Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಮೇ.೦೫ ರಿಂದ ೧೨ರವರೆಗೆ ಶ್ರೀ ಜಗದ್ಗುರು ದಾರುಕಾಚಾರ್ಯ ಜಾತ್ರಾ ಮಹೋತ್ಸವ, ಬಸವ ಮಹಾಪುರಾಣ ಹಾಗೂ ಲಿಂ.ಪೂಜ್ಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ೧೧೦ನೆಯ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಸಂಚಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೇ ೦೫ರಂದು ಜರುಗಲಿರುವ ಕನ್ನೊಳ್ಳಿಯ ಶ್ರೀ ಸಿದ್ದಲಿಂಗ ಜ್ಞಾನಜ್ಯೋತಿ ವಿದ್ಯಾಪ್ರಸಾರ ಸಂಘದ ಅಡಿಯಲ್ಲಿ ನೂತನವಾಗಿ ಪ್ರಾರಂಭವಾಗುವ ಮಾತೃಶ್ರೀ ಬಸಲಿಂಗಮ್ಮ ಬಾಳಪ್ಪ ಭೂಸನೂರ ಕಲಾ, ವಾಣಿಜ್ಯ ಪಪೂ ಕಾಲೇಜಿನ ಉದ್ಘಾಟನಾ ಸಮಾರಂಭದ ಪಾವನ ಸಾನಿಧ್ಯವನ್ನು ಶ್ರೀಶೈಲ ಪೀಠದ ಶ್ರೀಶ್ರೀಶ್ರೀ ೧೦೦೮ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳ ಅವರು ವಹಿಸಿಲಿದ್ದಾರೆ. ಸಮ್ಮುಖವನ್ನು ಬಂಥನಾಳ ವೃಷಭಲಿಂಗ ಮಹಾಸ್ವಾಮಿಗಳು, ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸುವರು. ಉಪದೇಶಾಮೃತವನ್ನು ಕೊಣ್ಣೂರು ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಗುಣದಾಳ ವಿವೇಕಾನಂದ ದೇವರು ನೀಡುವರು. ಅಧ್ಯಕ್ಷತೆಯನ್ನು ಶಾಸಕ ಅಶೋಕ ಮನಗೂಳಿ ವಹಿಸಿಕೊಳ್ಳಲಿದ್ದಾರೆ. ಉದ್ಘಾಟನೆಯನ್ನು ಮಾಜಿ ಶಾಸಕ ರಮೇಶ ಭೂಸನೂರ ನೇರವೇರಿಸುವರು. ಮುಖ್ಯ ಅತಿಥಿಗಳಾಗಿ…
ಸಿಂದಗಿ: ಬಡತನ ನಿರ್ಮೂಲನೆ ನುಡಿ ಕಾಂಗ್ರೆಸ್ ಪಕ್ಷದ್ದಾದರೇ ಬಡವರನ್ನೇ ನಿರ್ಮೂಲನೆ ಮಾಡುವುದು ಬಿಜೆಪಿಯ ಗುರಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.ಪಟ್ಟಣದ ೨ನೆಯ ವಾರ್ಡಿನಲ್ಲಿ ಕಾಂಗ್ರೇಸ್ ಮುಖಂಡ ರಾಜು ಕೂಚಬಾಳ ಹಮ್ಮಿಕೊಂಡ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಪಚುನಾವಣೆಯ ಸಂದರ್ಭದಲ್ಲಿ ನಾನು ಈ ಕಾಲೋನಿಗೆ ನಿವಾಸಿಗಳ ಕಷ್ಟಗಳನ್ನು ನಾನು ಆಲಿಸಿ ಹೋಗಿದ್ದೆ. ನಮ್ಮ ಪಕ್ಷ ೫ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಪ್ರಸ್ತುತ ವಾಸವಿರುವ ೮ನೂರು ಕುಟುಂಬಗಳಿಗೂ ಸುಸಜ್ಜಿತ ಮನೆ ನಿರ್ಮಿಸಿಕೊಡುವುದರಲ್ಲಿ ಶ್ರಮವಹಿಸುವೆ.