ಸಿಂದಗಿ: ಬಡತನ ನಿರ್ಮೂಲನೆ ನುಡಿ ಕಾಂಗ್ರೆಸ್ ಪಕ್ಷದ್ದಾದರೇ ಬಡವರನ್ನೇ ನಿರ್ಮೂಲನೆ ಮಾಡುವುದು ಬಿಜೆಪಿಯ ಗುರಿಯಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದರು.
ಪಟ್ಟಣದ ೨ನೆಯ ವಾರ್ಡಿನಲ್ಲಿ ಕಾಂಗ್ರೇಸ್ ಮುಖಂಡ ರಾಜು ಕೂಚಬಾಳ ಹಮ್ಮಿಕೊಂಡ ಬಹಿರಂಗ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಪಚುನಾವಣೆಯ ಸಂದರ್ಭದಲ್ಲಿ ನಾನು ಈ ಕಾಲೋನಿಗೆ ನಿವಾಸಿಗಳ ಕಷ್ಟಗಳನ್ನು ನಾನು ಆಲಿಸಿ ಹೋಗಿದ್ದೆ. ನಮ್ಮ ಪಕ್ಷ ೫ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದೆ. ಪ್ರಸ್ತುತ ವಾಸವಿರುವ ೮ನೂರು ಕುಟುಂಬಗಳಿಗೂ ಸುಸಜ್ಜಿತ ಮನೆ ನಿರ್ಮಿಸಿಕೊಡುವುದರಲ್ಲಿ ಶ್ರಮವಹಿಸುವೆ.
ಈ ವೇಳೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಈ ವೇಳೆ ರಾಜು ಕೂಚಬಾಳ, ಕೆಪಿಸಿಸಿ ಸಂಯೋಜಕಿ ರುಕ್ಷನಾ ಉಸ್ತಾದ, ರಮೇಶ ಗುಬ್ಬೇವಾಡ, ಹಣಮಂತ ಸುಣಗಾರ, ರಾಜಶೇಖರ ಚೌರ, ಶರಣಪ್ಪ ಸುಲ್ಪಿ, ಶರಣಗೌಡ ಪಾಟೀಲ, ಗೋಲ್ಲಾಳ ಬಂಕಲಗಿ, ಅಂಬಿಕಾ ಪಾಟೀಲ, ಭಾರತಿ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

