ಇಂಡಿ: ಮಹಿಳಾ ಸಂಘದವರ ವೇಷದಲ್ಲಿ ಇಬ್ಬರು ನಕಲಿ ಮ್ಯಾನೇಜರ್, ಮಹಿಳೆಯರಿಗೆ ಹಣದ ಆಮಿಷ ತೋರಿಸಿ ಲಕ್ಷಗಟ್ಲೆ ಹಣದ ಜೊತೆ ವಂಚಕರು ಫರಾರಿಯಾಗಿದ್ದಾರೆ ಎಂಬ ವದಂತಿ ತಾಲೂಕಿನಾದ್ಯಂತ ಹಬ್ಬಿದೆ.
ತಾಲೂಕಿನಲ್ಲಿ ಜನ ಅಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘ ಎಂಬ ಹೆಸರಲ್ಲಿ ಜನರಿಗೆ ಮೋಸ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಸಿಂದಗಿ ರಸ್ತೆಯ ಅಶೋಕ್‌ಗೌಡ ಕಾಂಪ್ಲೆಕ್ಸನಲ್ಲಿ ಈ ನಕಲಿ ಸಂಘದ ಕಚೇರಿಯನ್ನು ಸ್ಥಾಪಿಸಲಾಗಿತ್ತು ಎಂಬ ಮಾಹಿತಿ ಇದೆ.
ಇಂಡಿ ತಾಲೂಕಿನ ಪ್ರತಿ ಹಳ್ಳಿಗಳಿಗೆ ಹೋಗಿ ಹೆಣ್ಣು ಮಕ್ಕಳ ಹತ್ತು ಜನರ ಒಂದು ಗುಂಪು ಮಾಡಿದರೆ ನಿಮಗೆ ಪ್ರತಿಯೊಬ್ಬರಿಗೂ ೧೫೦೦೦೦ ಲಕ್ಷ ರೂ ಹಣ ನಿಮ್ಮ ಖಾತೆಗೆ ೩ ದಿನಗಳಲ್ಲಿ ಜಮಾ ಮಾಡುತ್ತೇವೆ. ೧೫೦೦೦೦ ರ ದಲ್ಲಿ ೧೫೦೦೦ ಸಾವಿರ ಸಬ್ಸಿಡಿ ಲೆಕ್ಕದಲ್ಲಿ ಇರುತ್ತೆ ಮುಂಗಡವಾಗಿ ಎಲ್ಲರೂ ತಲಾ ೫೨೦೦ ರಂತೆ ಮೊದಲಿಗೆ ಕೊಡಬೇಕು ಅಂತ ಹೇಳಿ ತಲಾ ೫೨೦೦ ರಂತೆ ವಂಚಿಸಿ ಜನರಿಗೆ ಮೋಸ ಮಾಡಿ ಪರಾರಿ ಆಗಿದ್ದಾರೆ
ನಿಮ್ಮ ಸಾಲದ ಪ್ರಕ್ರಿಯೆ ಮುಗಿಯಲು ೮ ದಿನ ಬೇಕಾಗುತ್ತದೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಿದ್ದರು. ಸರಿಯಾಗಿ ೮ ದಿನಗಳ ನಂತರ ಮತ್ತೆ ಕಾಲ್ ಮಾಡುವ ಈ ವಂಚಕರು , ನಿಮಗೆ ಸಾಲ ಮಂಜೂರಾಗಿದೆ. ೫೨೦೦ ಮುಂಗಡವಾಗಿ ನೀವು ಪಾವತಿಸಬೇಕಾಗುತ್ತದೆ. ಮುಂಗಡ ಜಮೆ ಮಾಡಿದ ೫೨೦೦ ರೂ ಹಣ ಮೂರು ಕಂತ್ತಿನ ಸಾಲದ ಮೊತ್ತ ನೀವು ಕಟ್ಟಿದರೆ ನಿಮ್ಮಗೆ ೫೨೦೦ ರೂ ಹಣದಲ್ಲಿ ೫೦೦೦ ಸಾವಿರ ಹಣ ನಿಮ್ಮಗೆ ಮರುಪಾವತಿ ಯಾಗುತ್ತೆ ಅದರಲ್ಲಿ ೨೦೦ ರೂ ಹಣ ಪ್ರೊಸೆಸಿಂಗ ಪೀ ಕಟ್ಟ ಆಗುತ್ತೆ ಅಂತ ಹೇಳಿರುತ್ತಾರೆ, ನಂತರ ಒಂದುವಾರದೊಳಗೆ ನಿಮ್ಮ ಖಾತೆಗೆ ಸಾಲದ ಹಣ ಸಂದಾಯವಾಗುತ್ತದೆ ಎನ್ನುವ ಭರವಸೆಯನ್ನೂ ನೀಡುತ್ತಿದ್ದರು. ವಾರ ಕಳೆದು ತಿಂಗಳು ಮುಗಿದರೂ ತಮ್ಮ ಖಾತೆಗೆ ಸಾಲದ ಹಣ ಬಾರದಿದ್ದಾಗ ಅವರು ವಾಪಾಸ್ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಮಾಡಿಕೊಂಡು ಫರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ವಂಚಕರ ಬೈಕ್ ಸಂಖ್ಯೆ: ಎಂ ೧೮ ಡಬ್ಲೂ ೪೧೬ ಮತ್ತು ಕೆಎ೬೬ಜಿ೩೯೪೫ ಹೀಗಿರುತ್ತದೆ. ಯಾರಾದರೂ ಈ ಬೈಕ್ ಸಂಖ್ಯೆ ಮತ್ತು ಅವರನ್ನು ಕಂಡರೆ ಯಾರು ಮೋಸ ಹೋಗದೆ ಕೂಡಲೇ ಹತ್ತಿರದ ಪೊಲೀಸ ಠಾಣೆಗೆ ಕರೆ ಮಾಡಬೇಕು ಎಂದು ಮೋಸ ಹೋದವರು ತಿಳಿಸಿದ್ದಾರೆ.
ಈ ಘಟನೆ ನಡೆದ ಮೇಲಾದರೂ ಇಂಡಿ ತಾಲೂಕಿನ ಜನತೆ ದುಡ್ಡಿಗೆ ಮೋಸ ಹೋಗದೆ. ತಮ್ಮ ಧಾಖಲೆಗಳನ್ನು ನೀಡದೆ ಜಾಗೃತಿಯಿಂದ ಇರಬೇಕು.
ಈ ಘಟನೆ ನಡೆದರೂ ಇಂಡಿ ಶಹಾರ ಪೋಲಿಸ್ ಠಾಣಾ. ಹಾಗು ಇಂಡಿ ಗ್ರಾಮೀಣ ಪೋಲಿಸ್ ಠಾಣಾ ಅಧಿಕಾರಿಗಳ ಗಮನಕೆ ಇದೆಯೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಇಂಡಿ ತಾಲೂಕಿನ ಸಾರ್ವಜನಿಕರದ್ದಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