ಈ ವೇಳೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಈ ವೇಳೆ ರಾಜು ಕೂಚಬಾಳ, ಕೆಪಿಸಿಸಿ ಸಂಯೋಜಕಿ ರುಕ್ಷನಾ ಉಸ್ತಾದ, ರಮೇಶ ಗುಬ್ಬೇವಾಡ, ಹಣಮಂತ ಸುಣಗಾರ, ರಾಜಶೇಖರ ಚೌರ, ಶರಣಪ್ಪ ಸುಲ್ಪಿ, ಶರಣಗೌಡ ಪಾಟೀಲ, ಗೋಲ್ಲಾಳ ಬಂಕಲಗಿ, ಅಂಬಿಕಾ ಪಾಟೀಲ, ಭಾರತಿ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇಂಡಿ: ವಿಜಯಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಸರ್ವಸಮುದಾಯದ ಮೇಲೆ ಅಪಾರ ಪ್ರೀತಿ,ಕಾಳಜಿ ಹೊಂದಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ದಿಯ ಕನಸು ಹೊತ್ತಿರುವ ಅವರಿಗೆ ಜಿಲ್ಲೆಯ ಎಲ್ಲ ಸಮುದಾಯದವರು ಬೆಂಬಲ ನೀಡುವುದರ ಮೂಲಕ ಅವರು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗುತ್ತಾರೆ.ತಾಲೂಕಿನಲ್ಲಿ ಮುಸ್ಲೀಮ ಸಮುದಾಯದ ಹಲವು ಜನರಿಗೆ ಚಿರಪರಿಚಿತರಾಗಿರುವ ಅವರಿಗೆ ಮುಸ್ಲೀಮ ಸಮುದಾಯದ ಬಹುತೇಕ ಮತಗಳು ಲಭಿಸಲಿವೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೊರ್ಚಾ ತಾಲೂಕು ಉಪಾಧ್ಯಕ್ಷ ಸಿಕಂದರ ಬೊರಾಮಣಿ ಹೇಳಿದರು.ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯಿಂದ ಯಾರಿಗೂ ಅನ್ಯಾಯವಾಗಿಲ್ಲ. ಜಿಲ್ಲೆಯಲ್ಲಿ ಸರ್ವಸಮುದಾಯದವರು ಶಾಂತಿಯುತವಾಗಿ,ಅನೋನ್ಯತೆಯಿಂದ ಇರಬೇಕಾದರೆ ಅದಕ್ಕೆ ಕಾರಣ ರಮೇಶ ಜಿಗಜಿಣಗಿ ಅವರು ಹೇಳಿದರು.ಕಾಂಗ್ರೆಸ್ ಪಕ್ಷ ಮುಸ್ಲೀಮ ಸಮುದಾಯವನ್ನು ಕೇವಲ ಮತಕ್ಕಾಗಿ ಬಳಕೆ ಮಾಡಿಕೊಂಡು, ಅವರ ಅಭಿವೃದ್ದಿಗಾಗಿ ಕಿಂಚತ್ತೂ ಚಿಂತನೆ ಮಾಡಿರುವುದಿಲ್ಲ. ರಮೇಶ ಜಿಗಜಿಣಗಿ ಅವರು ಸಭ್ಯ, ಸರಳ, ಸೌಜನ್ಯಯುತ ರಾಜಕಾರಣಿಯಾಗಿದ್ದು, ರಾಜಕೀಯ ಮುತ್ಸದ್ದಿಯಾಗಿ,ಅಜಾತಶತ್ರುವಾಗಿ ಜಿಲ್ಲೆ,ನಾಡಿನಲ್ಲಿ ರಾಜಕಾರಣ ಮಾಡುತ್ತಿದ್ದು, ಅವರ ಗೆಲುವು ನಿಶ್ಚೀತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿ: ತಾಲೂಕಿನ ಹಾಲುಮತ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಲಾಗಿದೆ. ಹಂಜಗಿಯಲ್ಲಿ ನಡೆದ ಸಮಾಜದ ಸಭೆಯಲ್ಲಿ ತಾಲೂಕಿನ ಎಲ್ಲ ಹಾಲುಮತ ಸಮಾಜದವರು ಒಗ್ಗಟ್ಟು ಪ್ರದರ್ಶಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಬಲ ಪಡಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರ ಮೂಲಕ ಬೆಂಬಲ ಸೂಚಿಸಲು ತೀರ್ಮಾನಿಸಲಾಗಿದೆ ಎಂದು ಹಾಲುಮತ ಸಮಾಜದ ತಾಲೂಕು ಮುಖಂಡ ಜಟ್ಟೆಪ್ಪ ರವಳಿ ಹೇಳಿದರು.