Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಐ ಆಗಿ ಕಾರ್ಯನಿರ್ವಹಿಸಲು ಆಗಮಿಸಿರುವ ವಿಜಯ ಮುರುಗುಂಡಿ ಅವರನ್ನು ತಾಲೂಕ ಕರುಹಿನಶೆಟ್ಟಿ ಸಮಾಜದ ವತಿಯಿಂದ ಬುಧವಾರ ಫಲಪುಷ್ಪ ನೀಡಿ ಗೌರವಿಸಿ ಸನ್ಮಾನಿಸಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕುರುಹಿನಶೆಟ್ಟಿ ಸಮಾಜದ ಉಪಾಧ್ಯಕ್ಷ ಈರಣ್ಣ ಶಹಪುರ, ನಿರ್ದೇಶಕರಾದ ಶ್ರೀಶೈಲ ಶಿರಗುಪ್ಪಿ, ಅಶೋಕ ಟಕ್ಕಳಕಿ, ಸೋಮಲಿಂಗ ಹೊಸಮನಿ, ಡಾ. ಶ್ರೀಶೈಲ ಕೂಡಗಿ, ಹಿರಿಯರಾದ ಬಸಪ್ಪ ಬೇವನೂರ ಬಸವರಾಜ ಜಾಡರ, ಶಿಕ್ಷಕ ಚನ್ನಪ್ಪ ಜಾಡರ, ಎಸ್ ಜಿ ಮುತ್ತೂರ, ಹಾಗೂ ಸೋಮು ಗೋಟೆದ, ಆನಂದ ದಿಂಡಿ ಸೇರಿದಂತೆ ಇತರರು ಇದ್ದರು.

Read More

ಬಸವನಬಾಗೇವಾಡಿ: ಪಟ್ಟಣದ ಓಂ ನಗರದಲ್ಲಿರುವ ಕಾಳಿಕಾದೇವಿ ದೇವಸ್ಥಾನದ ಜಾತ್ರಾ ದಶಮಾನೋತ್ಸವದ ಅಂಗವಾಗಿ ಫೆ.15 ಮತ್ತು 16 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಫೆ.15 ರಂದು ಬೆಳಿಗ್ಗೆ 8 ಗಂಟೆಗೆ ವಿಶ್ವಕರ್ಮ ಧರ್ಮ ಧ್ವಜಾರೋಪಣ ಹಾಗೂ ದೇವಾಲಯದ ಕಳಸಾರೋಹಣ ಕಾರ್ಯಕ್ರಮ ನಡೆಯುವುದು. 8-30 ಗಂಟೆಗೆ ಜಗನ್ಮಾತಾ ಕಾಳಿಕಾದೇವಿಗೆ ಅಭಿಷೇಕ ನಂತರ ಸರ್ವಾಲಂಕಾರ ಪೂಜೆ ನೆರವೇರುವುದು, 9 ಗಂಟೆಗೆ ಚಂಡಿಕಾ ಹೋಮ ನಡೆಯುವುದು. ಮಧ್ಯಾಹ್ನ 12 ಗಂಟೆಗೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು.ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಧರ್ಮ ಸಭೆಯಲ್ಲಿ ಮಹೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಕಾಳಿಕಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೆ.ಬಿ.ಕಡೆಮನಿ ಅಧ್ಯಕ್ಷತೆ ವಹಿಸುವರು,.ಜವಳಿ, ಸಕ್ಕರೆ ಅಭಿವೃದ್ಧಿ, ಕೃಷಿ ಮಾರಕಟ್ಟೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು.ಮಾಜಿ ಸಚಿವ ಎಸ್. ಕೆ. ಬೆಳ್ಳುಬ್ಬಿ, ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ, ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪಿಕೆಪಿಎಸ್…

