Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಕುಡಿಯುವ ನೀರಿನ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಭೂತನಾಳ ಕೆರೆಗೆ ನೀರು ಹರಿಸಿ ಭರ್ತಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ರವಿವಾರ ಅವರು ಭೂತನಾಳ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಭೂತನಾಳ ಕೆರೆಗೆ ಪರ್ಯಾಯ ಮಾರ್ಗದಲ್ಲಿ ನೀರು ತುಂಬಿಸಲು ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಭೂತನಾಳ ಕೆರೆಗೆ ನೀತು ತುಂಬಿಸಲು ನಾಳೆಯಿಂದಲೇ ಕಾರ್ಯ ಆರಂಭಿಸುವಂತೆ ಕೆಬಿಜೆಎನ್‌ಎಲ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.ನಂತರ ನಗರದ ಬೇಗಂ ತಲಾಬ್ ಕೆರೆಯನ್ನು ವೀಕ್ಷಣೆ ಮಾಡಿದ ಅವರು, ಅಲ್ಲಿ ಲಭ್ಯವಿರುವ ನೀರನ್ನು ಸಹ ಭೂತನಾಳ ಕೆರೆಗೆ ಸರಬರಾಜು ಮಾಡುವುದು ಅಥವಾ ಬೇಗಂ ತಲಾಬ್ ಕರೆಯಲ್ಲಿ ನೀರು ಶುದ್ಧೀಕರಿಸಿ ನೇರವಾಗಿ ಸರಬರಾಜು ಮಾಡುವ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರೀಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ…
ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯಲ್ಲಿ ಕೃಷಿ ಇಲಾಖೆ ಸ.ನಿದೇ೯ಶಕ ಸಿಂಗೆಗೋಳ ಅಭಿಮತ ಬ್ರಹ್ಮದೇವನಮಡು: ಸಮ ಸಮಾಜದ ಬುನಾದಿ ಆಗಿರುವ ಸಂವಿಧಾನದ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದು ಸಿಂದಗಿ ಕೃಷಿ ಇಲಾಖೆ ಸಹಾಯಕ ನಿದೇ೯ಶಕ ಹೆಚ್.ವೈ.ಸಿಂಗೆಗೋಳ ಹೇಳಿದರು. ಸಿಂದಗಿ ತಾಲೂಕು ಬ್ರಹ್ಮದೇವನಮಡು ಹಾಗೂ ಹೊನ್ನಳ್ಳಿ ಗ್ರಾಮಕ್ಕೆ ಸೋಮವಾರ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಕುಂಭಮೇಳದೊಂದಿಗೆ ಸ್ವಾಗತಿಸಿ, ಪುಷ್ಪಾಚ೯ನೆ ಮಾಡಿ ಅವರು ಮಾತನಾಡಿದರು.ದೇಶದ ಸವ೯ಧಮ೯, ಜಾತಿ ಜನರ ಹಿತ ಕಾಪಾಡುವ ಅಂಬೇಡ್ಕರ್ ಅವರ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಕಾನೂನುಗಳ ಪಾಲನೆ ಬದ್ದತೆ ಬೆಳಸಿಕೊಳ್ಳಬೇಕಿದೆ ಎಂದ ಅವರು, ಶಾಲೆಯ ಮಕ್ಕಳಿಗೆ ಸಂವಿಧಾನದ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಿದರು.ಸಂವಿಧಾನದ ಜಾಗೃತಿ ರಥಕ್ಕೆ ಬ್ರಹ್ಮದೇವನಮಡು ಗ್ರಾಮದಲ್ಲಿ ಅದ್ದೂರಿಯಾಗಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಸಕಾ೯ರಿ ಶಾಲೆ ಹಾಗೂ ರಾಜೀವಗಾಂಧಿ ಸ್ಮಾರಕ ಪ್ರೌಢ ಶಾಲೆ ಮಕ್ಕಳಿಂದ ಪೂಣ೯ಕುಂಭ ಸ್ವಾಗತ, ಡೊಳ್ಳು ಕುಣಿತ, ಡಿಜೆ ಸೌಂಡಿಗೆ ಯುವಕರು ಕುಣಿದು ಕುಪ್ಪಳಿಸಿ ಮೆರವಣಿಗೆ ನಡೆಸಿದರು.ಗ್ರಾಪಂ ಅಧ್ಶಕ್ಷ ಸಂಗನಗೌಡ ಪಾಟೀಲ, ದಲಿತ ಮುಖಂಡರಾದ ವೈ.ಸಿ.ಮಯೂರ, ಶ್ರೀಶೈಲ್ ಜಾಲವಾದಿ,…