ಅವರು ತಾಲೂಕಿನ ಹಂಜಗಿ ಗ್ರಾಮದಲ್ಲಿ ಹಾಲುಮತ ಸಮಾಜದ ಮುಖಂಡರ ಒಗ್ಗಟ್ಟು ಪ್ರದರ್ಶನ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.ಹಾಲುಮತ ಸಮಾಜದ ನಾಯಕ ಸಿದ್ದರಾಮಯ್ಯನವರನ್ನು ಜೆಡಿಎಸ್ ಪಕ್ಷ ಹೊರಹಾಕಿದ ಮೇಲೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ರಾಜಕೀಯವಾಗಿ ಬೆಳೆಸಿದ್ದು ಅಲ್ಲದೆ,ರಾಜ್ಯದ ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ,ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯನವರನ್ನು ಕಠಿಣವಾಗಿ ನಡೆಸಿಕೊಂಡಿದ್ದು, ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ ಅವರು, ಹಾಲುಮತ ಸಮಾಜದ ಇನ್ನೊಬ್ಬ ನಾಯಕನಾದ ಕೆ.ಎಸ್.ಈಶ್ವರಪ್ಪನವರಿಗೆ ಕಳೆದ ವಿಧಾನಸಭೆ ಚುನಾವಣೆ ಹಾಗೂ ಸಧ್ಯದ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ನೀಡದೇ…
ಇಂಡಿ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಭಾಜಪ ಕಾರ್ಯಕರ್ತರು ಶುಕ್ರವಾರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ಕೇಂದ್ರ ಸರಕಾರದ ಸಾಧನೆಗಳ ಕರಪತ್ರವನ್ನು ವಿತರಿಸಿ ಮತಯಾಚನೆ ಮಾಡಿದರು.ಈ ಸದಂದರ್ಭದಲ್ಲಿ ಭಾಜಪ ಮುಖಂಡರಾದ ಅನೀಲ ಜಮಾದಾರ ಮಾತನಾಡಿ, ಮೇ.೭ ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವ ಮೂಲಕ ಸುಭದ್ರ ದೇಶ ಕಟ್ಟುವಲ್ಲಿ ನಾವು-ನೀವೆಲ್ಲ ಕೈ ಜೋಡಿಸೋಣ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಅವರಿಗೆ ಮತದಾನ ಮಾಡೋಣ ಎಂದರು.ಸ್ಥಳೀಯ ಕಾರ್ಯಕರ್ತರಾದ ಅಶೋಕ ಬಳಬಟ್ಟಿ ಮಾಧವರಾವ ಪವಾರ ಮಾತನಾಡಿ, ಬಿಜೆಪಿ ಸರಕಾರ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿಗೆ ಯಾವುದೇ ಪೊಳ್ಳು ಗ್ಯಾರೆಂಟಿಗಳಿಗೆ ಕಿವಿಗೊಡದೆ, ದೇಶದ ಉಳಿವಿಗಾಗಿ ನಾವೆಲ್ಲರೂ ಕಡ್ಡಾಯವಾಗಿ ಬಿಜೆಪಿಗೆ ಮತದಾನ ಮಾಡೋಣ ಎಂದರು.ಭೀಮಾಶಂಕರ ಆಳೂರ, ಶ್ರೀಶೈಲ ಸೀತಿಮನಿ, ರಾಜಕುಮಾರ ಜಾಧವ, ಪ್ರಭು ಜಾಧವ, ಪ್ರಭಾಕರ ವಾಲೀಕಾರ, ಗೋಪಾಲ ಬೆನಕನಳ್ಳಿ, ನಿಂಗಪ್ಪ ಹೂಗಾರ, ರಸೂಲ್‌ಪಟೇಲ್ ಮಸಳಿ ಸೇರಿದಂತೆ ಇನ್ನಿತರರು ಇದ್ದರು.
ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಬೂತ್ ಗಳಲ್ಲಿ ಬಿಜೆಪಿ ಪರ ಉತ್ತಮ ವಾತಾವರಣ ಸೃಷ್ಟಿಯಾಗಿದ್ದು, ಬಿಜೆಪಿ ಪರ ಅಲೆ ಇದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಪ್ರಕಾಶ ಅಕ್ಕಲಕೋಟ ವಿಶ್ವಾಸ ವ್ಯಕ್ತಪಡಿಸಿದರು.ಲೋಕಸಭಾ ಚುನಾವಣೆ ಹಿನ್ನೆಲೆ ಅವರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ನಗರದ ಡೋಹರ ಗಲ್ಲಿ ಹಾಗೂ ಅಗಸರ ಗಲ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರತಿ ಮನೆಮನೆಗೆ ತೆರಳಿ ಕರಪತ್ರ ಹಂಚಿ ಬಿಜೆಪಿ ಪರ ಮತಯಾಚಿಸಿದರು. ಜಿಲ್ಲೆಯ ಎಲ್ಲಾ ಬೂತ್ ಗಳಲ್ಲಿ ಬಿಜೆಪಿ ಕಾರ್ಯಕರ್ತರು ಅತ್ಯುತ್ಸಾಹದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ನಮ್ಮ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಕಳೆದ ಅವಧಿಗಿಂತ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಕಳೆದ ಹತ್ತು ವರ್ಷಗಳ ಮೋದಿಯವರ ಆಡಳಿತದಲ್ಲಿ ಇಡಿ ವಿಶ್ವವೇ ತಿರುಗಿ ನೋಡುವಂತೆ ದೇಶದಲ್ಲಾಗಿರುವ ಬದಲಾವಣೆ, ಅಭಿವೃದ್ಧಿ ಗಮನಿಸಿರುವ ಜನ ಮೋದಿ ಆಡಳಿತ ಮೆಚ್ಚಿಕೊಂಡು ಈ ಬಾರಿಯೂ ಬಿಜೆಪಿ ಬೆಂಬಲಿಸಲಿದ್ದು, ಗುರಿಯಂತೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇಮ್ಮಡಿಗೊಳಿಸಿದೆ ಎಂದರು.ಈ…
ದೇಶದ ಸುರಕ್ಷತೆ ಮೋದಿಯಿಂದ ಮಾತ್ರ ಸಾಧ್ಯ :ಯತ್ನಾಳ ವಿಜಯಪುರ: ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.4 ರ ಭೂತನಾಳ ತಾಂಡಾದಲ್ಲಿ ಮನೆ ಮನೆಗೆ ತೆರಳಿ ಯುವ ನಾಯಕರಾದ ರಾಮನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಮತಯಾಚಿಸಿದರು.ನಂತರ ದುರ್ಗಾದೇವಿ ದೇವಸ್ಥಾನ ಹತ್ತಿರ ನಡೆದ ಸಭೆಯಲ್ಲಿ ಭಾಗವಹಿಸಿ, ಈ ಚುನಾವಣೆ ಕೇವಲ ಅಧಿಕಾರಕ್ಕಾಗಿ ಅಲ್ಲ, ಬದಲಾಗಿ ದೇಶದ ಸುರಕ್ಷತೆ, ಸನಾತನ ಧರ್ಮ ಉಳಿಸಲು, ಅಭಿವೃದ್ಧಿಗಾಗಿ ನಡೆಯಲಿದೆ. ವಿಶ್ವ ನಾಯಕರಾದ ಪ್ರಧಾನಿ ಮೋದಿಯವರಿಂದ ಮಾತ್ರ ಜಗದ್ಗುರು ಭಾರತ ನಿರ್ಮಾಣ ಸಾಧ್ಯ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ರಮೇಶ ಜಿಗಜಿಣಗಿ ಅವರನ್ನು ಗೆಲ್ಲಿಸಲು ನಾವೆಲ್ಲರೂ ಕಂಕಣಬದ್ದರಾಗೋಣ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಕೂಡ ಅವಶ್ಯಕ ಎಂದು ಹೇಳಿದರು.ಮುಖಂಡರಾದ ವಿವೇಕಾನಂದ ಡಬ್ಬಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಎಸ್.ಸಿ.ಮೋರ್ಚಾ ಅಧ್ಯಕ್ಷ ಪ್ರಕಾಶ ಚವ್ಹಾಣ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.