Read More

ಹೂವಿನಹಿಪ್ಪರಗಿಯಲ್ಲಿ ಜರುಗಿದ ಸಂವಿಧಾನ ಜಾಗೃತಿ ಜಾಥಾ ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹೂವಿನಹಿಪ್ಪರಗಿ ಗ್ರಾಮ ಪಂಚಾಯತ ಸಹಯೋಗದಲ್ಲಿ ಮಂಗಳವಾರ ಸಂಜೆ ಜರುಗಿದ ಸಂವಿಧಾನ ಜಾಗೃತಿ ಜಾಥಾ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಮೆರವಣಿಗೆ ನಂತರ ಜರುಗಿದ ಸಮಾರಂಭದಲ್ಲಿ ಬೆರಳೆಣಿಕೆಯಷ್ಟು ಜನರಿಂದ ಸಪ್ಪೆಯಾಗಿ ಜರುಗಿ ಜನರ ಆಕ್ರೋಶಕ್ಕೆ ಕಾರಣವಾಯಿತು.ಗ್ರಾಮಕ್ಕೆ ಸಂಜೆ ೬ ಗಂಟೆಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರದ ಮೆರವಣಿಗೆಯಲ್ಲಿ ವಿವಿಧ ಶಾಲಾ ಮಕ್ಕಳ ವಿವಿಧ ನೃತ್ಯ, ಕೋಲಾಟ, ಲೇಜಿಮ್, ಬ್ಯಾಂಡ್ ಬಾಜಿ, ಬ್ಯಾಂಜೋ, ಸಾರವಾಡದ ಗೊಂಬೆಗಳು ಭಾಗವಹಿಸುವ ಮೂಲಕ ಮೆರವಣಿಗೆಗೆ ಮೆರಗು ತಂದವು. ಮೆರವಣಿಗೆಯಲ್ಲಿ ವಿವಿಧ ಮುಖಂಡರು, ವಿವಿಧ ಅಧಿಕಾರಿಗಳು, ವಿವಿಧ ಶಾಲಾ ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಮಾರ್ಗ ಮಧ್ಯದಲ್ಲಿ ಕೆಲವೆಡೆ ಬೀದಿ ದೀಪದ ವ್ಯವಸ್ಥೆ ಇಲ್ಲದೇ ಇರುವದರಿಂದಾಗಿ ಮಕ್ಕಳು ಕತ್ತಲೆಯಲ್ಲಿ ಸಾಗುವಂತಾಯಿತು.ಮೆರವಣಿಗೆ ಸಮಾರಂಭ ಹಮ್ಮಿಕೊಂಡಿದ್ದ ಎಂ.ಕೆ. ಮತ್ತು ಡಾ.ಬಿ.ಜಿ.ಬ್ಯಾಕೋಡ ಪದವಿ ಪೂರ್ವ…

Read More

ಹುಣಸಗಿ: ಪಟ್ಟಣದ ಮುಸ್ಲಿಂ ಭಾಂಧವರು ಉಮ್ರಾ ಯಾತ್ರೆಗೆ ಹೋಗುವ ಯಾತ್ರಿಕರಿಗೆ ಪಟ್ಟಣದ ಮಹಾಂತಸ್ವಾಮಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರಿಂದ ಸನ್ಮಾನಿಲಾಯಿತು.ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಶ್ರೀ ಸಿದ್ದಣ್ಣ ಮಲಗಲದಿನ್ನಿ, ಕಾಂಗ್ರೆಸ್ ಯುವ ಮುಖಂಡ ಆರ್.ಎಮ್.ರೇವಡಿ, ಪಟ್ಟಣ ಪಂಚಾಯತ ಸದಸ್ಯರಾದ ಖಾಸೀಂಸಾಬ ಟೊಣ್ಣುರ್, ‌ಹಾಗೂ ಬಾಬು ಹವಾಲ್ದಾರ ಇನ್ನೂ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

