ದೇವರಹಿಪ್ಪರಗಿ: ಬಿ.ಎಲ್.ಡಿ.ಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ೧೯೯೦-೯೧ನೇ ಸಾಲಿನ ವಿದ್ಯಾರ್ಥಿ, ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಸ್ನೇಹಿತರ ಸಮ್ಮೀಲನ ಕಾರ್ಯಕ್ರಮ ಇಂದು (ಭಾನುವಾರ) ಜರುಗಲಿದೆ.
ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಬೆಂಗಳೂರು ಮಾರತಹಳ್ಳಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಮಹಾಂತಲಿಂಗ ಸ್ವಾಮೀಜಿ ಹಾಗೂ ಎಮ್ಮಿಗನೂರ ಹಂಪಿಸಾವಿರದೇವರಮಠದ ವಾಮದೇವ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಎ.ಆರ್.ಭತಗುಣಕಿ ವಹಿಸಲಿದ್ದಾರೆ. ಉದ್ಘಾಟಕರಾಗಿ ನಿವೃತ್ತ ಪ್ರಾಚಾರ್ಯ ಎಸ್.ಬಿ.ಮಿರ್ಜಿ ಆಗಮಿಸಲಿದ್ದು, ತಹಶೀಲ್ದಾರ ಪ್ರಕಾಶ ಸಿಂದಗಿ, ಅಂಕಣಕಾರ ಮಂಜುನಾಥ ಜುನಗೊಂಡ, ಪ್ರಾಚಾರ್ಯ ವ್ಹಿ.ಎಮ್.ಪಾಟೀಲ, ಬಿ.ಜಿ.ಅರಳಿಮಟ್ಟಿ ಸೇರಿದಂತೆ ನಿವೃತ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ, ಶಿಕ್ಷಕಿಯರ ಬಳಗ ಭಾಗವಹಿಸಲಿದೆ. ನಂತರ ದೀಪಕ ಮೆಲೊಡೀಸ್ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಸ್ನೇಹಿತರ ಬಳಗದ ಪ್ರಕಟಣೆ ತಿಳಿಸಿದೆ
Subscribe to Updates
Get the latest creative news from FooBar about art, design and business.
Related Posts
Add A Comment