ಶ್ರೀ ಸಿದ್ಧೇಶ್ವರ ಮೆಡಿಕಲ್ ೨೪/೭ ಎರಡು ವರ್ಷ ಪೂರೈಸಿದ ಸಾರ್ಥಕ ಸಂಭ್ರಮ ವಿಜಯಪುರ: ವ್ಯಾಪಾರದಲ್ಲಿ ನೈತಿಕತೆ ಇದ್ದಲ್ಲಿ ಗ್ರಾಹಕರ ಹೃದಯವನ್ನು ಗೆಲ್ಲಬಹುದು ಎನ್ನುವುದಕ್ಕೆ ಈ ಎರಡು ವರ್ಷಗಳಲ್ಲಿ ನಗರದ ಶ್ರೀ ಸಿದ್ಧೇಶ್ವರ ಮೆಡಿಕಲ್ ೨೪/೭ ನ ಕಾರ್ಯವೈಖರಿ ಒಂದು ಅತ್ಯುತ್ತಮವಾದ ಉದಾಹರಣೆಯಾಗಿದೆ.ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳರ ಅಪೇಕ್ಷೆಯಂತೆ ಸ್ಥಾಪನೆಯಾದ ಈ ಮಳಿಗೆ ಇಂದು ಜನಪರ ಮೆಡಿಕಲ್ ಆಗಿ ಗುರುತಿಸಿಕೊಂಡಿದ್ದು ಇಡೀ ತಂಡದ ದಕ್ಷ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರ ನ ನಿರ್ದೇಶಕ ರಾಮನಗೌಡ ಬ. ಪಾಟೀಲ್ ಯತ್ನಾಳ ಅವರು ಹೇಳಿದರು.ನಗರದ ಸಿದ್ಧೇಶ್ವರ ದೇವಸ್ಥಾನದ ಹತ್ತಿರ ಇರುವ ಶ್ರೀ ಸಿದ್ಧೇಶ್ವರ ಮೆಡಿಕಲ್ ೨೪/೭ ಪ್ರಾರಂಭಗೊಂಡು ಎರಡು ವರ್ಷಗಳನ್ನು ಪೂರೈಸಿದ್ದರ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ಸಾರ್ಥಕ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು; ಯಾವುದೇ ಕೆಲಸವಾಗಲಿ ಅದನ್ನು ನಿಷ್ಠೆಯಿಂದ ಮಾಡಬೇಕು. ವ್ಯಾಪಾರದಲ್ಲಿ ಸಹ ಪಾರದರ್ಶಕತೆಯ ಜೊತೆಗೆ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಶೀಘ್ರದಲ್ಲಿ ಗ್ರಾಹಕರ…
ಬಸವನಬಾಗೇವಾಡಿ: ಪಟ್ಟಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆಯನ್ನು ಶುಕ್ರವಾರ ಕೈಗೊಂಡರು. ಪ್ರತಿಯೊಂದು ಮನೆಗೆ ತೆರಳಿ ನೀರು ಸಂಗ್ರಹ ಮಾಡುವ ತಾಣಗಳನ್ನು ವೀಕ್ಷಿಸಿದರು.ಲಾರ್ವಾ ಇರುವ ತಾಣಗಳನ್ನು ಖಾಲಿ ಮಾಡಿಸಿ ಜನರಿಗೆ ನೀರು ಸಂಗ್ರಹ ಮಾಡುವ ತಾಣಗಳನ್ನು ಆಗಾಗ ಸ್ವಚ್ಛ ಗೊಳಿಸುವಂತೆ ಹೇಳುವ ಮೂಲಕ ಜನರು ತಮ್ಮ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕು. ಲಾರ್ವಾ ಬಿಟ್ಟರೆ ಡೆಂಗ್ಯೂದಂತಹ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಜನರು ಆರೋಗ್ಯ ಸಂರಕ್ಷಣೆಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ ಹದಿಮೂರ ಹೇಳಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಬಾಗೇವಾಡಿ, ಸೋಮೇಶ ಮಾನಶೆಟ್ಟಿ, ಶಿವಾನಂದ ಕಾಖಂಡಕಿ, ಮಲೇರಿಯಾ ತಂತ್ರಜ್ಞ ಮೇಲ್ವಿಚಾರಕ ಸಂಜು ಸಜ್ಜನ ಇದ್ದರು.
ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿ. ಬಿ ಗ್ರಾಮದ ಡಾ. ಬಸವರಾಜ ಹಡಪದ ಅವರಿಗೆ ದೇವರಹಿಪ್ಪರಗಿಯ ಬಸವ ಶರಣ ಸಂಗಮ ಸೇವಾ ಸಮಿತಿ ಕೊಡಮಾಡುವ ಬಸವಶ್ರೀ ಪ್ರಶಸ್ತಿ ಲಭಿಸಿದೆ. ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಬಸವಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.ಪ್ರಶಸ್ತಿ ಪ್ರದಾನ ಸಮಾರಂಭವು ಮೇ.10 ಬಸವ ಜಯಂತಿ ದಿನದಂದು ಜರುಗಲಿದೆ ಎಂದು ಪ್ರಕಟನೆ ತಿಳಿಸಿದೆ.