Read More

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅವೈಜ್ಞಾನಿಕ ಶೈಕ್ಷಣಿಕ ನೀತಿಗೆ ಖಂಡನೆ ವಿಜಯಪುರ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರದ ಬಸವೇಶ್ವರ ವೃತ್ತದ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ರಸ್ತೆ ತಡೆಗಟ್ಟಿದ ಕಾರಣ ಪೊಲೀಸ್ ಮತ್ತು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರ ನಡುವೆ ಮಾತಿನ ಚಕಮಕ್ಕಿ ನಡೆಯಿತು ಅದಾದ ನಂತರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ರಾಜ್ಯ ಕಾರ್ಯದರ್ಶಿಗಳಾದ ಸಚಿನ ಕುಳಗೇರಿ ಇವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಪತಿಗಳಾದ ಪ್ರೊ ರವೀಂದ್ರನಾಥ ಕದಮ್ ಇವರಿಗೆ ಆಗ್ರಹಪಡಿಸಿದರು.ಅನೇಕ ವಿಶ್ವವಿದ್ಯಾಲಯಗಳು ಅತ್ಯಂತ ವ್ಯವಸ್ಥಿತವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡಿದೆ, ಆದರೆ ಇವತ್ತಿನ ವಿಶ್ವವಿದ್ಯಾಲಯಗಳಿಗೆ ಶಿಕ್ಷಣವು ಪ್ರಾಮುಖ್ಯತೆ ಆಗದೆ ಕೇವಲ ಆಡಳಿತ ಮಾಡುವ ಕೇಂದ್ರಗಳಾಗಿವೆ, ಸರ್ಕಾರಗಳು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಪ್ರಾಮುಖ್ಯತೆಯನ್ನು ನೀಡಬೇಕೆಂದು ಆಗ್ರಹಿಸಿದರು.ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ ಮಾತನಾಡಿದರು.ಮೌಲ್ಯಮಾಪನ ಕುಲಸಚಿವರು ಸಮಸ್ಯೆ ಬಗೆಹರಿಸುವ ಭರವಸೆಯನ್ನು…

Read More

ಮುದ್ದೇಬಿಹಾಳ: ರಾಜ್ಯ ಸರ್ಕಾರದ ಆದೇಶದಂತೆ ಭಾರತದ ಸಂವಿಧಾನ ಜಾರಿಗೆ ಬಂದು ೭೫ ನೇ ವರ್ಷಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.ಸಂವಿಧಾನದ ಆಶಯ ಮತ್ತು ಮಹತ್ವಗಳನ್ನು ಸರ್ವರಿಗೂ ತಿಳಿಸುವ ಉದ್ದೇಶದಿಂದ ಒಂದು ಸ್ಥಬ್ಧಚಿತ್ರವು ತಾಲೂಕಿಗೆ ಫೆ.೧೪ ರಿಂದ ಫೆ.೧೯ ರವರೆಗೆ ೨೧ ಗ್ರಾಮ ಪಂಚಾಯತಗಳು, ೧ ಪುರಸಭೆ, ೧ಪಟ್ಟಣ ಪಂಚಾಯತಿ ಹೀಗೆ ಒಟ್ಟು ೨೩ ಗ್ರಾಮಗಳಲ್ಲಿ ಸಂಚರಿಸಲಿದೆ. ಫೆ.೧೪ ರಂದು ಮಧ್ಯಾಹ್ನ ೧೨:೩೦ ಕ್ಕೆ ರೂಢಗಿ ಗ್ರಾಮಕ್ಕೆ ಆಗಮಿಸಲಿದ್ದು, ಬಸರಕೋಡ ಮಾರ್ಗವಾಗಿ ಢವಳಗಿ ಗ್ರಾಮದಲ್ಲಿ ಸಂಜೆ ೭:೩೦ ಕ್ಕೆ ಬಹಿರಂಗ ಕಾರ್ಯಕ್ರಮದ ಮೂಲಕ ವಾಸ್ತವ್ಯ ಹೂಡಲಿದೆ. ಫೆ.೧೫ ರಂದು ಮಡಿಕೇಶ್ವರ, ಇಂಗಳಗೇರಿ, ಕುಂಟೋಜಿ ಗ್ರಾಮಗಳ ಮಾರ್ಗವಾಗಿ ಮಧ್ಯಾಹ್ನ ೩ ಗಂಟೆಗೆ ಮುದ್ದೇಬಿಹಾಳ ತಲುಪಲಿದ್ದು, ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಸಂಜೆ ೭:೩೦ ಬಹಿರಂಗ ಕಾರ್ಯಕ್ರಮ ಜರುಗುವದಾಗಿ ಪ್ರಕಟಣೆ ತಿಳಿಸಿದೆ.

