Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನಿಡಗುಂದಿ: ಪಟ್ಟಣದಲ್ಲಿ ಭಾನುವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ದೊರೆಯಿತು.ಆಲಮಟ್ಟಿಯ ಎಂಎಚ್ ಎಂ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಡ್ರಮ್ ಸೆಟ್ ವಾದನ, ಇಟಗಿಯ ಗಿಡ್ಡಯ್ಯ ಅಜ್ಜ ಸ್ಮಾರಕ ಪ್ರೌಡಶಾಲೆಯ ವಿದ್ಯಾರ್ಥಿನಿಯರ ಡೊಳ್ಳುವಾದನ, ಬೇನಾಳ ಆರ್ ಎಸ್ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮಣಗೂರ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳ ಲೇಜಿಮ್ ನೃತ್ಯ, ಬೇನಾಳ ಎನ್ ಎಚ್ ಶಾಲೆಯ ಕೋಲಾಟದ ನೃತ್ಯ, ಇಲಕಲ್ಲ ಸೀರೆ ಉಟ್ಟು ಕುಂಭ ಹೊತ್ತ ನಿಡಗುಂದಿ ಜಿವಿವಿಎಸ್ ಶಾಲೆಯ ವಿದ್ಯಾರ್ಥಿನಿಯರು, ಮಿಲಿಟರಿ ಪೋಷಾಕುವಿನಲ್ಲಿದ್ದ ನಿಡಗುಂದಿಯ ಸುಜ್ಞಾನ ಶಾಲೆಯ ವಿದ್ಯಾರ್ಥಿಗಳು, ಎನ್‌ಇಎಚ್‌ಎಸ್ ಶಾಲೆಯ ವಿದ್ಯಾರ್ಥಿನಿಯರ ಆರತಿ ಮೇಳಗಳು ಗಮನಸೆಳೆದವು.ಮೆರವಣಿಗೆಯಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವಾರು ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕ ಮುಖಂಡರು, ಕನ್ನಡ ಪರ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.ತಹಶೀಲ್ದಾರ್ ಎ.ಡಿ. ಅಮರವಾಡಗಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸೀಂಪೀರ್ ವಾಲೀಕಾರ, ತಾಲ್ಲೂಕು ಪಂಚಾಯ್ತಿ ಇಓ ವಿ.ಎಸ್. ಹಿರೇಮಠ, ಸಿಪಿಐ ಶರಣಗೌಡ ಗೌಡರ, ಸುರೇಶ ಪಾಟೀಲ, ಕಸಾಪ…
ವಿಜಯಪುರ: ನಗರದ ವಿವಿಧ ಕಡೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ಬಂಧಿತ ಆರೋಪಿಗಳನ್ನು ರವಿ ಬಸವರಾಜ ಬಾಕಲಿ ಹಾಗೂ ರಾಜು ಶಿವಾನಂದ ಹೊಸಮನಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ೬೬೬ ಗ್ರಾಂ ಚಿನ್ನಾಭರಣ, ೧೯೦ ಗ್ರಾಂ ಬೆಳ್ಳಿಯ ಆಭರಣ, ೨೧ ಸಾವಿರ ರೂ. ನಗದು ಸೇರಿದಂತೆ ೪೨.೩೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.ನಗರದ ಆದರ್ಶ ನಗರ, ಜಲನಗರ, ಗೋಳಗುಮ್ಮಟ ಸೇರಿದಂತೆ ೯ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ ಎಂದು ಎಸ್.