ ಸಿಂಗೆ ಮಾತನಾಡಿ, ರಾಜ್ಯ ಸರಕಾರ ಡಾ. ಅಂಬೇಡ್ಕರರು ರಚಿಸಿದ ಸಂವಿಧಾನದ ಮೂಲ ಆಶಯಗಳನ್ನು ಸಾರ್ವಜನಿಕರಿಗೆ ಮನೆ ಮಾತಾಗಲಿ ಎಂದು ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಶ್ಲಾಘನೀಯ. ಯಾವುದೇ ಜಾತಿಯಲ್ಲಿ ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ, ಸಮ ಸಮಾಜ ನಿರ್ಮಾಣಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಅಡಕುಗಳನ್ನು ರಚಿಸಿ ನ್ಯಾಯ ಕೊಡಿಸಿದ್ದಾರೆ ಎಂದು ಹೇಳಿದರು.ಗ್ರಾಮದ ಮುಖಂಡ ಯಶವಂತ್ರಯಗೌಡ ರೂಗಿ ಮಾತನಾಡಿ, ಡಾ ಅಂಬೇಡ್ಕರರು ದೀನ ದಲಿತರಿಗೆ ಗುರಿಯಾಗಿಟ್ಟುಕೊಂಡು ಸಂವಿಧಾನ ಬರೆದಿಲ್ಲ, ಎಲ್ಲ ಸಮ ಸಮಾಜಗಳ ನಿರ್ಮಾಣಕ್ಕೆ ಸಂವಿಧಾನ ರಚನೆಯಾಗಿದೆ. ಅದು ಸರಿಯಾಗಿ ಪರಿಚಯವಾಗದ ಕಾರಣ ಕೆಲವು ಪ್ರಮಾದಗಳು ಜರುಗುತ್ತಿದ್ದು ಅದನ್ನು ತಿಳಿಸಿಕೊಡಬೇಕು ಎಂದು ರಾಜ್ಯ ಸರಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಸ್ವಾಗತಾರ್ಹ. ಡಾ. ಅಂಬೇಡ್ಕರರವರ ಆಶಯಗಳ ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ನಾವು ನೀವೆಲ್ಲ ತೊಡಗೋಣ ಎಂದರು.ಗ್ರಾಪಂ ಅಧ್ಯಕ್ಷೆ…

Read More

ಸಿಂದಗಿ: ಬಸವಣ್ಣನವರು ಸಣ್ಣ ಸಮಾಜವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ದರು. ಆದರೆ ಕಾಯಕ ಶರಣರ ಜಯಂತಿಯ ದಿನ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಅಗೌರವ ತೋರಿಸಿದ್ದು ಖಂಡನೀಯ ಎಂದು ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಡೋಹರ್ ಕಕ್ಕಯ್ಯ, ಮಾದರ ಧೂಳಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಸಮಾಜವೆಂದು ತಿಳಿದು ಅಧಿಕಾರಿಗಳು ಗೈರಾಗಿದ್ದು ಬೇಸರವಾಗಿದೆ. ಇನ್ನು ಮುಖ್ಯಾಧಿಕಾರಿಗಳು ಪಟ್ಟಣದ ವೃತ್ತಗಳನ್ನು ಸ್ವಚ್ಚಗೊಳಿಸಬೇಕು. ತಹಶೀಲ್ದಾರ್‌ರು ಆದೇಶ ಮಾಡಬೇಕು. ತಾಲೂಕು ಆಡಳಿತ ಜಯಂತಿಗಳನ್ನು ಕಾಟಾಚಾರಕ್ಕೆ ಆಚರಣೆ ಮಾಡದೇ ಮುಂದಿನ ಯುವ ಜನಾಂಗಕ್ಕೆ ಮಾದರಿಯಾಗುವಂತೆ ಆಚರಣೆಯಾಗಲಿ ಎಂದರು.ಈ ವೇಳೆ ಸಾಯಬಣ್ಣ ದೇವರಮನಿ ಮತ್ತು ಸಾಯಬಣ್ಣ ಪುರದಾಳ ಮಾತನಾಡಿದರು.ಈ ವೇಳೆ ಗ್ರೇಡ್ ೨ ತಹಶೀಲ್ದಾರ್ ಇಂದ್ರಾಬಾಯಿ ಬಳಗಾನೂರ, ಜಿ.ಎಸ್.ರೋಡಗಿ, ಕಂದಾಯ ನಿರೀಕ್ಷಕ ಆಯ್.ಎ.ಮಕಾಂದಾರ, ರವಿಕಿರಣ ಕಟಕೆ, ಸುನಂದಾ ಯಂಪುರೆ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ರಾಜಕುಮಾರ ಭಾಸಗಿ, ರಾಜು…

