ಇಂಡಿ: ತಾಲೂಕಿನ ಹಾಲುಮತ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ತೀರ್ಮಾನಿಸಲಾಗಿದೆ. ಹಂಜಗಿಯಲ್ಲಿ ನಡೆದ ಸಮಾಜದ ಸಭೆಯಲ್ಲಿ ತಾಲೂಕಿನ ಎಲ್ಲ ಹಾಲುಮತ ಸಮಾಜದವರು ಒಗ್ಗಟ್ಟು ಪ್ರದರ್ಶಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಬಲ ಪಡಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರ ಮೂಲಕ ಬೆಂಬಲ ಸೂಚಿಸಲು ತೀರ್ಮಾನಿಸಲಾಗಿದೆ ಎಂದು ಹಾಲುಮತ ಸಮಾಜದ ತಾಲೂಕು ಮುಖಂಡ ಜಟ್ಟೆಪ್ಪ ರವಳಿ ಹೇಳಿದರು.
ಅವರು ತಾಲೂಕಿನ ಹಂಜಗಿ ಗ್ರಾಮದಲ್ಲಿ ಹಾಲುಮತ ಸಮಾಜದ ಮುಖಂಡರ ಒಗ್ಗಟ್ಟು ಪ್ರದರ್ಶನ ನಂತರ ನಡೆದ ಸಭೆಯಲ್ಲಿ ಮಾತನಾಡಿದರು.
ಹಾಲುಮತ ಸಮಾಜದ ನಾಯಕ ಸಿದ್ದರಾಮಯ್ಯನವರನ್ನು ಜೆಡಿಎಸ್ ಪಕ್ಷ ಹೊರಹಾಕಿದ ಮೇಲೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ರಾಜಕೀಯವಾಗಿ ಬೆಳೆಸಿದ್ದು ಅಲ್ಲದೆ,ರಾಜ್ಯದ ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ,ಜೆಡಿಎಸ್ ಪಕ್ಷದಲ್ಲಿ ಇದ್ದಾಗ ಸಿದ್ದರಾಮಯ್ಯನವರನ್ನು ಕಠಿಣವಾಗಿ ನಡೆಸಿಕೊಂಡಿದ್ದು, ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ ಅವರು, ಹಾಲುಮತ ಸಮಾಜದ ಇನ್ನೊಬ್ಬ ನಾಯಕನಾದ ಕೆ.ಎಸ್.ಈಶ್ವರಪ್ಪನವರಿಗೆ ಕಳೆದ ವಿಧಾನಸಭೆ ಚುನಾವಣೆ ಹಾಗೂ ಸಧ್ಯದ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ನೀಡದೇ ಅವರನ್ನು ಅಗೌರವದಿಂದ ನಡೆದುಕೊಂಡು,ಪಕ್ಷದಿಂದ ಉಚ್ಚಾಟನೆ ಮಾಡಿದ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಈ ಬಾರಿ ಜಿಲ್ಲೆ ಸೇರಿದಂತೆ, ಇಂಡಿ ತಾಲೂಕಿನ ಎಲ್ಲ ಹಾಲುಮತ ಸಮಾಜದವರು ತೀರ್ಮಾನಿಸಿದ್ದು ಸಂತಸ ತಂದಿದೆ. ಹಾಲುಮತ ಸಮಾಜಕ್ಕೆ ರಾಜಕೀಯವಾಗಿ ಬೆಳೆಯಲು ಬಿಜೆಪಿ ಪಕ್ಷ ಬಿಡುತ್ತಿಲ್ಲ. ಹಾಲುತಮ ಸಮಾಜದ ಮುಖಂಡರನ್ನೇ ರಾಜಕೀಯವಾಗಿ ತುಳಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಪರವಾಗಿ ಮತ ಹಾಕಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಇಲಿಯಾಸ ಬೊರಾಮಣಿ, ಜಾವೀದ ಮೊಮಿನ, ಶೇಖರ ನಾಯಕ, ನೀಲಕಂಠ ರೂಗಿ, ಧರ್ಮರಾಜ ವಾಲಿಕಾರ, ಸಾಹೇಬಗೌಡ ಪಾಟೀಲ, ಸಂಜೀವ ಪೈಕಾರ, ಹಣಮಂತ ಕಂಠಿಕಾರ, ಕೆಂಚಪ್ಪ ಪೂಜಾರಿ, ಆಸೀಪ ಕಾರಬಾರಿ, ಅಬ್ಬಾಸ ಜಮಖಂಡಿ, ಪ್ರಕಾಶ ಪೊತೆ, ಮಹಾದೇವಸಾಹುಕಾರ ಮಾಳಗೆ, ಎಂ.ಆರ್.ಪಾಟೀಲ ಸೇರಿದಂತೆ ಹಾಲುಮತ, ಇಸ್ಲಾಮ ಸಮುದಾಯದ ಮುಖಂಡರು ಸಭೆಯಲ್ಲಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