Read More

ಆಲಮಟ್ಟಿ: ಇಲ್ಲಿಯ ಚಿಮ್ಮಲಗಿ ಭಾಗ-೧ಎ ಗ್ರಾಮದ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ದೇವರ ಜಾತ್ರಾ ಮಹೋತ್ಸವ ಇದೇ ಫೆ.೧೪ ರಂದು ಜರುಗಲಿದೆ. ಬುಧವಾರ ಬೆಳಿಗ್ಗೆ ೬ ಕ್ಕೆ ಅಂಬಾಭವಾನಿ ದೇವಿಯ ವಿಶೇಷ ಆರತಿ ಪೂಜೆ ಜರುಗುವುದು, ಬೆಳಿಗ್ಗೆ ೭ ಕ್ಕೆ ಅಂಬಾಭವಾನಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಜರುಗಲಿದೆ. ಚಂದ್ರಮ್ಮಾ ದೇವಸ್ಥಾನದ ಹತ್ತಿರದ ಕೃಷ್ಣಾ ನದಿಯಿಂದ ಅಂಬಾಭವಾನಿ ದೇವಸ್ಥಾನದವರೆಗೆ ೧೦೧ ಕುಂಭ ಮೆರವಣಿಗೆ, ಕರಡಿ ಮಜಲು, ಡೊಳ್ಳು ವಾಲಗದೊಂದಿಗೆ  ಜರುಗಲಿದೆ. ಮಧ್ಯಾಹ್ನ ೧೨ ಕ್ಕೆ  ಮಹಾಪೂಜೆ, ಅಭಿಷೇಕ, ಕಳಸಾಭಿಷೇಕ, ಪ್ರಸನ್ನ ಪೂಜಾ ಸಮಾರಂಭ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಮಧ್ಯಾಹ್ನ ೧ ಕ್ಕೆ ಅನ್ನಸಂತರ್ಪಣೆ ಜರುಗಲಿದೆ ಎಂದು ಅಂಬಾಭವಾನಿ ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Read More

ಆಲಮಟ್ಟಿಯಲ್ಲಿ ಅರಣ್ಯ ದಿನಗೂಲಿ ಕಾರ್ಮಿಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳ ನಿರ್ವಹಣೆ ಕಾಮಗಾರಿಗೆ ಕರೆದಿರುವ ಟೆಂಡರ್ ನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅರಣ್ಯ ದಿನಗೂಲಿ ಕಾರ್ಮಿಕರು ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡು ದಿನ ಪೂರ್ಣಗೊಳಿಸಿತು.ಕಳೆದ ೨೫ ವರ್ಷಗಳಿಂದ ನಾವು ಕೆಬಿಜೆಎನ್ ಎಲ್ ಅರಣ್ಯ ಇಲಾಖೆ ನೀಡುವ ದಿನಗೂಲಿ ವೇತನದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದೇವೆ. ಟೆಂಡರ್ ಪ್ರಕ್ರಿಯೆ ನಡೆದರೆ ನಾವು ಕೆಲಸ ಕಳೆದುಕೊಳ್ಳುವ ಭೀತಿ ಆವರಿಸಿದೆ. ನಮ್ಮ ಸಮಸ್ಯೆಯನ್ನು ಮಾನವೀಯ ನೆಲೆಗಟ್ಟಿನಲ್ಲಿ ನೋಡಬೇಕು, ಇಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಕಾರ್ಮಿಕರು ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರಿದ್ದಾರೆ. ಒಂದೆಡೆ ಮನೆ, ಜಮೀನು ಕಳೆದುಕೊಂಡು ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅದಕ್ಕೂ ಹೊಡೆತ ಬೀಳುವ ಭಯ ಆವರಿಸಿದೆ ಎಂದು ಪ್ರತಿಭಟನಾಕಾರರು ಹೇಳಿದರು.ಪ್ರತಿಭಟನೆಯಲ್ಲಿ ದ್ಯಾಮಣ್ಣ ಬಿರಾದಾರ, ಸಂಗಮೇಶ ಯರನಾಳ, ಗುರುಲಿಂಗಯ್ಯ ಗೌಡರ, ಮೀನಾಕ್ಷಿ ರಾಓಡ, ಶಾಂತಾ ಚಿಮ್ಮಲಗಿ, ಯಲ್ಲವ್ವ ಮೇಟಿ, ಚನ್ನಮ್ಮ ಮಠ, ಪ್ರಭು…

