ಬಸವನಬಾಗೇವಾಡಿ: ಪಟ್ಟಣದ ಅಗಸಿ ಮೇಲಗಡೆ ಬಸವೇಶ್ವರ-ಮೂಲನಂದೀಶ್ವರ ಭಾವಚಿತ್ರ(ಪೋಟೋ)ವನ್ನು ಶನಿವಾರ ದುರಸ್ತಿ ಮಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಗಸಿ ಮೇಲಗಡೆ ಪುನರ್ ಅಳವಡಿಸಲಾಯಿತು.
ಮೂಲನಂದೀಶ್ವರ-ಬಸವೇಶ್ವರ ಭಾವಚಿತ್ರವು ಅಗಸಿ ಒಳಗಡೆ ಇರುವ ಅಂಗಡಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಹಾನಿಯಾಗಿತ್ತು. ಭಾವಚಿತ್ರದ ಗ್ಲಾಸ್ ಒಡೆದುಹೋಗಿ ೨-೩ ದಿನವಾಗಿದ್ದರೂ ಹಾನಿ ಮಾಡಿದವರಾಗಲಿ ಇಲ್ಲವೇ ಅಂಗಡಿಯ ಮಾಲೀಕರಾಗಲಿ ಇದನ್ನು ಸರಿಪಡಿಸಿದೇ ಬೇಜವಾಬ್ದಾರಿ ವಹಿಸಿದ್ದನ್ನು ಹಾಗೂ ಭಾವಚಿತ್ರಕ್ಕೆ ಅಪಮಾನ ಮಾಡಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಅವರು ಶುಕ್ರವಾರ ಖಂಡಿಸಿ ಎರಡು ದಿನಗಳಲ್ಲಿ ಈ ಭಾವಚಿತ್ರದ ಗ್ಲಾಸ್ ಹಾಕಿ ಅಗಸಿ ಮೇಲಗಡೆ ಭಾವಚಿತ್ರ ಅಳವಡಿಸದೇ ಹೋದರೆ ಕರವೇಯಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇವರ ಪ್ರತಿಭಟನೆ ಫಲವಾಗಿ ಇಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಟ್ಟಣದ ಹಿರಿಯರು, ಮುಖಂಡರು ಸೇರಿ ಭಾವಚಿತ್ರ(ಪೋಟೋ)ದ ಗ್ಲಾಸ್ ಹಾಕಿಸಿ ದುರಸ್ತಿಗೊಳಿಸಿ ಮತ್ತೆ ಅದೇ ಜಾಗದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ಸಾಂಸ್ಕ್ರತಿಕ ನಾಯಕ ವಿಶ್ವಗುರು ಬಸವೇಶ್ವರ ಭಾವಚಿತ್ರವನ್ನು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ಅಂಗಡಿ-ಮುಂಗಟ್ಟುಗಳಲ್ಲಿ, ಮನೆಗಳಲ್ಲಿ ಅಳವಡಿಸಿ ಪೂಜೆ ಸಲ್ಲಿಸುವಂತಾಗಬೇಕು. ಬಸವನಾಡಿಗೆ ಅನ್ಯರಾಜ್ಯಗಳಿಂದ ವ್ಯಾಪಾರಕ್ಕಾಗಿ ಬಂದಿರುವ ಜನರು ಸಹ ಬಸವೇಶ್ವರ ಭಾವಚಿತ್ರವನ್ನು ತಮ್ಮ ಅಂಗಡಿಗಳಲ್ಲಿ ಇಟ್ಟು ಪೂಜೆ ಸಲ್ಲಿಸುವಂತಾಗಬೇಕೆಂದರು.
ಈ ಸಂದರ್ಭದಲ್ಲಿ ಶಿವಾನಂದ ಈರಕಾರ ಮುತ್ಯಾ, ಮುಖಂಡರಾದ ಬಸವರಾಜ ಹಾರಿವಾಳ, ಭರತು ಅಗರವಾಲ, ಬಸವರಾಜ ಗೊಳಸಂಗಿ, ಎಂ.ಜಿ.ಆದಿಗೊಂಡ, ಶಂಕ್ರೆಪ್ಪ ಹಾರಿವಾಳ, ಸಿದ್ದಲಿಂಗ ಹಾರಿವಾಳ, ಚೇತನ ಕಿಣಗಿ, ಗುರಪ್ಪ ಮಸಬಿನಾಳ, ಬಸವರಾಜ ಗಚ್ಚಿನವರ, ಮಲ್ಲು ಬಾಗೇವಾಡಿ, ಶಿವಾನಂದ ತೋಳನೂರ, ವಿಜಯ ಮದ್ರಾಸ, ಗುರು ಚಟ್ಟೇರ, ಮುತ್ತು ಕಿಣಗಿ, ಬಸವರಾಜ ಹೂಗಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

