ಝಳಕಿ: ಭವ್ಯ ಭಾರತ ನಿರ್ಮಾಣ ಮಾಡಲು ಯುವಕರು ರಾಷ್ಟ್ರೀಯತೆ ಬೇಳೆಸಿಕೊಳ್ಳಬೇಕು ಅದರ ಜೊತೆಗೆ ಸನಾತನ ಧರ್ಮ ಸಂಸ್ಕೃತಿ ಉಳಿವಿಗಾಗಿ ಮಠ ಮಾನ್ಯಗಳಿಗೆ ಗೌರವ ಕೊಡಬೇಕು ಎಂದು ಯುವ ಮುಖಂಡ ರಾಘವೇಂದ್ರ ಕಾಪಸೆ ಹೇಳಿದರು.
ಸಮೀಪದ ಗುಂದವಾನ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿದ ಮಲ್ಲಿಕಾರ್ಜುನ ದೇವಸ್ಥಾನದ ಕಟ್ಟಡ ಉದ್ಘಾಟನೆ, ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಮತ್ತು ಧರ್ಮ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮದ ಮಾರ್ಗದಲ್ಲಿ ಸಾಗುವವರ ದಾರಿ ಸುಗಮವಾಗಿರುತ್ತದೆ. ಕಷ್ಟದಲ್ಲಿ ಎಲ್ಲರೂ ಕೈ ಬಿಟ್ಟರೂ ಧರ್ಮ ಎಂದಿಗೂ ಕೈ ಬಿಡುವುದಿಲ್ಲ. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ. ಸರಾಯಿ, ಗುಟಕಾ, ಬೀಡಿ ಇವೆಲ್ಲವುಗಳನ್ನು ಗ್ರಾಮದ ಹಿರಿಯರು ಹೊರಹಾಕಿಸಿ ಆರೋಗ್ಯದ ಅರಿವು ಮೂಡಿಸಬೇಕು ಎಂದರು.
ದಿವ್ಯ ಸಾನಿಧ್ಯ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಭಗವತ್ಪಾಂಗಳ, ಅಭಿನವ ಮುರಘೇಂದ್ರ ಶಿವಾಚಾರ್ಯರು, ಗುರು ಗುರುಪಾದೇಶ್ವರ ಶಿವಾಚಾರ್ಯರು, ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಮಲ್ಲಿಕಾರ್ಜುನ ಶಿವಾಚಾರ್ಯರು, ಡಾ.ಸಿದ್ಧಲಿಂಗ ಶಿವಾಚಾರ್ಯರು, ಮಡಿವಾಳಯ್ಯ ಶಾಸ್ತ್ರಿಗಳು, ಮಹಾಂತೇಶ ಹಿರೇಮಠ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