ಇಂಡಿ: ಪಟ್ಟಣದ ಟಂ ಟಂ ಸಂಘದವರು ರೇಲ್ವೆ ಸ್ಟೇಷನದ ಕಡೆಗೆ ಹೋಗುವ ಟಂ.ಟಂ ಗಳಿಗೆ ಬಸ್ ನಿಲ್ದಾಣದ ಹತ್ತಿರ ಪಾರ್ಕಿಂಗ ಅಳವಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಮತ್ತು ಟಂ.ಟಂ ಸಂಘಟನೆಯಿಂದ ಪ್ರತಿಭಟನೆ ನಡೆಸಿ ಮಿನಿ ವಿಧಾನಸೌಧ ತೆರಳಿ ತಹಸೀಲ್ದಾರವರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಕ್ಷಣಾ ವೇದಿಕೆಯ ಶಿವು ಬಡಿಗೇರ ಮಾತನಾಡಿ, ಪಟ್ಟಣದಿಂದ ರೇಲ್ವೆ ಸ್ಟೇಷನ್ ಕ್ಕೆ ಹಗಲಿನಲ್ಲಿ ಒಂದು ತಾಸಿನಲ್ಲಿ ಕನಿಷ್ಠ ೧೫ ಟಂ ಟಂ ಹೋಗುತ್ತದೆ. ಅದಲ್ಲದೆ ಪ್ರತಿನಿತ್ಯ ಇಂಡಿ ರೇಲ್ವೆ ಸ್ಟೇಷನದಿಂದ ವಿಜಯಪುರ ಸೋಲಾಪುರ, ಬೆಂಗಳೂರ, ಮುಂಬಯಿ, ಹೈದ್ರಾಬಾದ, ಮಂತ್ರಾಲಯ ಕಡೆಗೆ ಹೋಗುವ ರೇಲ್ವೆ ಸಂಖ್ಯೆ ಹೆಚ್ಚಾಗಿದ್ದು ಬೇರೆ ಸ್ಥಳಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಿಗಿದೆ. ಅದಲ್ಲದೆ ಇಂಡಿ ರೇಲ್ವೆ ಸ್ಟೇಷನ್ ದಲ್ಲಿ ಜನವಸತಿಯೂ ಸಾಕಷ್ಟಿದೆ. ಸಧ್ಯ ನಿಲ್ಲುವ ಟಂ ಟಂ ಗಳಿಗೆ ಅಲ್ಲಿ ನಿಲ್ಲಿಸಬೇಡಿ ಎಂದು ಪೋಲಿಸರು ಬಹಳ ಕಿರಿ ಕಿರಿ ಮಾಡುತ್ತಾರೆ. ಹೀಗಾಗಿ ಬಿಎಸ್‌ಎನ್‌ಎಲ್ ಎದುರುಗಡೆ ಅಥವಾ ಎಲ್ಲಿಯಾದರೂ ಖಾಲಿ ಜಾಗದಲ್ಲಿ ಪಾರ್ಕಿಂಗ…
ದ್ರಾಕ್ಷಿ, ದಾಳಿಂಬೆ, ಲಿಂಬೆ, ಕಬ್ಬು, ತೊಗರಿ, ಅಜಿವಾನ, ಮೆಣಸಿನಕಾಯಿಗೆ ಬೆಂಬಲ ಬೆಲೆಗೆ ಖರೀದಿಸಲು ಆಗ್ರಹ ವಿಜಯಪುರ: ಎಲ್ಲ ಜಿಲ್ಲೆಯ ರೈತ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಮುಂಬರುವ ಬಜೆಟ್ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ಮುಖಂಡರಿಗೆ ಹೇಳಿದರು.೨೦೨೪-೨೫ ನೇ ಸಾಲಿನ ಬಜೆಟ್ ನಿಮಿತ್ಯ ನಡೆಯಲಿರುವ ಅಧಿವೇಶನದ ಪೂರ್ವವಾಗಿ ರಾಜ್ಯದ ಎಲ್ಲಾ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಬರಗಾಲದ ನಿಮಿತ್ಯ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಸೇರಿದಂತೆ ಅನುಕೂಲವಾಗಲಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಣ ಮಿಸಲಿಟ್ಟು ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಹೇಳಲಾಗಿದೆ, ನಾನು ಕೂಡಾ ರೈತ ಕುಟುಂಬದಿಂದ ಬಂದವನು, ರೈತರ ಕಷ್ಟ ಗೊತ್ತಿದೆ, ರೈತರ ಪರವಾಗಿ ಯಾವಾಗಲೂ ಇರುತ್ತೆನೆ ಎಂದರು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಮಾತನಾಡಿ, ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಕೂಡಲೇ ಕೆ.