ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠವು ೨೦೨೪ ನೇ ಸಾಲಿನಿಂದ ಗುರು ಮಹಾಂತೇಶ್ವರ ಶ್ರೀ ಪ್ರಶಸ್ತಿ ನೀಡಲು ಆರಂಭಿಸಿದ್ದು. ಈ ಸಾಲಿನ ಪ್ರಶಸ್ತಿಯನ್ನು ಸಮಾಜ ಸೇವಕ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್.ಆಲೂರು ಅವರಿಗೆ ಶ್ರೀಮಠವು ನೀಡಲು ನಿರ್ಧರಿಸಿದೆ. ಮೇ.೮ ರಂದು ಬೆಳಗ್ಗೆ ೧೧ ಗಂಟೆಗೆ ಶ್ರೀಮಠದಲ್ಲಿ ಆಯೋಜನೆಗೊಂಡಿರುವ ಶ್ರೀಗುರುಮಹಾಂತೇಶ್ವರ ೭೫ ನೇ ಯಾತ್ರಾಮಹೋತ್ಸವ, ಶ್ರೀಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೩ ನೇ ಸಂಸ್ಮರಣೋತ್ಸವ ಸಮಾರಂಭದಲ್ಲಿ ಶ್ರೀಮಠದ ಪಟ್ಟಾಧ್ಯಕ್ಷ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಾಡಿನ ವಿವಿಧ ಮಠಾಧೀಶರರ ಸಾನಿಧ್ಯದಲ್ಲಿ, ವಿವಿಧ ಸಚಿವರ, ವಿವಿಧ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ೧೧ ಸಾವಿರ ನಗದು, ಕಂಚಿನ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ೧೦ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ೨೬ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ.೨ ಸಾವಿರ ಮೌಲ್ಯದ ಬ್ಯಾಗ್, ನೋಟ್ಪುಸ್ತಕ ವಿವಿಧ ಪಠ್ಯಪರಿಕರಗಳನ್ನು ವಿದ್ಯಾರ್ಥಿ ವೇತನರೂಪದಲ್ಲಿ ಶ್ರೀಗಳು ನೀಡಲಿದ್ದಾರೆ ಎಂದು ಪಟ್ಟೀಕಂಥಿ ಹಿರೇಮಠದ ವ್ಯವಸ್ಥಾಪಕ ಬಸಯ್ಯ ಗಚ್ಚಿನಮಠ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

