ಮುದ್ದೇಬಿಹಾಳ: ಕೇಂದ್ರ ಬಿಜೆಪಿ ಸರ್ಕಾರ ದಿನಬಳಕೆಯ ಎಲ್ಲ ವಸ್ತುಗಳ ಮೇಲೆ ಜಿಎಸ್‌ಟಿ ಹಾಕಿ ಬಡವರನ್ನು ಲೂಟಿ ಹೊಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಆರೋಪಿಸಿದರು.
ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ವಿಜಯಪುರ ಕಾಂಗ್ರೇಸ್ ಅಭ್ಯರ್ಥಿ ರಾಜು ಆಲಗೂರ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.
ಜನಸಾಮಾನ್ಯರ ಬದುಕಿನ ಮೇಲೆ ಜಿಎಸ್‌ಟಿ ಪರಿಣಾಮ ಬೀರಿದೆ. ದಿನಬಳಕೆಯ ವಸ್ತುಗಳು ಗಗನಕ್ಕೇರಿವೆ. ಜೀರಿಗೆ, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಪದಾರ್ಥಗಳು ಕೈಗೆಟುಗದಂತಾಗಿವೆ. ಬಡವರ ಪರವಾಗಿ ಬಿಜೆಪಿ ಸರ್ಕಾರ ಯಾವ ಯೋಜನೆಗಳನ್ನೂ ಜಾರಿಗೊಳಿಸಿಲ್ಲ. ಬದಲಾಗಿ ಅವರ ದುಡಿಮೆಯಲ್ಲಿ ದಿನಂಪ್ರತಿ ಜಿಎಸ್‌ಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಈ ಬಾರಿ ಪ್ರತಿಯೊಬ್ಬರು ಕಾಂಗ್ರೇಸ್ ಗೆ ಮತ ನೀಡಿ ಪ್ರಚಂಡ ಬಹುಮತದಿಂದ ರಾಜು ಆಲಗೂರ ರನ್ನು ಆರಿಸಿ ತರಬೇಕು ಎಂದರು.
ಈ ವೇಳೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅದ್ಯಕ್ಷ ಶಿವಶಂಕರಗೌಡ ಹಿರೇಗೌಡರ ಪ್ರಮುಖರಾದ ವಾಯ್.ಎಚ್.ವಿಜಯಕರ, ಸುಜಾತಾ ಸಿಂದೆ, ಲಕ್ಷ್ಮಣ ಚವ್ಹಾಣ, ಬುಡ್ಡಾಸಾ ಚಪ್ಪರಬಂದ, ಶಾಮ್ ಪಾತ್ರದ, ಮುತ್ತಣ್ಣ ಮುತ್ತಣ್ಣವರ, ಹಣಮಂತ ಕುರಿ, ತಿಪಣ್ಣ ಹುಗ್ಗಿ, ಯಮನಪ್ಪ ಪುಜಾರಿ, ಬಸವರಾಜ ಚಿನಿವಾರ, ಗುರು ಸರೂರ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಂಗು ಚಲವಾದಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

