ಇಂಡಿ: ಮೋದಿಯವರ ದೂರದೃಷ್ಟಿತ್ವ ದೇಶದ ಚಿತ್ರಣವನ್ನೇ ಬದಲಾಯಿಸಲಿದೆ. ಅವರು ೧೦ ವರ್ಷಗಳಿಂದ ದೇಶದ ಅಭಿವೃದ್ದಿಗಾಗಿ ನಿರಂತರ ಶ್ರಮಿಸಿದ್ದಾರೆ. ಹಾಗಾಗಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸಲು ಬಿಜೆಪಿ ಬೆಂಬಲಿಸಬೇಕೆಂದು ವಿಜಯಪುರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಹೇಳಿದರು.
ಅವರು ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡಿದರು.
ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ವಿಜಯಪುರ ಜಿಲ್ಲೆಗೆ ಒಂದು ಲಕ್ಷ ಕೋಟಿ ರೂ ಅನುದಾನ ತಂದು ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ಹೆದ್ದಾರಿ, ಕುಡಿಯುವ ನೀರಿನ ಪ್ರತಿ ಹಳ್ಳಿಗಳಿಗೆ ಜಲಜೀವನ ಮಿಷನ್,ಕೂಡ್ಲಗಿಯಲ್ಲಿ ಎನ್.ಟಿ.ಪಿ.ಸಿ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದೇನೆ ಎಂದರು.
ವಿಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಲೋಕಸಭಾ ಚುನಾವಣೆ ದೇಶದ ಭದ್ರತೆ, ದೇಶದ ಭವಿಷ್ಯ ನಿರ್ಧರಿಸಲಿದೆ. ಮೋದಿಯವರು ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಒಂದೇ ಒಂದು ಕಪ್ಪು ಚಿಕ್ಕೆ ಇಲ್ಲದಂತೆ ಆಡಳಿತ ಮಾಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ಕೂಚಬಾಳ ಮಾತನಾಡಿ, ಹಿಂದಿನ ಯುಪಿಎ ಹಗರಣದಲ್ಲಿ ೨ ಜಿ ಹಗರಣ ಸೇರಿದಂತೆ ಅನೇಕ ಹಗರಣಗಳು ಬೆಳಕಿಗೆ ಬಂದವು. ಇಂದು ಕಾಂಗ್ರೆಸ್ ನಿಂದ ಎಲ್ಲ ಕಡೆ ಹಗರಣ ನಡೆಯುತ್ತಿವೆ ಎಂದರು.
ಅಶೋಕ ಅಲ್ಲಾಪುರ, ಇಂಡಿ ಮಂಡಲ ಪ್ರಧಾನ ಮಲ್ಲಿಕಾರ್ಜುನ ಕಿವಡೆ, ಹಣಮಂತರಾಯಗೌಡ ಬಿರಾದಾರ ಮಾತನಾಡಿದರು.
ವೇದಿಕೆಯ ಸಿದ್ದಲಿಂಗ ಹಂಜಗಿ, ಬಿ.ಎಸ್.ಪಾಟೀಲ ಹಿರೇಬೇನವೂರ,ರಾಜಕುಮಾರ ಸಗಾಯಿ, ಅನೀಲ ಜಮಾದಾರ, ಶೀಲವಂತ ಉಮರಾಣಿ, ರವಿ ವಗ್ಗೆ,ರಾಜಶೇಖರ ಯರಗಲ್ಲ, ರಾಘವೇಂದ್ರ ಕಾಪಸೆ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

