Author: editor.udayarashmi@gmail.com

ಮುದ್ದೇಬಿಹಾಳ: ದಾನಗಳಲ್ಲಿ ರಕ್ತದಾನವೂ ಶ್ರೇಷ್ಠವಾದದ್ದು. ಆರೋಗ್ಯವಂತರು ರಕ್ತದಾನ ಮಾಡಿದಲ್ಲಿ ಹಲವಾರು ಜೀವಗಳನ್ನು ಉಳಿಸಬಹುದು ಎಂದು ತಾಲೂಕ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ.ಅನಿಲಕುಮಾರ್ ಶೇಗುಣಿಸಿ ಹೇಳಿದರು.ಪಟ್ಟಣದ ಎಂ.ಜಿ.ವ್ಹಿ.ಸಿ ಮಹಾವಿದ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಜಯಪುರ, ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಸೌಟ್ಸ್ & ಗೈಡ್ಸ್, ಎನ್.ಎಸ್.ಎಸ್, ಭಾರತೀಯ ಯೂತ್ ರೆಡ್ ಕ್ರಾಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನದ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.ರಕ್ತದಾನ ಮಹಾದಾನ, ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ತರುಣರು ರಕ್ತದಾನಕ್ಕೆ ಮುಂದಾಗಬೇಕು. ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಮಹಾ ವಿದ್ಯಾಲಯವು ಪ್ರತಿವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು.ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಯೋಜಕ ಪ್ರೊ ಎಸ್.ಎಸ್.ಹೂಗಾರ್ ಮಾತನಾಡಿದರು.ಶಿಬಿರದಲ್ಲಿ ೩೬ ಯೂನಿಟ್ ರಕ್ತವನ್ನು ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ದಾನ…

Read More

ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಡಿ ಸರ್ಕಲ್ ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಲಾಗಿದೆ.ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಫೆ.೨೬ ರಿಂದ ಮಾರ್ಚ್ ೦೭ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮನುಸಾರವಾಗಿ ವಿಜಯಪುರ ನಗರದ ಮಿನಾಕ್ಷಿ ಚೌಕ್‌ನಲ್ಲಿರುವ ನಾಗಪಾಲ ಬಿಲ್ಡಿಂಗ್, ಸೌರಭ ಫಾರ್ಮಾ ಎದುರಿಗೆ, ಇಜೇರಿ ಕರಿಯರ್ ಅಕಾಡೆಮಿಯಲ್ಲಿ ಉಚಿತ ತರಬೇತಿ ಆಯೋಜಿಸಲಾಗಿದೆ.ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಕೆಎಸ್‌ಪಿನಲ್ಲಿ ಅಧಿಸೂಚಿತ ಕಾನ್ಸಟೇಬಲ್ ಹುದ್ದೆಗೆ ಸಲ್ಲಿಸಿರುವ ತಮ್ಮ ಅರ್ಜಿಯ ಝರಾಕ್ಸ್ ಪ್ರತಿ ಹಾಗೂ ಆಧಾರ ಕಾರ್ಡ ಝರಾಕ್ಸ್ದೊಮದಿಗೆ ದಿನಾಂಕ: ೨೬-೦೨-೨೦೨೪ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಖುದ್ದಾಗಿ ಅಥವಾ ಕಚೇರಿಯ empbjp@gmail.com ಇಮೇಲ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸ್ಟೇಶನ ರಸ್ತೆ, ವಿಜಯಪುರ ಅಥವಾ ದೂರವಾಣಿ : ೦೮೩೫೨-೨೫೦೩೮೩, ಮೊ: ೯೦೭೧೦೫೫೫೫೭, ೯೩೪೧೭೭೭೭೫೭ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ೧೧೩೭ ಹುದ್ದೆಗಳ ಭರ್ತಿಗೆ ರಾಜ್ಯದಾದ್ಯಂತ ಫೆ.೨೫ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧೨-೩೦ರವರೆಗೆ ಲಿಖಿತ ಪರೀಕ್ಷೆಗಳು ಜರುಗಲಿದ್ದು, ಲಿಖಿತ ಪರೀಕ್ಷೆಗೆ ಹಾಜರಾಗುವ ಜಿಲ್ಲೆಯ ಅಭ್ಯರ್ಥಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅವರು ತಿಳಿಸಿದ್ದಾರೆ.ಪುರುಷ ಮತ್ತು ತೃತೀಯಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್ಗಳನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ಗಳನ್ನು ಧರಿಸಬೇಕು. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟಗಳನ್ನು ಧರಿಸುವಂತಿಲ್ಲ. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದೊಳಗೆ ಷೂಗಳನ್ನು ನಿಷೇಧಿಸಲಾಗಿದ್ದು, ಪರೀಕ್ಷಾರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು ಧರಿಸಬೇಕು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರು ಮತ್ತು ಕಡಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.ಮಹಿಳಾ ಮತ್ತು ತೃತೀಯಲಿಂಗ ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು…

