ದೇವರಹಿಪ್ಪರಗಿ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಹಕಾರಭಾರತಿ ಸಂಘಟನೆಯ ಮೂಲಕ ಅಭ್ಯಾಸವರ್ಗ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಹರ್ಷಗೌಡ ಪಾಟೀಲ ಹೇಳಿದರು.
ಪಟ್ಟಣದ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಶನಿವಾರ ಜರುಗಿದ ಸಹಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ಸಹಕಾರ ಭಾರತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಎಲ್ಲ ಸಹಕಾರ ಸಂಘಗಳಿಗೆ ಭೇಟಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಅಗತ್ಯವಾದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಸಹಕಾರ ಕ್ಷೇತ್ರದ ಎಲ್ಲ ಹಿರಿಯರ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿ ಬೇಕು ಎಂದರು.
ಸಹಕಾರ ಭಾರತಿ ವಿಭಾಗೀಯ ಕಾರ್ಯದರ್ಶಿ ಸುಭಾಸ್ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಭಾರತಿ ಯಾವತ್ತಿಗೂ ಸಹಕಾರ ಸಂಘ, ಸಂಸ್ಥೆಗಳನ್ನು ಸ್ವಾಯತ್ತವಾಗಿರಿಸಲು ಮತ್ತು ಬಾಹ್ಯ ನಿಯಂತ್ರಣ ಮತ್ತು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಲು ಬದ್ಧವಾಗಿದೆ. ಜೊತೆಗೆ ಎಂದಿಗೂ ಪ್ರಚಾರ ಬಯಸದೇ ಇರುವಂತಹ ಸಂಘಟನೆಯಾಗಿದೆ ಎಂದರು.
ಸಹಕಾರಭಾರತಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಆರ್.ಆರ್.ನಾಯಿಕ್ ಸ್ವಾಗತಿಸಿ, ಮಾತನಾಡಿದರು. ನಂತರ ನೂತನ ಅಧ್ಯಕ್ಷರು , ವಿಭಾಗೀಯ ಕಾರ್ಯದರ್ಶಿಗಳು ಸಹಿತ ಸಂಘಟನಾ ಕಾರ್ಯದರ್ಶಿ ದೀಪಕ ಶಿಂತ್ರೆ, ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲಿ ಅವರನ್ನು ಸನ್ಮಾನಿಸಲಾಯಿತು.
ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಲಕ್ಷö್ಮಣ ಸುಗತೇಕರ, ಅಶೋಕ ಮಶಾನವರ, ಗುರುಬಾಳ ಯರಗಲ್, ಹಸನಸಾಬ್ ವಡ್ಡೋಡಗಿ, ಸಿದ್ದು ಮಸಬಿನಾಳ, ಮುಖ್ಯ ಕಾರ್ಯನಿರ್ವಾಹಕ ಎಂ.ಜಿ.ಹಿರೇಕುರುಬರ, ಸರೋಜಾ ಪಾಟೀಲ, ಸಮೃದ್ಧಿ ಸಹಕಾರ ಸಂಘದ ಅಧ್ಯಕ್ಷೆ ಸಂಗೀತಾ ನಾಯಿಕ್, ನಿರ್ದೇಶಕರಾದ ವೆಂಕಟೇಶ ಕುಲಕರ್ಣಿ, ಪಿ.ಜಿ.ಹಿರೇಮಠ, ಬಸವರಾಜ ಬಬಲೇಶ್ವರ, ಕೆ.ಎಸ್.ಕೋರಿ, ಎ.ಕೆ.ಹಿರೇಮಠ, ಮುಳಸಾವಳಗಿ ಪಿಕೆಪಿಎಸ್ ಅಧ್ಯಕ್ಷ ಸೋಮನಗೌಡ ಬಿರಾದಾರ, ಸಿಇಓ ಸಿದ್ದು ಆನಂದಿ ಸಿಬ್ಬಂದಿ ಬಸವರಾಜ ಸಜ್ಜನ, ಸುರೇಶ ಕುಲಕರ್ಣಿ, ಹಣಮಂತ ಹಡಪದ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

