ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ ಅಲೆ ಇದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಪ್ರಕಾಶ ಅಕ್ಕಲಕೋಟ ವಿಶ್ವಾಸ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಅವರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ನಗರದ ಡೋಹರ ಗಲ್ಲಿ ಹಾಗೂ ಅಗಸರ ಗಲ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿ ಮನೆಮನೆಗೆ ತೆರಳಿ ಕರಪತ್ರ ಹಂಚಿ ಬಿಜೆಪಿ ಪರ ಮತಯಾಚಿಸಿದರು. ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯುತ್ಸಾಹದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಕಳೆದ ಅವಧಿಗಿಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಕಳೆದ ಹತ್ತು ವರ್ಷಗಳ ಮೋದಿಯವರ ಆಡಳಿತದಲ್ಲಿ ಇಡಿ ವಿಶ್ವವೇ ತಿರುಗಿ ನೋಡುವಂತೆ ದೇಶದಲ್ಲಾಗಿರುವ ಬದಲಾವಣೆ, ಅಭಿವೃದ್ಧಿ ಗಮನಿಸಿರುವ ಜನ ಮೋದಿ ಆಡಳಿತ ಮೆಚ್ಚಿಕೊಂಡು ಈ ಬಾರಿಯೂ ಬಿಜೆಪಿ ಬೆಂಬಲಿಸಲಿದ್ದು, ಗುರಿಯಂತೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದರು.
ಈ ವೇಳೆ ಪಾಲಿಕೆ ಸದಸ್ಯ ರಾಹುಲ್ ಜಾಧವ, ಮುಖಂಡರಾದ ಸಂತೋಷ ಬಾಗಲಕೋಟ, ಚಂದ್ರಕಾಂತ್ ಪೋಳ, ಶಂಕರ ಶೇರಖಾನೆ, ಗುರುರಾಜ ಇಂಗಳೆ, ಸುನಿಲ್ ಪೋಳ,ಜೀವನ ಹಿಪ್ಪರಗಿ, ಶೇಖರ ಬಾಗಲಕೋಟ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