Read More

ಸಿಂದಗಿ: ಶಿವಾಜಿ ಮಹಾರಾಜರು ಒಬ್ಬ ಅದ್ಭುತ ಸಾಮ್ರಾಟ ತನ್ನ ಯುದ್ಧ ಕಲೆಗಳಿಂದಲೇ ಸಾಮ್ರಾಜ್ಯವನ್ನು ಕಟ್ಟಿದ ಧೀರ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಲೆ ಮತ್ತು ಜೀವನದ ಸಂಸ್ಕೃತಿಗಳನ್ನು ಶಿವಾಜಿ ಮಹಾರಾಜರು ತನ್ನ ತಾಯಿಯಿಂದಲೇ ಕಲಿತ ವಿದ್ಯೆಗಳಾಗಿದ್ದವು.ಮಹಾಪುರುಷರ ಆಚರಣೆಗಳನ್ನು ಕೇವಲ ಜಾತಿಗಳಿಗೆ ಸೀಮಿತಗೊಳಿಸದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರುಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ಪತ್ರಕರ್ತ ಮಲ್ಲು ಕೆಂಭಾವಿ, ಮಡಿವಾಳ ನಾಯ್ಕೋಡಿ, ಕುಮಾರ ಗೊಂಧಳಿ, ನೀಲಕಂಠ ಚಲವಾದಿ, ಬಾಬು ಜಾಲವಾದಿ, ಗೋಲ್ಲಾಳ ನಾಯ್ಕೋಡಿ, ಮಹಾಂತೇಶ ಗೊಂಧಳಿ, ಭೈರವ ಬನ್ನೆ, ರಾಜಾರಾಮ ಗೊಂಧಳಿ, ಸುದೀಪ ಗೊಂಧಳಿ, ಚೌಡು ಹಡಪದ ಸೇರಿದಂತೆ ಅನೇಕರು ಇದ್ದರು.ತಾಲೂಕು ಆಡಳಿತ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಕಂದಾಯ ನಿರೀಕ್ಷಕ ಐ.ಎ.ಮಕಾಂದಾರ,…

Read More

ಶಾಲೆಯ ವಾರ್ಷಿಕೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ ಸಿಂದಗಿ: ಅಂಜುಮನ್ ಸಂಸ್ಥೆಯ ಸುಸಜ್ಜಿತ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ೨೫ಲಕ್ಷ ರೂ. ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಅಂಜುಮನ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ನ್ಯೂ ಎರಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೧೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ಸಾಕ್ಷಿಯಾದ ಸಿಂದಗಿ ಪಟ್ಟಣ ಶಿಕ್ಷಣದ ಕಾಸಿ ಎಂದೇ ಹೆಸರು ವಾಸಿಯಾಗಿದೆ. ಪಟ್ಟಣದಲ್ಲಿ ಶಿಕ್ಷಣ ಕ್ರಾಂತಿ ಸಾರಿದ ಕೀರ್ತಿ ದಿ.ಎಂ.ಸಿ.ಮನಗೂಳಿ ಅವರಿಗೆ ಸಲ್ಲುತ್ತದೆ. ತಂದೆಯವರ ಆಶಯದಂತೆ ನಾನು ಕೂಡಾ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ಹೊಂದಿದೆ. ಯುವ ಪೀಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಇಲ್ಲದ ಜೀವನ ಕಗ್ಗತ್ತಲು ಇದ್ದಂತೆ. ಒಮ್ಮೆ ಕಳೆದುಕೊಂಡ ವಿದ್ಯಾರ್ಥಿ ಜೀವನ ಕೋಟಿ ಕೊಟ್ಟರು ಬಾರದು. ತಂದೆ-ತಾಯಿಗಳು ಮಗ ಉತ್ತಮ ವ್ಯಾಸಂಗ ಮಾಡಿ ಉನ್ನತ ಹುದ್ದೆಯನ್ನು…