Read More

ವೈಮಾನಿಕ ಉತ್ಪಾದನೆಯ ಹೊಸ ತಾಣವಾಗಿ ಉದಯವಾಗುತ್ತಿರುವ ಭಾರತ ಮೂಲಭೂತ ಸೌಕರ್ಯಗಳ ಸುಧಾರಣೆ ಮತ್ತು ಸರ್ಕಾರ ಹೆಚ್ಚಿನ ಒತ್ತು ನೀಡುವುದರಿಂದ ಭಾರತದಲ್ಲಿ ಏರೋಸ್ಪೇಸ್ ಉತ್ಪಾದನೆಯು ವೇಗ ಪಡೆದುಕೊಂಡಿದೆ.ಏರೋ ಸ್ಟ್ರಕ್ಚರ್‌ಗಳು, ಕಾಂಪೊನೆಂಟ್‌ಗಳು, ಸಬ್-ಅಸೆಂಬ್ಲಿಗಳು ಮತ್ತು ಸಂಕೀರ್ಣ ಸಿಸ್ಟಮ್ ಅಸೆಂಬ್ಲಿಗಳಿಗೆ ಆದ್ಯತೆಯ ತಾಣವಾಗಿ ಭಾರತವನ್ನು ಅಭಿವೃದ್ಧಿಪಡಿಸುವಲ್ಲಿ ಅನೇಕ ಖಾಸಗಿ ಕಂಪನಿಗಳು ತ್ವರಿತ ಪ್ರಗತಿಯನ್ನು ಸಾಧಿಸಿವೆ.ಪ್ರಮುಖ ಜಾಗತಿಕ ಮೂಲ ಸಲಕರಣೆ ತಯಾರಕರು ಏರೋಸ್ಪೇಸ್ ಸಂಬಂಧಿತ ಭಾಗಗಳು ಮತ್ತು ಅಸೆಂಬ್ಲಿ-ಬ್ಲೈಗಳ ತಯಾರಿಕೆಗಾಗಿ ಭಾರತದಲ್ಲಿ ಜಂಟಿ ಉದ್ಯಮಗಳನ್ನು ಸ್ಥಾಪಿಸಿದ್ದು, ಇದು ಅನೇಕ ವಾಣಿಜ್ಯ ಮತ್ತು ರಕ್ಷಣಾ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳಿಗೆ ದಾರಿ ಮಾಡಿಕೊಡುತ್ತದೆ.ಭಾರತದಲ್ಲಿ ಸಿಂಗಲ್ ಅಸೈಲ್ ಎ220 ಫ್ಯಾಮಿಲಿ ಏರ್ ಕ್ರಾಫ್ಟ್ ಗಾಗಿ ಎಲ್ಲಾ ಬಾಗಿಲು(ಡೋರ್ )ಗಳನ್ನು ತಯಾರಿಸಲು ಬೆಂಗಳೂರು ಮೂಲದ ಡೈನಾಮ್ಯಾಟಿಕ್ ಟೆಕ್ನಾಲಜೀಸ್‌ ಕಂಪನಿಯೊಂದಿಗೆ ಪ್ರಮುಖ ವಿಮಾನ ತಯಾರಕ ಏರ್‌ಬಸ್ ಕೈಜೋಡಿಸುತ್ತಿರುವುದು ಹೊಸ ಸೇರ್ಪಡೆಯಾಗಿದೆ.ಈ ಒಪ್ಪಂದವು ಮಹತ್ವದ ಮೈಲಿಗಲ್ಲಾಗಿ ಗುರುತಿಸುವುದಲ್ಲದೆ, ಮೇಕ್ ಇನ್ ಇಂಡಿಯಾ ಉಪಕ್ರಮದ ಯಶಸ್ಸನ್ನು ಬಿಂಬಿಸುತ್ತದೆ.ಒಪ್ಪಂದದ ಪ್ರಕಾರ, ಡೈನಾಮಿಕ್ ಟೆಕ್ನಾಲಜೀಸ್ ಎ220 ಕೌಟುಂಬಿಕ ವಿಮಾನ( ಪ್ರತಿ…

