ದೇವರಹಿಪ್ಪರಗಿ: ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮಲ್ಲಯ್ಯ ದೇವಸ್ಥಾನ ಆವರಣದಲ್ಲಿ ಭಾನುವಾರ ಜರುಗಿದ ಬಿ.ಎಲ್.ಡಿ.ಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ೧೯೯೦-೯೧ ನೇ ಸಾಲಿನ ವಿದ್ಯಾರ್ಥಿ,ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಸ್ನೇಹಿತರ ಸಮ್ಮೀಲನದ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಸುವರ್ಣಮಾಲೆ ಧರಿಸಿದವರಿಗಿಂತ ವರ್ಣಮಾಲೆ ಧರಿಸಿದವರು ಶ್ರೇಷ್ಠರು. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದು ಇಲ್ಲ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದದು ಎಂದರು.
ಬೆಂಗಳೂರು ಮಾರತಹಳ್ಳಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಮಹಾಂತಲಿಂಗಶ್ರೀಗಳು ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನಾ ಕಾರ್ಯಕ್ರಮ ಜರುಗುತ್ತಿರುವು ಅತ್ಯಂತ ಶ್ಲಾಘನೀಯ. ಇಂದು ನಾವೆಲ್ಲ ಏನಾಗಿದ್ದೇವೆಯೋ ಅದಕ್ಕೆಲ್ಲಾ ಕಾರಣ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕ ವರ್ಗ. ಇವರಿಂದ ಶಾಲೆಯ ಪಾಠ ಮಾತ್ರವಲ್ಲ, ಭವಿಷ್ಯದ ಬದುಕಿನ ಪಾಠವು ಭೋದಿಸಲ್ಪಡುತ್ತದೆ ಎಂದರು.
ಉದ್ಘಾಟಕರಾಗಿ ಆಗಮಿಸಿದ ನಿವೃತ್ತ ಪ್ರಾಚಾರ್ಯ ಎಸ್.ಬಿ.ಮಿರ್ಜಿ, ತಹಶೀಲ್ದಾರ ಪ್ರಕಾಶ ಸಿಂದಗಿ, ಅಂಕಣಕಾರ ಮಂಜುನಾಥ ಜುನಗೊಂಡ, ಶಿಕ್ಷಕ ಎಸ್.ಎಂ.ಶೆಟ್ಟೆಣ್ಣವರ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಎ.ಆರ್.ಭತಗುಣಕಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕರಾದ ಬಿ.ಸಿ.ಹಿರೇಮಠ, ಬಿ.ಜಿ. ಅರಳಮಟ್ಟಿ, ಎಸ್.ಎಸ್.ರಾಮಗೊಂಡ, ವಿ.ಎಮ್.ಕೌಲಗಿ, ಬ್ರಹ್ಮಾನಂದ ಪಾಟೀಲ, ಸುಶೀಲಾಬಾಯಿ ಹದನೂರ, ಶಕುಂತಲಾ ಭಂಡಕ್ಕ, ಎಸ್.ಎಸ್.ಹುರಕಡ್ಲಿ, ಮಲ್ಲಮ್ಮ ನಾಯ್ಕೋಡಿ, ಅಶೋಕ ಗಚ್ಚಿನಮಠ, ಜೆ.ಆರ್.ದಾನಗೊಂಡ, ಶಾಂತಪ್ಪ ದೇಸಾಯಿ, ಎಸ್.ಎಂ.ಬಟವಾಲ್ ಹಾಗೂ ಜಿ.ಜಿ.ಜುಮನಾಳರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅಗಲಿದ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನೀಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವಿಶೇಷ ಸಾಧನೆ ಮಾಡಿದ ಬಸವರಾಜ ಕೌಲಗಿ, ಬಾಳಯ್ಯ ಇಂಡಿಮಠ, ಈರಣಗೌಡ ಪಾಟೀಲ, ಅಯ್ಯನಗೌಡ ಪಾಟೀಲ, ಅನೀಲ ಪೋರವಾಲ್, ಕಾಶೀನಾಥ ಸಾಲಕ್ಕಿ, ಶಂಕರಗೌಡ ಪಾಟೀಲ, ಸಿದ್ದು ಮೇಲಿನಮನಿ, ಶ್ರೀಕಾಂತ ಕಾಖಂಡಕಿ, ಕಮಲಾಕ್ಷಿ ಕುಂಬಾರ, ಸೋಮನಗೌಡ ಬಿರಾದಾರ, ಸಬಿನಾ ಕಲಾಲ್ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿವಾನಂದ ಅಸಂತಾಪೂರ, ಸುರೇಶ ನಾಯಿಕ್ ವಸಂತ ನಾಡಗೌಡ, ಸಂಜೀವ ವಗ್ಗರ, ರಾಜು ನಾಯ್ಕರ್, ರಮೇಶ ಮಣೂರ, ಬಸನಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಭಾರತಿ ನಾಡಗೌಡ, ಸುಜಾತಾ ಈಳಗೇರ, ಕಾಶೀಬಾಯಿ ಪಾಟೀಲ, ಕಾವೇರಿ ಬಡಿಗೇರ, ನಾಗಮ್ಮಾ ಕೋರಿ, ಸುನೀತಾ ನಾಡಗೌಡ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
ಗುರು-ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಸಂಬಂಧ :ವಾಮದೇವ ಶ್ರೀ
Related Posts
Add A Comment