Read More

ಯಡ್ರಾಮಿ-ಜೇವರ್ಗಿ ಅವಳಿ ತಾಲೂಕಿನ ಸಮಾವೇಶದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಯಡ್ರಾಮಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೀಕ್ಷ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಸಭೆ ಕರೆದು ಮಾಡುತ್ತೇವೆ ಎಂಬ ಆಶ್ವಾಸನೆ ನೀಡುತ್ತಿದ್ದಾರೆ ಹೊರತು ಸ್ಪಷ್ಟನೆ ನೀಡಿಲ್ಲ. ಅಧಿವೇಶನ ಮುಗಿಯುವುದರ ಒಳಗಾಗಿ ಒಂದು ಸ್ಪಷ್ಟತೆಗೆ ಬರಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಮೀಸಲಾತಿ ಚಳುವಳಿ ಪ್ರಾರಂಭ ಮಾಡಲಾಗುವದು ಎಂದು ಕೂಡಲಸಂಗಮ ಪಂಚಮಸಾಲಿ ಮಹಾಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಯಡ್ರಾಮಿ ತಾಲೂಕಿನ ಕುಳಗೇರಿಯಲ್ಲಿ ರವಿವಾರದಂದು ರಾಷ್ಟ್ರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಮೂರ್ತಿ ಅನಾವರಣ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೋತ್ತಾಯಿಸಿ ಯಡ್ರಾಮಿ ಹಾಗೂ ಜೇವರ್ಗಿ ಅವಳಿ ತಾಲೂಕಿನ ಪ್ರಥಮ ಸಮಾವೇಶ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸದ್ಯದಲ್ಲೆ ಲೋಕಸಭಾ ಚುನಾವಣೆ ನಡೆಯಲಿದ್ದು, ರಾಜ್ಯ ಸರ್ಕಾರ ಮೀಸಲಾತಿ ಬಗ್ಗೆ ಆದಷ್ಟು ಬೇಗ ನಿರ್ಣಯ ಕೈಗೊಂಡು ಜಾರಿಗೊಳಿಸಬೇಕು. ವಿಳಂಬವಾದಲ್ಲಿ ಕನಿಷ್ಟಪಕ್ಷ ಓಬಿಸಿ ಮೀಸಲಾತಿ ಒದಗಿಸಿಕೊಡಲು ಮುಂದಾಗಬೇಕು ಎಂದರು.ಬ್ರಿಟಿಷ್ ಅಧಿಕಾರಿಗಳ…

Read More

ಕಲಕೇರಿ: ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕ ಪಂಚಾಯತ ತಾಳಿಕೋಟಿ ಅವರ ನಿರ್ದೇಶನದೊಂದಿಗೆ ಕಲಕೇರಿ ಗ್ರಾಮ ಪಂಚಾಯತ ನೇತೃತ್ವದಲ್ಲಿ ಗ್ರಾಮದ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಯೊಂದಿಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ರಥ ಹುಣಶ್ಯಾಳ ಮಾರ್ಗವಾಗಿ ಕಲಕೇರಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಮಾಲಾರ್ಪಣೆ ಮಾಡಿ ಅದ್ದೂರಿಯಿಂದ ಸ್ವಾಗತಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ತಾಳಿಕೋಟಿ ತಹಶೀಲ್ದಾರ ಕೀರ್ತಿ ಚಾಲಕ ಅವರ ನೇತೃತ್ವದಲ್ಲಿ ಪುಷ್ಪಮಾಲೆಯನ್ನು ಹಾಕುವ ಮೂಲಕ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ವೇಷಭೂಷಣಗಳೊಂದಿಗೆ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ದಿ.ತಂಗಮ್ಮ ದೇಸಾಯಿ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯುದ್ದಕ್ಕೂ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂಬ ಕೂಗು ಕೇಳಿಬಂದಿತು.ಗುರುಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕ್ರಮದ ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ…

