ಇಂಡಿ: ದೇಶ ಭಕ್ತಿಯನ್ನು ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಕಾಂಗ್ರೆಸ್ ಪಕ್ಷದ ಸ್ಟಾರ್ ಕಂಪೆನರ್, ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ತಾಲೂಕಿನ ತಾಂಬಾದಲ್ಲಿ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶ ಉಳಿಸಿ ಬೆಳೆಸಿದವರ ಕೊಡುಗೆ ಬಹಳವಿದೆ. ಈಗ ಹತ್ತು ವರ್ಷದಿಂದ ದೇಶ ಪ್ರೇಮವನ್ನು ಕಲಿಸಿಕೊಡಲಾಗುತ್ತಿದೆ. ಮೋದಿಯವರ ರೊಟ್ಟಿ ತವೆ ಮೇಲೆ ಹೊತ್ತುತ್ತಿದೆ. ಅದನ್ನು ತಿರುವಿ ಹಾಕಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ನೀವು ರಾಜು ಆಲಗೂರರಿಗೆ ಓಟು ಹಾಕಿ ಎನ್ನಲು ನಮಗೆ ನೈತಿಕ ಹಕ್ಕಿದೆ. ನಮ್ಮ ಅಭ್ಯರ್ಥಿ ಅಭಿವೃದ್ಧಿ ಪರ ಚಿಂತಕರಾಗಿದ್ದಾರೆ. ನೀವು ಈ ಸಲ ಬದಲಾವಣೆ ತನ್ನಿ, ದೇಶದಲ್ಲೂ ಬದಲಾವಣೆ ಖಂಡಿತ ಆಗಲಿದೆ. ಯಾವ ಕೆಲಸವೂ ಮಾಡದೇ ಇರುವ ಕಾರಣ ಮೋದಿಯವರ ವರ್ಚಸ್ಸು ಮುಗಿದಿದೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, ರಾಜ್ಯದ ಸಿದ್ದರಾಮಯ್ಯ ಸರಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಬಹು ದೊಡ್ಡ ಕೆಲಸ ಮಾಡಲಾಗಿದೆ. ನಾವು ಬಸವ ನಾಡಿನವರು, ಕಾಂಗ್ರೆಸ್ ಪಕ್ಷ ಕೂಡ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತಿದೆ. ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಶ್ರಮಿಸುತ್ತಿದ್ದೇವೆ. ಈಗಿನ ಕೇಂದ್ರ ಸರ್ಕಾರದ ಮೋದಿ ಹಾಗೂ ಇಲ್ಲಿನ ಸಂಸದ ಜಿಗಜಿಣಗಿಯವರು ಏನೊಂದು ಕೆಲಸ ಮಾಡಿಲ್ಲ. ಬರೀ ಅಧಿಕಾರದಲ್ಲಿ ಇದ್ದದ್ದೇ ಇವರ ಸಾಧನೆಯಾಗಿದೆ. ಈ ಬಾರಿ ಬದಲಾವಣೆ ತಂದರೆ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬದ್ಧ ಎಂದರು.
ಶಾಸಕ ಅಶೋಕ ಮನಗೂಳಿ , ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ , ವಿಪ ಸದಸ್ಯ ಪ್ರಕಾಶ ರಾಠೋಡ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಸಿದ್ದಗೊಂಡ ಪೂಜಾರಿ, ಜಕ್ಕಪ್ಪ ಹತ್ತಳ್ಳಿ, ಮಲ್ಲಣ್ಣ ಸಾಲಿ, ಕಾಮೇಶ ಉಕ್ಕಲಿ, ಗುರಣ್ಣಗೌಡ ಪಾಟೀಲ, ಶ್ರೀಮಂತ ಲೋಣಿ, ಅಪ್ಪಣ್ಣ ಕಲ್ಲೂರ, ಮಹಾದೇವ ಗಡ್ಡದ, ರವಿಕುಮಾರ ಚವ್ಹಾಣ, ಸುರೇಶ ಗೊಣಸಗಿ, ಸಾದಿಕ್ ಸುಂಬಡ, ಚಿಕ್ಕಪ್ಪ, ಸಿದ್ದು ಹತ್ತಳ್ಳಿ, ಬಿ.ಎಂ.ಪಾಟೀಲ, ಅಶೋಕ ಲಾಗಲೋಟಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