ಪಿ. ತಿಳಿಸಿದರು.ಪದೇ ಪದೇ ಮನೆಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಿ ಕಳ್ಳರನ್ನು ಹೆಡೆಮುರಿಕಟ್ಟಲು ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸಿತ್ತು. ಈ ತನಿಖಾ ತಂಡ ಸಾಂಗ್ಲಿ, ಸೊಲಾಪೂರ, ಬೆಳಗಾವಿ ಮೊದಲಾದ ಕಡೆಗಳಲ್ಲಿ ಆರೋಪಿಗಳ ತಪಾಸಣೆಯಲ್ಲಿದ್ದ ಸಂದರ್ಭದಲ್ಲಿ ಸೊಲಾಪೂರ ನಾಕಾ ಬಳಿ ಪ್ರಥಮ…
ನಾಲ್ವರು ಬೈಕ್ ಕಳ್ಳರು ಮತ್ತು ಮೂವರು ಬ್ಯಾಂಕ್ ಹಾಗೂ ಫೈನಾನ್ಸ್ ಕಳ್ಳರ ಬಂಧನ | ರೂ.16.65 ಲಕ್ಷ ಮೌಲ್ಯದ 37 ಬೈಕ್ ವಶ ವಿಜಯಪುರ: ಜಿಲ್ಲೆಯ ಸಿಂದಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಜನ ಬೈಕ್ ಕಳ್ಳರು ಮತ್ತು ಮೂರು ಜನ ಬ್ಯಾಂಕ್ ಹಾಗೂ ಫೈನಾನ್ಸ್ ಕಳ್ಳರನ್ನು ಬಂಧಿಸಿದ್ದಾರೆ.ಮೊದಲ ಪ್ರಕರಣದಲ್ಲಿ ಸಿಂದಗಿ ಪೊಲೀಸರು ನಾಲ್ಕು ಜನ ಬೈಕ್ ಕಳ್ಳರನ್ನು ಬಂಧಿಸಿದ್ದು, ಅವರ ಬಳಿಯಿದ್ದ 37 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂ. 16.65 ಲಕ್ಷ ಎಂದು ಅಂದಾಜಿಸಲಾಗಿದೆ.ಸಿಂದಗಿ ನಗರ ಮತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಋಷಿಕೇಶ ಸೋನಾವಣೆ ಅವರು ಹೆಚ್ಚುವರಿ ಎಸ್ಪಿಗಳಾದ ರಾಮನಗೌಡ ಎ ಹಟ್ಟಿ ಮತ್ತು ಶಂಕರ ಮಾರಿಹಾಳ, ಇಂಡಿ ಡಿವೈಎಸ್ಪಿ ಜಗದೀಶ ಎಚ್. ಎಸ್. ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾನಾಗೌಡ ಆರ್. ಪೊಲೀಸ್ ಪಾಟೀಲ ಹಾಗೂ ಸಿಂದಗಿ ಪಿಎಸ್ಐ ಭೀಮಪ್ಪ…
ವಿಜಯಪುರ: ನಾಗಠಾಣ ಮತಕ್ಷೇತ್ರದ ವಿಜಯಪುರ ನಗರದ ವಾರ್ಡ್ ನಂಬರ್ 10 ರ ವ್ಯಾಪ್ತಿಯ ಬೂತ್ ಸಂಖ್ಯೆ 247 ರಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ದೊರಕಿತು.ಅಭಿಯಾನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಅನೇಕ ಜನಪರ, ಅಭಿವೃದ್ಧಿ ಪರ ಯೋಜನೆ ವಿವರಿಸುವ ಕರಪತ್ರಗಳನ್ನು ವಿತರಿಸುವ ಮೂಲಕ ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಚಾಲನೆ ನೀಡಿದರು.