ಬಿ.ಜೆ.ಎನ್.ಎಲ್ ಕಚೇರಿಯನ್ನು ಬೆಂಗಳೂರಿನಿಂದ ಆಲಮಟ್ಟಿಗೆ…
ಚಿಮ್ಮಡ: ಅಧಿಕಾರಿಗಳು ಸಾರ್ವಜನಿಕರಿಗೆ ನೀಡುವ ಉತ್ತಮ ಸೇವೆಗಳು ಜನರಲ್ಲಿ ಅವೀಸ್ಮರಣೀಯವಾಗಿ ಉಳಿಯುತ್ತವೆ ಎಂದು ಪಿಕೆಪಿಎಸ್ ಬ್ಯಾಂಕ ನಿರ್ದೆಶಕ ನಿಂಗಣ್ಣ ಪೂಜಾರಿ ಹೇಳಿದರು.ಚಿಮ್ಮಡ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ಶಾಖಾ ವ್ಯವಸ್ಥಾಪಕ ಎಸ್.ಐ. ಗಡ್ಡಿ ಯವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ಅಧಿಕಾರಿಗಳು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸಿದಲ್ಲಿ ಸಾರ್ವಜನಿಕರಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ ಅಂತಹ ಬಾಂಧವ್ಯವನ್ನು ವ್ಯವಸ್ಥಾಪಕ ಗಡ್ಡಿಯವರು ಸಂಪಾದಿಸಿದ್ದಾರೆ. ಅವರ ಸೇವೆ ಎಲ್ಲ ವಿಭಾಗಕ್ಕೂ ಸಲ್ಲಬೇಕೆಂದರು.ಕೆವಿಜಿ ಬ್ಯಾಂಕ್ ಗುಮಾಸ್ಥ ಜಹೀರಅಬ್ಬಾಸ ನದಾಫ ಮಾತನಾಡಿ, ಚಿಮ್ಮಡ ಗ್ರಾಮದ ಶಾಖೆಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಅಧಿಕಾರಿಗಳು ಮುಂಬಡ್ತಿ ಹೊಂದಿಯೇ ವರ್ಗಾವಣೆಗೊಂದಿದ್ದು ಇಲ್ಲಿನ ಜನರ ಸಹಕಾರವೂ ಉತ್ತಮಸೇವೆಗೆ ಸಹಕಾರಿಯಾಗುತ್ತದೆ ಎಂದರು.ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿರಸಾಬ ನದಾಫ, ಸಂಗಮೇಶ ಚಲವಾದಿ, ಇಲಾಹಿ ಜಮಖಂಡಿ ಮಾತನಾಡಿದರು.ಉದಯ ದೇಶಪಂಡೆ, ಹನೀಫ ಚಿಕ್ಕೋಡಿ, ಶ್ರೀನಿವಾಸ ಬಿಳ್ಳೂರ, ಸಲೀಮ ಸರಕಾವಸ, ಶೌಕತ ಪಾಲಭಾವಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಮುಂಬಡ್ತಿಯೊಂದಿಗೆ ವರ್ಗಾವಣೆಗೊಂಡಿರುವ ಸ್ಥಳಿಯ ಶಾಖಾ…
ಆಲಮೇಲ: ಗ್ರಾಮೀಣ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ಯಾವುದೆ ಸಹಾಯವಿಲ್ಲದೆ ಗುಣಮಟ್ಟದ ಶಿಕ್ಷಣ ನೀಡುವದು ಕಷ್ಟದ ಕೆಲಸ ಎಂಬುದು ಸಂಸ್ಥೆಯವರಿಗೇ ಗೊತ್ತು ಎಂದು ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಗುಂದಗಿ ಹೇಳಿದರು.ಪಟ್ಟಣದ ಗ್ರಾಮೀಣ ಅಭಿವೃದ್ದಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.