Read More

ಕೊಲ್ಹಾರ: ಮಾನವರ ಆದರ್ಶ ಬದುಕಿಗೆ ಜಾನಪದ ಆಚಾರ ವಿಚಾರಗಳು ದಾರಿ ದೀಪವಾಗಿವೆ. ಸಾರ್ವತ್ರಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ, ಜನರ ಬದುಕಿನಲ್ಲಿ ಶಾಂತಿ ಹಾಗೂ ನೆಮ್ಮದಿ ತುಂಬಬಲ್ಲ ಸಾಮರ್ಥ್ಯ ಜಾನಪದ ಸಂಸ್ಕೃತಿಗಿದೆ. ಅದಕ್ಕಾಗಿ ಜಾನಪದ ಸಂಸ್ಕೃತಿ ಎಂದಿಗೂ ಹಾಳಾಗಬಾರದು ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಹೇಳಿದರು.ಕೊಲ್ಹಾರ ತಾಲೂಕಿನ ಕವಲಗಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕ ಮತ್ತು ಕೊಲ್ಹಾರ ತಾಲೂಕು ಘಟಕದ ಸಹಯೋಗದಲ್ಲಿ ಕೂಡಗಿ ಕ ಜಾ ಪ ವಲಯ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು,ಹಿರಿಹೊಳಿ ತಟದ ಈ ಭಾಗದಲ್ಲಿ ಜನಪದ ಕಲೆಗಳು ಪ್ರತಿ ಮನೆಯಲ್ಲಿಯೂ ಕಾಣುತ್ತೇವೆ. ಸಂಘ, ಸಂಸ್ಥೆ ಮತ್ತು ಸಮುದಾಯಗಳು ಜಾನಪದ ಕಲಾವಿದರಿಗೆ ಸಹಾಯ ಸಹಕಾರ ನೀಡಲು ಕರೆ ನೀಡಿದರು.ನೂತನ ಪದಾಧಿಕಾರಿಗಳಿಗೆ ಪದಪತ್ರ ನೀಡಿ ಮಾತನಾಡಿದ ವಿಜಯಪುರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಸಾಲಳ್ಳಿ, ವಿಜಯಪುರ ಜಿಲ್ಲೆಯಲ್ಲಿ ಅನೇಕ ಸಂಘಟನೆಗಳಲ್ಲಿ ಕನ್ನಡ ಜಾನಪದ ಪರಿಷತ್…

Read More

ಬಸವನಬಾಗೇವಾಡಿ: ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ ಅವರು ಸಾಧಕರಾಗುತ್ತಾರೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಇಟ್ಟುಕೊಂಡಿರುವ ಗುರಿ ತಲುಪಬೇಕು ಎಂದು ನಿವೃತ್ತ ಶಿಕ್ಷಕ ಮಹಾಂತೇಶ ಆದಿಗೊಂಡ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಪಿಯುಸಿ ಹಂತ ಸಾಹಸದ ಹಂತವಾಗಿದೆ. ಪರೀಕ್ಷೆಗೆ ಭಯಪಡದೇ ಸಂತೋಷದಿಂದ ಬರೆಯುವಂತಾಗಬೇಕು. ಗುರಿ ಇಲ್ಲದಿದ್ದರೆ ಪ್ರಯತ್ನ ವ್ಯರ್ಥ ಎಂಬುದನ್ನು ಅರಿತುಕೊಳ್ಳಬೇಕು. ಜೀವನದಲ್ಲಿ ಪರಿವರ್ತನೆಯಾಗುವಂತಹ ಶಿಕ್ಷಣ ಪಡೆದುಕೊಳ್ಳಬೇಕು. ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕತೆ ಗೆಲುವಿಗೆ ದಾರಿಯಾಗಲಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶೇಖರ ಗೊಳಸಂಗಿ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕರಾದ ಜಿ.ಎಸ್.ಡೊಮನಾಳ, ಎಸ್.ವಿ.ಅಗಸರ, ವಿದ್ಯಾರ್ಥಿಗಳಾದ ಭೀಮರಾವ ದಿವಟಗಿ, ಸವಿತಾ ಪೂಜಾರಿ, ಗಂಗುಬಾಯಿ ಜಾಧವ, ಶಿವಲಿಂಗ ಗುಂದಗಿ, ನಿಂಗರಾಯ ಗುಗದಡ್ಡಿ ಮಾತನಾಡಿದರು.ಗ್ರಂಥಪಾಲಕಿ ಮಹಾನಂದಾ ನಾಯಕ ವರದಿ ವಾಚನ ಮಾಡಿದರು.…