ರಾಮ ಮಂದಿರ ಲೋಕಾರ್ಪಣೆ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ಮಂಡನೆ, ಕಿಸಾನ ಸಮ್ಮಾನ ಹೀಗೆ ಅನೇಕ ಯೋಜನೆಗಳ ವಿವರಗಳನ್ನು ಒಳಗೊಂಡಿರುವ ಕರಪತ್ರಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಾಲಘಟ್ಟದಲ್ಲಿ ನಮ್ಮ ಹೆಮ್ಮೆಯ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸುವತ್ತ ಮುನ್ನಡೆದಿದೆ, ಅನೇಕ ಉತ್ತಮ ಯೋಜನೆಗಳ ಮೂಲಕ ದೇಶ ಮುನ್ನಡೆ ಸಾಧಿಸಿದೆ, ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವಂತಾಗಿದೆ, ಮುಖ್ಯವಾಗಿ ನೋಟ ಬ್ಯಾನ್…
Udayarashmi kannada daily newspaper
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ವಿಶ್ವ ವಿದ್ಯಾನಿಲಯ ವಿಜಯಪುರ ಅಧೀನದಲ್ಲಿ ಬರುವ ಕಾಲೇಜುಗಳ 17ನೇ ಅಂತರ್ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿಜಯಪುರ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಬಿ.ಎ 3ನೇ ಸೆಮಿಸ್ಟರ್ ನ ವಿದ್ಯಾರ್ಥಿನಿ ಪೂಜಾ ಠಾಕೂರ ಜಾವಲಿನ್ ಥ್ರೋ( ಬರ್ಚಿ ಎಸೆತ )ದಲ್ಲಿ 27.33 ಮೀಟರ್ ಎಸೆದು ಬಂಗಾರದ ಪದಕ ಪಡೆದಿರುತ್ತಾಳೆ. ಕಾಲೇಜಿನ ಇನ್ನೋರ್ವ ಬಿ ಎ 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ದೀಪ ಚವ್ಹಾಣ್ 20 ಕಿ. ಮೀ. ನಡುಗೆ ಸ್ಪರ್ಧೆಯಲ್ಲಿ ಕಂಚಿನ ಪದಕದೊಂದಿಗೆ ಮೂರನೇ ಸ್ಥಾನ ಪಡೆದಿರುತ್ತಾಳೆ ಹಾಗೂ ಕಾಲೇಜಿನ ಮತ್ತೋರ್ವ ವಿದ್ಯಾರ್ಥಿನಿ ಲಕ್ಷ್ಮಿ ಕ್ಷತ್ತ್ರಿ1500 ಮೀಟರ್ ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದಿರುತ್ತಾಳೆ.ಈ ಕ್ರೀಡೆಗಳಲ್ಲಿ ಸಾಧನೆ ಮಾಡಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಕ್ಕಾಗಿ ಈ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್ ಎಸ್ ಕಲ್ಲೂರಮಠ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಜಶೇಖರ ಬೆನಕನಹಳ್ಳಿ, ಐ. ಕ್ಯೂ.ಎ.ಸಿ ಸಂಯೋಜಕರಾದ ಡಾ. ಚಿದಾನಂದ ಎಸ್. ಆನೂರ ಹಾಗೂ…
ಚಡಚಣ: ಎಲ್ಲ ಧರ್ಮಗಳೂ ಪರಮಾತ್ಮನನ್ನು ಜ್ಯೋತಿ ರೂಪದಲ್ಲಿ ಕಾಣುತ್ತವೆ. ಅಂತಹ ಜ್ಯೋತಿಯು ನಮ್ಮ ಆತ್ಮದ ಜೊತೆ ಅನುಸಂಧಾನ ಹೊಂದಿರಬೇಕು. ಇಂಥಹ ಆಂತರಿಕ ಶಕ್ತಿಯು ಧ್ಯಾನದಿಂದ ಬರುತ್ತದೆ. ವ್ಯಾಯಾಮದಿಂದ ದೈಹಿಕ ಹಾಗೂ ವ್ಯವಹಾರದಿಂದ ಆರ್ಥಿಕ ಶಕ್ತಿ ಸಂಪಾದಿಸಿದರೆ, ಅಧ್ಯಯನದಿಂದ ಅಧ್ಯಾತ್ಮ ಶಕ್ತಿ ಪಡೆಯಬಹುದು ಎಂದು ಇಂಡಿ ತಾಲೂಕಾ ಬ್ರಹ್ಮಕುಮಾರಿ ಈಶ್ವರೀಯ ಅಧ್ಯಯನ ಕೇಂದ್ರದ ಸಂಚಾಲಕಿ ಬಿ.