ಬಸವನಬಾಗೇವಾಡಿ: ಪಟ್ಟಣದ ಶಾಸಕರ ಮಾದರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕಾಡಳಿತ, ತಾಲೂಕು ಪಂಚಾಯತ ಹಾಗೂ ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಎಂಬ ಅಭಿಯಾನದಂಗವಾಗಿ ಸ್ವೀಪ್ ಧ್ವಜಾರೋಹಣ, ಪ್ರತಿಜ್ಞಾ ವಿಧಿ ಬೋಧನೆ, ನಮ್ಮ ನಡೆ ಮತಗಟ್ಟೆ ಸ್ವಚ್ಛತೆ ಕಡೆಗೆ ಕಾರ್ಯಕ್ರಮ ಭಾನುವಾರ ಜರುಗಿತು.
ಸ್ವೀಪ್ ಧ್ವಜಾರೋಹಣವನ್ನು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ನೆರವೇರಿಸಿ ಮಾತನಾಡಿದ ಅವರು, ಮೇ.೭ ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ಜಾಗೃತಿಯ ಕುರಿತು ಸ್ವೀಪ್ ಸಮಿತಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ಮಾಡುವ ಪ್ರಜಾಪ್ರಭುತ್ವವನ್ನು ಗಟ್ಟಿಗೊಳ್ಳಿಸುವ ಕಾರ್ಯದಲ್ಲಿ ಪಾತ್ರವಹಿಸಬೇಕು. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೨೩೦ ಮತಗಟ್ಟೆಗಳನ್ನು ೧೨೨ ಸ್ಥಳಗಳಲ್ಲಿವೆ. ಎಲ್ಲ ಮತಗಟ್ಟೆಗಳಲ್ಲಿ ಸ್ವೀಪ್ ಧ್ವಜಾರೋಹಣ ಆಯಾ ಭಾಗದ ಮುಖ್ಯಸ್ಥರಿಂದ ನೆರವೇರುವ ಮೂಲಕ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಮತದಾರರು ತಮ್ಮ ನೆರೆಹೊರೆಯವರಿಗೂ ಮತದಾನ ಕುರಿತು ಹೇಳಿ ವಿಧಾನಸಭೆ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತಲೂ ಹೆಚ್ಚಿನ ಪ್ರಮಾಣ ಮತದಾನ ಆಗಬೇಕಾದರೆ ಎಲ್ಲ ಮತದಾರರು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದರು.
ತಾಲೂಕು ಪಂಚಾಯಿತಿ ಪ್ರಭಾರಿ ಇಓ, ತಾಲೂಕು ಸ್ಪೀಪ್ ಸಮಿತಿ ಅಧ್ಯಕ್ಷ ಪ್ರಕಾಶ ದೇಸಾಯಿ ಮಾತನಾಡಿದರು.
ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ ಪ್ರತಿಜ್ಞಾ ವಿಧಿ ಬೋಧಿಸಿದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಸ್ವಾಗತಿಸಿ, ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ ಎಸ್.ಎಸ್.ನಾಯಕಲಮಠ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ಸಿ.ಜಿ.ಬಿರಾದಾರ, ಎಂಪಿಎಸ್ ಶಾಲೆಯ ಮುಖ್ಯಗುರು ಆರ್.ಡಿ.ಕಾಳಗಿ, ಆರೋಗ್ಯ ಇಲಾಖೆಯ ರಾಜಶೇಖರ ಚಿಂಚೋಳಿ, ಶಿಕ್ಷಣ ಇಲಾಖೆಯ ಎಂ.ವ್ಹಿ.ಗಬ್ಬೂರ, ತಾಪಂ ಇಲಾಖೆಯ ದೇವೇಂದ್ರ ಚೌರಿ, ಘೋರ್ಪಡೆ, ಮಡಿವಾಳಪ್ಪ ಬಿರಾದಾರ, ಪುರಸಭೆ ಸಿಬ್ಬಂದಿ, ಪೌರಕಾರ್ಮಿಕರು ಇತರರು ಇದ್ದರು.
ಮತದಾರರಿಗೆ ಜಾಗೃತಿ ಮೂಡಿಸಲು ಈ ಜಾಗೃತಿ ಧ್ವಜಾರೋಹಣ ಹಮ್ಮಿಕೊಂಡಿದ್ದರೂ ಯಾವುದೇ ಒಬ್ಬ ಮತದಾರ ಕಂಡುಬಾರದೇ ಕೇವಲ ಅಧಿಕಾರಿಗಳಿಗೆ, ಪುರಸಭೆ ಸಿಬ್ಬಂದಿಗಳಿಗೆ ಸೀಮಿತವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಲಾ ಆವರಣ ಸ್ವಚ್ಛತೆಯಿದ್ದರೂ ಅಧಿಕಾರಿಗಳು ಕೈಗೆ ಕೈಗವಸು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಸಬಾರಗಿ ಹಿಡಿದು ಕಸಗೂಡಿಸುವಂತೆ ಮಾಡಿ ನಮ್ಮ ನಡೆ ಮತಗಟ್ಟೆ ಸ್ವಚ್ಛತೆ ಕಡೆಗೆ ಅಭಿಯಾನಕ್ಕೆ ಪೋಟೋ ತೆಗೆಸಿಕೊಂಡ ಪ್ರಸಂಗ ನಡೆಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