Read More

ಬಸವನಬಾಗೇವಾಡಿ: ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರು ಅರಿತುಕೊಂಡು ಜೀವನ ಸಾಗಿಸಬೇಕೆಂದು ಮುತ್ತಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರೀತಿ ಎಸ್. ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ಸಂವಿಧಾನ ಜಾಗೃತಿ ಜಾಥಾಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ದಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವನೆಯಾಗಿದೆ. ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶಗಳ ತತ್ವವಾಗಿದೆ. ವ್ಯಕ್ತಿತ್ವ ವಿಕಸನವಾಗಲು ಹಕ್ಕುಗಳ ಅಗತ್ಯವಿದೆ. ನಮ್ಮ ಸಂವಿಧಾನ ನಮ್ಮ ಹೆಮ್ಮೆ. ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಜೀವನ ಸಾಗಿಸಬೇಕೆಂದರು.ಸಾನಿಧ್ಯ ವಹಿಸಿದ್ದ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಿಎಸ್ಎಸ್ ಮುಖಂಡರಾದ ಅಶೋಕ ಚಲವಾದಿ, ಅಶೋಕ ನಡುವಿನಮನಿ, ಶ್ರೀಶೈಲ ಜಾಲವಾದಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರೇಡ್-೨ ತಹಸೀಲ್ದಾರ ಜಿ.ಎಸ್.ನಾಯಕ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭವಾನಿ ಪಾಟೀಲ, ಬಿಇಓ ವಸಂತ ರಾಠೋಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ, ಜಾಥಾದ ನೋಡಲ್ ಅಧಿಕಾರಿ ಎಂ.ಎಚ್.ಯರಝರಿ, ಪಿಡಿಓ ಬಿ.ಎಸ್.ಬಡಿಗೇರ, ಗ್ರಾಪಂ ಅಧ್ಯಕ್ಷೆ ನೀಲಾ ಪಾಟೀಲ, ಉಪಾಧ್ಯಕ್ಷೆ ಕವಿತಾ ಬಡಿಗೇರ, ಮುಖಂಡರಾದ…

Read More

ಇಂಡಿ: ತಾಲ್ಲೂಕಿನ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಹಿನ್ನೆಲೆ ಭಾನುವಾರ (ಫೆ 10) ಸಾಯಂಕಾಲ 5 ಗಂಟೆಯಿಂದ (ಫೆ. 12) ಬೆಳಿಗ್ಗೆ 7 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಕೆಲ ಷರತ್ತುಗಳನ್ನು ವಿಧಿಸಿ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಿದ್ದೇಶ್ವರ ಗೋದಾಮಿನ ಸುತ್ತಲೂ – ಮೂತ್ತಲೂ 500 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿಉಪವಿಭಾಗ ಅಧಿಕಾರಿ ಅಬೀದ್ ಗುರುವಾರ ಆದೇಶ ಹೊರಡಿಸಿದ್ದಾರೆ.ನೂತನ ಚಡಚಣ ತಾಲೂಕಿನ ಮರಗೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮರಗೂರ, 13 ಜನ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಪ್ರಕ್ರೀಯೆ ನಡೆದಿದ್ದು, ಆದ್ದರಿಂದ ಅದರಲ್ಲಿ 05 ಸ್ಥಾನಗಳ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನುಳಿದ 08 ಜನ ಸದಸ್ಯರು ಆಯ್ಕೆಯ ಹಿನ್ನೆಲೆಯಲ್ಲಿ ಫೆ.11 ರಂದು ಕಾರ್ಖಾನೆಯ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಗೋದಾಮಿನಲ್ಲಿ ಚುನಾವಣೆ ಜರುಗಲಿದ್ದು, ಕಾರಣ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯ ಕಾಲಕ್ಕೆ ಯಾವುದೇ…

Read More