Read More

ಬಸವನಬಾಗೇವಾಡಿ: ಪಟ್ಟಣದ ವಕೀಲ ಮಲ್ಲಿಕಾರ್ಜುನ ದೇವರಮನಿ ಅವರನ್ನು ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಟಬಾಳ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಛತ್ರಪತಿ ಶಿವಾಜಿ ಮಹಾರಾಜರ ನಡೆಸಿದ್ದ ಉತ್ತಮ ಆಡಳಿತ ಮತ್ತು ಅವರ ಶೌರ್ಯ ನಮಗೆ ಸದಾ ಸ್ಫೂರ್ತಿ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯ ಸಂಘಟನೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ ಶಿವನೇರಿ ಎಂಬಲ್ಲಿ 1630ನೆ ಫೆಬ್ರವರಿ 19 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಅಣ್ಣ ಸಾಂಬಾಜಿ ಅವರಿಂದ ಪಡೆದು ದಾದಾಜಿ ಕೊಂಡದೇವ ಅವರಿಂದ ಸಂಪೂರ್ಣ ಯುದ್ಧ ಕೌಶಲ್ಯ ಕಲಿತರು. 12ನೆಯ ವಯಸ್ಸಿನಲ್ಲಿ ಕತ್ತಿವರಸೆ,ಕುದುರೆ ಸವಾರಿಯಲ್ಲಿ ಪಳಗಿದ್ದರು. 1674ರಲ್ಲಿ ಮರಾಠಾ ಸಾಮ್ರಾಜ್ಯ ಸ್ಥಾಪಿಸಿ 1680ರವರೆಗೆ ಶೌರ್ಯದಿಂದ ರಾಜ್ಯವನ್ನು ಆಳಿದವರು ಶಿವಾಜಿ ಮಹಾರಾಜರು. ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗದೆ ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ತಮ್ಮ ಆಡಳಿತ ಅವದಿಯಲ್ಲಿ ಹಿಂದೂ ಮುಸ್ಲಿಂ ಅನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು .ಎಲ್ಲ…

Read More

ತಿಕೋಟಾ: ಮಕ್ಕಳಲ್ಲಿ‌ ಅಡಗಿರುವ ಪ್ರತಿಭೆ ಹೊರಹಾಕಲು ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹೇಳಿದರು.ತಾಲ್ಲೂಕಿನ ಬಾಬಾನಗರ ಗ್ರಾಮ‌ದ ಸರ್ಕಾರಿ‌ ಗಂಡು ಮಕ್ಕಳ‌ ಶಾಲೆಯಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಗ್ರಾಮ ಪಂಚಾಯತ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಗ್ರಾಮಿಣ ಭಾಗದ ಸರಕಾರಿ ಶಾಲೆಯ ಮಕ್ಕಳಿಗೆ ಈ ವೇದಿಕೆ ವರದಾನವಾಗಲಿ, ಆ ಮೂಲಕ ಮಕ್ಕಳು ಸೂಪ್ತ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಮಕ್ಕಳಲ್ಲಿ ಕ್ರೀಯಾಶೀಲ ಮನೋಭಾವನೆಯನ್ನು ಬೆಳೆಸಿ ಸಾಹಿತ್ಯಾಭಿರುಚಿ ಹೆಚ್ಚಿಸಿ ಮಕ್ಕಳಲ್ಲಿ ಅಡಗಿರುವ ಕಥೆ, ನಾಟಕ, ಕವನ, ಪತ್ರಿಕಾ ವರದಿಗಾರ ಹೀಗೆ ಹಲವಾರು ಸಾಹಿತ್ಯಾಭಿರುಚಿಯನ್ನು ಬೆಳೆಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ…

Read More