ಕೆ.ಯಮೂನಾಜಿಯವರು ಹೇಳಿದರು.ಪಟ್ಟಣದಿಂದ ಪ್ರಜಾಪೀತ ಬ್ರಹ್ಮಕುಮಾರಿ ವಿಶ್ವವಿದ್ಯಾನಿಲಯದ ವತಿಯಿಂದ ಪಟ್ಟಣದಿಂದ ರಾಜಸ್ಥಾನ ಮೌಂಟ್ ಅಬುವಿಗೆ ೪೦ ಯಾತ್ರಾರ್ಥಿಗಳು ಅಧ್ಯಾತ್ಮಿಕ ದರ್ಶನಕ್ಕೆ ತೆರಳುತ್ತಿದ್ದು, ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಮಾತುಗಳಿಗಿಂತ ಕೃತಿಗೆ ಬೆಲೆ ಇರುತ್ತದೆ. ಅದಕ್ಕೆ ನೈತಿಕತೆ, ಏಕಾಗ್ರತೆ, ಬದ್ಧತೆಗಳೆಲ್ಲ ಮುಖ್ಯವಾಗುತ್ತದೆ. ಈ ಗುಣಗಳು ಅಧ್ಯಾತ್ಮದಿಂದ ಬರುತ್ತವೆ ಎಂದು ಹೇಳಿದರು.ಈ ವೇಳೆಯಲ್ಲಿ ಬ್ರಹ್ಮಕುಮಾರಿ ಈಶ್ವರೀಯ ಅಧ್ಯಯನ ಕೇಂದ್ರ ಚಡಚಣದ ಸಂಚಾಲಕಿ ಬಿ.ಕೆ.ಶ್ರೀದೇವಿ ಅಕ್ಕನವರು ಮಾತನಾಡುತ್ತ. ನಮ್ಮ ಚೇತನ ಅನಿಕೇತನ ಆಗಬೇಕು. ಬದುಕಿನಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ತುಂಬಬೇಕು. ಕೀಳರಿಮೆ, ಮೇಲು-ಕೀಳು ಭಾವನೆಗಳನ್ನು ಹೊರಹಾಕಬೇಕು. ನಾವೆಲ್ಲ ಮಾನವರಾಗಬೇಕು ಎಂದರು.ಈ…
ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಕಾಯಕ ಶರಣರ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರ ಹೆಗಡೆ, ಸಂಸ್ಥೆಯ ನಿರ್ದೇಶಕರುಗಳಾದ ಲೀಲಾ ಭಟ್ಟ, ಶಾಂತಾ ಭಟ್ಟ, ಪ್ರಾಥಮಿಕ ಮುಖ್ಯಗುರು ಜಿ.ಜೆ.ಪಾದಗಟ್ಟಿ, ಆಂಗ್ಲ ಮಾಧ್ಯಮ ಮುಖ್ಯಗುರುಮಾತೆ ರಂಜಿತಾ ಹೆಗಡೆ, ಶಿಕ್ಷಕರಾದ ಬಿ.ಟಿ.ಭಜಂತ್ರಿ, ಬಸವರಾಜ ಸೋನಾರ್, ಶಿವಶಂಕರಯ್ಯ ಮಠ, ಕೀರ್ತಿ ತಳಗೇರಿ, ತೇಜಸ್ವಿನಿ ಕಾಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮುದ್ದೇಬಿಹಾಳ: ಮಾರ್ಚ ೫,೬,೭ ರಂದು ಜರುಗಲಿರುವ ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಕುಂಟೋಜಿಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಫೆ.೧೨ ರಿಂದ ಪ್ರತಿದಿನ ಸಂಜೆ ೭ಗಂಟೆಗೆ ಮಹಾದಾಸೋಹಿ ಶ್ರೀ ಕಲಬುರ್ಗಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ವಾಲಪೋಸ್ಟರ್ ಬಿಡುಗಡೆ ಸಮಾರಂಭ ಸಹ ಜರುಗಲಿದೆ.