ವಿಜಯಪುರ: ವಿಜಯಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಈ ಬಗ್ಗೆ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂಬರ ೯೦/೨೦೨೪ ಕಲಂ ೨೭೯.೩೦೪(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಮೃತನಾದ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ, ಅಂದಾಜು ೩೭ ವರ್ಷದವನಾಗಿದ್ದು, ೫.೬ ಪೂಟ ಎತ್ತರವಾಗಿದ್ದು, ಉದ್ದನೆಯ ಮುಖ ಸಾದಗಪ್ಪು ಬಣ್ಣ, ಬಿಳಿ ಕಪ್ಪು ಬಣ್ಣದ ಪೂಲ್ ತೋಳಿನ ಚೆಕ್ ಶರ್ಟ ಬಿಳಿ ಬಣ್ಣದ ಹಾಪ್ ಶರ್ಟ. ಕಪ್ಪು ಬಣ್ಣದ ಜೀನ್ಸ ಪ್ಯಾಂಟ ಹಾಕಿದ್ದು ತಲೆಯಲ್ಲಿ ಕಪ್ಪು ಕೂದಲು ಇರುತ್ತದೆ. ಈ ರೀತಿ ಚಹರೆ ಪಟ್ಟಿಯುಳ್ಳ ವ್ಯಕ್ತಿಯ ಬಗ್ಗೆ ಯಾವುದಾದರು ಮಾಹಿತಿ ಕಂಡು ಬಂದಲ್ಲಿ ಕೂಡಲೇ ಸಂಚಾರಿ ಪಿ.ಎಸ್ ಪೋನ ನಂ: ೦೮೩೫೨-೨೫೨೬೦೦ ಅಥವಾ ೯೪೮೦೮೦೪೨೪೬ಪೊಲೀಸ ಕಂಟ್ರೋಲ ರೂಂ ನಂ: ೦೮೩೫೨-೨೫೦೮೪೪-೨೫೦೭೫೧ ಸಂಪರ್ಕಿಸಲು ವಿಜಯಪುರ ಸಂಚಾರ ಪೊಲೀಸ್ ಠಾಣೆಯ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