೧೯೯೨ರಲ್ಲಿ ಆಲಮೇಲದಂತ ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳುವದನ್ನು ಮನಗಂಡು ಅನೇಕ ಶಿಕ್ಷಣ ಪ್ರೇಮಿಗಳ ಮಾರ್ಗದರ್ಶನ ಸಹಕಾರದ ಮೇರೆಗೆ ಗ್ರಾಮೀಣ ಅಭಿವೃದ್ದಿ ಶಿಕ್ಷಣ ಸಂಸ್ಥೆ ಪ್ರಾರಂಬಿಸಿದ್ದು ಅದಿಂದು ಹೆಮ್ಮರವಾಗಿದೆ. ಇಲ್ಲಿ ಪ್ರಾಥಮಿಕ ದಿಂದ ಮಹಾ ವಿದ್ಯಾಲಯದ ವರೆಗೂ ಶಿಕ್ಷಣ ದೊರೆವಂತ ವ್ಯೆವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಾನಿದ್ಯ ವಹಿಸಿ ಮಾತನಾಡಿದರು. ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪತ್ನಿ ನಾಗರತ್ನ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ: ಆಲಮೇಲ ಗ್ರಾಮದವರು ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಗಲಕೋಟೆ ಕೆಪಿಟಿಸಿಎಲ್…
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಹಣಮಂತ ಖಂಡೇಕರ್ ಅವರನ್ನು ಇಂಡಿ ತಾಲೂಕಿನ ಅಹಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿಯಿಂದ ಎರಡನೇ ಹಂತದ ಅಹಿಂದ ನಾಯಕರು ಎಂದು ಆಯ್ಕೆ ಮಾಡಿ, ಅಹಿಂದ ಕರ್ನಾಟಕ ರಾಜ್ಯ ಸಂಘಟನೆಯ ಅಧ್ಯಕ್ಷ ಪ್ರ‍್ರಭುಲಿಂಗ ದೊಡ್ಮನಿ ಆದೇಶ ಹೊರಡಿಸಿದ್ದಾರೆ.ಅಹಿಂದ ಸಮಾಜವನ್ನು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸದೃಢ ಮತ್ತು ಬಲಿಷ್ಠ ಮಾಡಲು ಶಿಕ್ಷಣ ಸಂಸ್ಥೆ, ಬ್ಯಾಂಕುಗಳು ಸ್ಥಾಪಿಸುವ ಗುರಿಯನ್ನು ಈ ಸಂಘಟನೆ ಹೊಂದಿದ್ದು ಸಂಘಟನೆಯ ಆಶಯದಂತೆ ಕಾರ್ಯ ನಿರ್ವಹಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಮುದ್ದೇಬಿಹಾಳ: ಮೈಸೂರು ರಾಜ್ಯ ಕರ್ನಾಟಕ ಅಂತಾ ನಾಮಕರಣವಾಗಿ ೫೦ರ ಸಂಭ್ರಮ ಆಚರಿಸುತ್ತಿದೆ. ನಮಗೆ ಕನ್ನಡವೇ ಪರಮೋಚ್ಛ ಭಾಷೆ, ಆಡಳಿತ ಭಾಷೆ, ಮಾತೃ ಭಾಷೆ, ಅನ್ನದ ಭಾಷೆಯಾಗಿರುವದರಿಂದ ಕನ್ನಡದ ಇತಿಹಾಸ, ಸಾಹಿತ್ಯ, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕಾರ್ಯಕ್ರಮದ ಅಡಿ ರಾಜ್ಯದಾದ್ಯಂತ ಕನ್ನಡದ ರಥ ಸಂಚರಿಸುತ್ತಿದೆ. ಈ ರಥದ ಮೆರವಣಿಗೆಯಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕನ್ನಡಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಹೇಳಿದರು.ಪಟ್ಟಣದ ಇಂದಿರಾ ವೃತ್ತದಲ್ಲಿ ಕನ್ನಡ ರಥದ ಅದ್ಧೂರಿ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆ ಶ್ರೀಮಂತಿಕೆ, ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದೆ. ಕನ್ನಡ ನಾಡು, ನುಡಿ, ಜಲ, ನೆಲ ಕಾಪಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದರು.ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡಿದರು.ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ನ್ಯಾಯವಾದಿಗಳ…
ಮುದ್ದೇಬಿಹಾಳ: ವಿದ್ಯುತ್ ತಗುಲಿ ರೈತನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.ಮೃತ ದುರ್ದೈವಿ ಚಂದಪ್ಪ ವಾಲಿಕಾರ(೪೭) ಕುಂಚಗನೂರಿನ ಹುಲ್ಲಪ್ಪ ಮಲಗೌಡರ ಇವರ ಮುಳುಗಡೆಯಾದ ಹೊಲದಲ್ಲಿ ನೀರಿನ ಮೋಟಾರ ಚಾಲೂ ಮಾಡಲು ಹೋದಾಗ ಆಕಸ್ಮಿಕವಾಗಿ ಕರೆಂಟ್ ಕಂಬದಿಂದ ತೆಗೆದುಕೊಂಡು ಹೋದ ಕರೆಂಟ್ ಸರ್ವೀಸ್ ವೈರ್ ತುಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದ್ದು ಅದೇ ಸ್ಥಳದಲ್ಲಿ ಪ್ರಾಣ ಪಕ್ಷಿ ಹಾರಿದೆ. ಮೃತನ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂದು ಪತ್ನಿ ವಿಜಯಲಕ್ಷ್ಮಿ ಸ್ಪಷ್ಠಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಲಮಟ್ಟಿ: ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅದ್ಧೂರಿಯಾಗಿ ಭಾನುವಾರ ಜರುಗಿತು.ಭಾನುವಾರ ಬೆಳಿಗ್ಗೆ ಅರಷಣಗಿ, ವಂದಾಲ, ಮಟ್ಟಿಹಾಳ, ಬೀರಲದಿನ್ನಿ ಯಿಂದ ಬಂದ ಗದ್ದೆಮ್ಮದೇವಿ ಹಾಗೂ ಬೀರಲಿಂಗೇಶ್ವರ ಪಂಚ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಬೀದಿಯಲ್ಲಿ ಅದ್ಧೂರಿಯಾಗಿ ಜರುಗಿತು. ಪಲ್ಲಕ್ಕಿ ಮೆರವಣಿಗೆಯಲ್ಲಿ ಜನತೆ ಭಂಡಾರದಲ್ಲಿ ಮಿಂದೆದ್ದರು. ಬೀರಲಿಂಗೇಶ್ವರ ದೇವರ ಮೂರ್ತಿಗೆ ಅಭಿಷೇಕ, ಪುಷ್ಪಾರ್ಚನೆ, ಅಲಂಕಾರ, ಗಂಗಾಸ್ಥಳಕ್ಕೆ ಪೂಜೆ ನಡೆಯಿತು. ಡೊಳ್ಳು ಮೇಳ, ಭಜನೆ ಮೇಳೆ, ಕಳಸ ಹಿಡಿದ ಮಹಿಳೆಯರು ಭಾಗವಹಿಸಿದ್ದರು. ಮಧ್ಯಾಹ್ನ ೫ ಜತೆ ಸಾಮೂಹಿಕ ವಿವಾಹ ಜರುಗಿತು. ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ, ಜಿ.ಸಿ. ಮುತ್ತಲದಿನ್ನಿ, ಬಂದೇನವಾಜ್ ಡೋಲಚಿ, ಜಬ್ಬಾರ್ ಕೊಟ್ಯಾಳ, ಬಿ.ಎಚ್. ಗಣಿ, ಮಹೇಶ ಗಾಳಪ್ಪಗೋಳ, ಬುಡ್ಡೇಸಾಬ್ ಬಾಗವಾನ್, ಟಿ.ಎಸ್. ಬಿರಾದಾರ, ಗ್ಯಾನಪ್ಪಗೌಡ ಬಿರಾದಾರ, ಅಮರಪ್ಪಗೌಡ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.ರಾತ್ರಿ ರಾಜ್ಯ ಮಟ್ಟದ ಟಗರಿನ ಕಾಳಗ ಜರುಗಿತು.