ಕಾರ್ಯಕ್ರಮದ ಸಾನಿಧ್ಯ ನಿಡಗುಂದಿಯ ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಮಸೂತಿ ಗ್ರಾಮದ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು ಉದ್ಘಾಟಿಸುವರು. ಕಮತಗಿಯ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸೂಗೂರಿನ ರುದ್ರಮುನೇಶ್ವರ ಮಠದ ಪ್ರವಚನ ಭಾಸ್ಕರ ಎಂದೇ ಖ್ಯಾತರಾದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಬಸವನ ಬಾಗೇವಾಡಿಯ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು, ಗುಳೇದಗುಡ್ಡದ ಅಮರೇಶ್ವರಮಠದ ನೀಲಕಂಠ ಶಿವಾಚಾರ್ಯ ಸ್ವಾಮಿಗಳು ಪುರಾಣ ನುಡಿಗಳನ್ನಾಡಲಿದ್ದು, ಗುಂಡಕನಾಳದ ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಬಾದಾಮೆಯ ಶಿವಪೂಜೆ ಶಿವಾಚಾರ್ಯ ಸ್ವಾಮಿಗಳು, ತಾಳೊಕೋಟೆಯ ಸಿದ್ಧಲಿಂಗ ದೇವರು, ಹುನಶ್ಯಾಳದ ಆನಂದ ದೇವರು ಸಮ್ಮುಖದಲ್ಲಿ ಶಾಸಕ ಸಿ.ಎಸ್.ನಾಡಗೌಡ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ,…
ತಿಕೋಟಾ: ವಿಜೃಂಭಣೆಯಿಂದ ತನ್ನ ಹುಟ್ಟು ಹಬ್ಬವನ್ನು ಆಚರಿಸದೇ ದುಂದು ವೆಚ್ಚಕ್ಕೆ ಸಾವಿರಾರು ರೂಪಾಯಿ ಹಣ ವ್ಯಯ ಮಾಡದೆ ಕಡಿವಾಣ ಹಾಕಿ ಅದೇ ಹಣದಿಂದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿಧ್ಯಾರ್ಥಿಗಳಿಗೆ ಶುಕ್ರವಾರ ನೋಟಬುಕ್ ಹಾಗೂ ಪೆನ್ನು ವಿತರಿಸಿ ವಿಶೇಷವಾಗಿ ತನ್ನ 21ನೇಯ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡು ಯುವ ಪೀಳಿಗೆಗೆ ಯುವಕನೊಬ್ಬ ಮಾದರಿಯಾಗಿದ್ದಾನೆ.ಹೌದು, ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಚಿನ ಹಣಮಂತ ಗದ್ಯಾಳ ಎಂಬ ಯುವಕ ಮೂರು ವರ್ಷದಿಂದ ಪ್ರತಿ ವರ್ಷ ₹ 50 ಸಾವಿರ ವೆಚ್ಚ ಮಾಡಿ ನೋಟಬುಕ್, ಪೆನ್ನು ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾನೆ.ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲಿಕಾರವಸ್ತಿ ಹಾಗೂ ಉಪ್ಪಾರವಸ್ತಿ, ಹಿರಿಯ ಪ್ರಾಥಮಿಕ ಶಾಲೆ ಕಳ್ಳಕವಟಗಿ ಹಾಗೂ ತಾಂಡಾ ಶಾಲೆ, ಪ್ರೌಢ ಶಾಲೆ ಹಾಗೂ ಸಂಗಮನಾಥ ಕಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ಐದನೂರಕ್ಕೂ ಹೆಚ್ಚು ಮಕ್ಕಳಿಗೆ ನೋಟಬುಕ್ ವಿತರಿಸಿ ಕಿರಿಯ ವಯಸ್ಸಿನಲ್ಲೆ ಶೈಕ್ಷಣಿಕ ಸೇವೆ…