Read More

ಆಲಮಟ್ಟಿ: ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಅಂಗವಾಗಿ ನಡೆದ ಅಂತರರಾಜ್ಯ ಟಗರಿನ ಕಾಳಗ ಮೈರೋಮಾಂಚನಗೊಳಿಸಿತು.ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ದಾವಣಗೆರೆ, ಯಾದಗೀರ ಸೇರಿದಂತೆ ನಾನಾ ಕಡೆಯಿಂದ ಸುಮಾರು ೧೮೦ ಕ್ಕೂ ಅಧಿಕ ಟಗರುಗಳು ಸ್ಪರ್ಧೆಗೆ ಬಂದಿದ್ದವು. ಕೇಸಾಪುರದ ಗಿಡ್ಡ ಪ್ರಥಮ ಸ್ಥಾನ:ಮುದ್ದೇಬಿಹಾಳ ತಾಲ್ಲೂಕಿನ ಕೇಸಾಪುರದ ಗಿಡ್ಡ ಹೆಸರಿನ ಟಗರು ಪ್ರಥಮ ಸ್ಥಾನ ಪಡೆಯಿತು. ಅದರ ಮಾಲೀಕ ಪ್ರವೀಣ ಬುಲೆಟ್ ರಾಯಲ್ ಎನ್ ಫೀಲ್ಡ್ ಬೈಕ್ ತಮ್ಮದಾಗಿಸಿಕೊಂಡ. ಬಾಗಲಕೋಟೆ ಬಳಿಯ ಗದ್ದನಕೇರಿಯ ಕಿರಣ ಅವರ ಗರುಡಾ ಟಗರು ದ್ವಿತೀಯ ಸ್ಥಾನ ಪಡೆಯಿತು. ಅವರಿಗೆ ೧.೩೦ ಲಕ್ಷ ರೂ ಮೌಲ್ಯದ ಹೋಂಡಾ ಶೈನ್ ಬೈಕ್ ಬಹುಮಾನ ನೀಡಲಾಯಿತು. ತೃತೀಯ ಸ್ಥಾನ ಹಾಗೂ ಚತುರ್ಥ ಸ್ಥಾನ ಮುದ್ದೇಬಿಹಾಳ ತಾಲ್ಲೂಕಿನ ಕಿಲ್ಲಾರಹಟ್ಟಿಯ ಅಮರಪ್ಪ ಮದರಿ ಅವರಿಗೆ ಸೇರಿದ ಎರಡು ಟಗರುಗಳು ಪಡೆದವು. ತೃತೀಯ ಬಹುಮಾನ ಒಂದು ಲಕ್ಷ ರೂ ಮೌಲ್ಯ ಹಿರೋ ಎಚ್ ಎಫ್ ಡಿಲಕ್ಸ್ ಬೈಕ್ ಹಾಗೂ ಚತುರ್ಥ ಬಹುಮಾನ ೧೦ ಸಾವಿರ…

Read More