Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಭಾರತೀಯ ಶಾಸ್ತ್ರೀಯ ನೃತ್ಯ.. ಒಂದು ಅವಲೋಕನ ಆ ಒಂದು ಹಾಲ್ನಲ್ಲಿ ಕುಳಿತಿದ್ದ ಎಲ್ಲ ಮಕ್ಕಳು, ಹಿರಿಯರಾದಿಯಾಗಿ ಸಂಗೀತದ ತಾಳಕ್ಕೆ ತಕ್ಕಂತೆ ತಮ್ಮ ತಲೆಯನ್ನು ಕುಣಿಸುತ್ತಾ ಕಾಲ್ ಬೆರಳನ್ನು ನೆಲಕ್ಕೆ ಕುಟ್ಟುತ್ತಿದ್ದರು. ಇದುವೇ ನೃತ್ಯದ ಮೂಲನೃತ್ಯ ಜೀವನದ ಒಂದು ಭಾಗ, ಜೀವನವೇ ಆಗಿದೆ. ನಮ್ಮೆಲ್ಲಾ ನೋವು ನಿರಾಸೆಗಳನ್ನು ಮರೆಯಲು ಹುಮ್ಮಸ್ಸನ್ನು ಪಡೆಯಲು ಮತ್ತೆ ಜೀವನ್ಮುಖತೆಯನ್ನು ಹೊಂದಲು ನೃತ್ಯವು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಅಂತಹ ನೃತ್ಯ ವನ್ನು ಪ್ರಸಿದ್ಧಿಗೊಳಿಸಲು ತಮ್ಮ ತಮ್ಮ ಸುರಕ್ಷತಾ ವಲಯಗಳಿಂದ ಹೊರಬಂದು ಸಾಕಷ್ಟು ಕಷ್ಟನಿಷ್ಠುರಗಳ ನಡುವೆ ಭಾರತೀಯ ಶಾಸ್ತ್ರೀಯ ನೃತ್ಯವನ್ನು ಜಗತ್ತಿಗೆ ಪರಿಚಯಿಸಿದವರು.ಪಾಶ್ಚಾತ್ಯ ವೇಷ ಧರಿಸಿದ ಹೆಣ್ಣು ಮಗಳು ತಾನು ಭೇಟಿ ಕೊಡಲು ಬಯಸಿದ ಕ್ಲಬ್ ಬಾಗಿಲು ಮುಚ್ಚಿದ್ದನ್ನು ಕಂಡು ಪಕ್ಕದಲ್ಲಿರುವ ಸಭಾಂಗಣಕ್ಕೆ ಬಂದು ಕುಳಿತಳು. ಅಲ್ಲಿ ನಡೆಯುತ್ತಿದ್ದ ನೃತ್ಯವನ್ನು ಕಂಡು ಪರವಶಳಾದ ಆಕೆ ನೃತ್ಯ ಮುಗಿಯುತ್ತಿದ್ದಂತೆ ಗ್ರೀನ್ ರೂಮಿಗೆ ಹೋಗಿ ಆ ನೃತ್ಯವನ್ನು ಮಾಡುತ್ತಿದ್ದ ತಂಡದ ಮಹಾ ಗುರುವಿನ ಬಳಿ ಹೋಗಿ…
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹೈದರಾಬಾದ್: ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.ಚುನಾವಣಾ ರ್ಯಾಲಿಯಲ್ಲಿ ಮಕ್ಕಳನ್ನು ತೊಡಗಿಸಿಕೊಂಡ ಆರೋಪದ ಮೇಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅವರ ಸಂಪುಟ ಸಹೋದ್ಯೋಗಿ ಮತ್ತು ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ ಕಿಶನ್ ರೆಡ್ಡಿ, ಗೋಶಾಮಹಲ್ ಶಾಸಕ ಟಿ. ರಾಜಾ ಸಿಂಗ್, ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಮತ್ತು ಹೈದರಾಬಾದ್‌ನ ಬಿಜೆಪಿ ನಾಯಕ ಟಿ. ಯಮನ್ ಸಿಂಗ್ ವಿರುದ್ಧ ಹೈದರಾಬಾದ್ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.ಬಿಜೆಪಿ ಚುನಾವಣಾ ಪ್ರಚಾರದ ಪೋಟೋ ವೈರಲ್ ಆಗಿದೆ. ಅದರಲ್ಲಿ ಮಕ್ಕಳು ಬಿಜೆಪಿ ಫಲಕಗಳು ಮತ್ತು ಬಲೂನ್‌ಗಳನ್ನು ಹಿಡಿದಿದ್ದರು ಮತ್ತು ಸಚಿವರು ಮತ್ತು ಇತರ ಬಿಜೆಪಿ ಪದಾಧಿಕಾರಿಗಳೊಂದಿಗೆ ವೇದಿಕೆಯಲ್ಲಿ ನಿಂತುಕೊಂಡಿದ್ದಾರೆ.ಮೊಘಲ್‌ಪುರ…
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ಮಹಿಳೆಯೊಬ್ಬರ ಅಪಹರಣ ಪ್ರತ್ಯೇಕ ಪ್ರಕರಣದಲ್ಲಿ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿದೆ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್, ಜಾಮೀನು ನೀಡಲು ನಿರಾಕರಿಸಿದ್ದಾರೆ. ಅರ್ಜಿಯ ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದ್ದಾರೆ.“ರೇವಣ್ಣ ಅವರನ್ನು ಬಂಧಿಸದಂತೆ ರಕ್ಷಣೆ ನೀಡಿದರೆ ಇಂದೇ ಎಸ್ಐಟಿ ಮುಂದೆ ಹಾಜರಾಗುತ್ತಾರೆ” ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ, ಈ ಮನವಿಯನ್ನು ಪುರಸ್ಕರಿಸದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.ರೇವಣ್ಣ ಪರವಾಗಿ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್ ಹಾಗೂ ವಿಶೇಷ ತನಿಖಾ ತಂಡದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ವಾದ ಮಂಡನೆ ಮಾಡಿದರು.
ವಿಜಯಪುರ: ೨೦೨೪ರ ಚುನಾವಣೆಯ ವಿಜಯಪುರ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ರಮೇಶ ಜಿಗಜಿಣಗಿಯವರಿಗೆ ಮಾದಿಗ ಸಮಾಜದ ಬೆಂಬಲಾರ್ಥಕವಾಗಿ ಇಂದು ನಗರದ ಬಿಜೆಪಿ ಪ್ರಚಾರ ಕಚೇರಿಯಲ್ಲಿ ಮಾದಿಗ ಸಮಾಜದ ಬೆಂಬಲವನ್ನು ಸೂಚಿಸಲಾಯಿತು.ಈ ಸಮಯದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾ ನಗರ ಮಂಡಲ ಕಾರ್ಯದರ್ಶಿ ಹಾಗೂ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸದಾನಂದ ಗುನ್ನಾಪೂರ ಮಾತನಾಡಿ, ಕಾಂಗ್ರೆಸ್ ಸರಕಾರವು ತನ್ನ ಅಧಿಕಾರ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು ಬಿಟ್ಟರೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ, ಕಾಂಗ್ರೆಸ್ ಅವಧಿಯಲ್ಲಿ ಆರ್ಥಿಕ ಮಟ್ಟವು ೧೪ನೇ ಮಟ್ಟಕ್ಕೆ ಇದ್ದಿದ್ದು, ಸದ್ಯಕ್ಕೆ ಬಿಜೆಪಿ ಸರಕಾರದಲ್ಲಿ ೪ನೇ ಮಟ್ಟಕ್ಕೆ ಬಂದಿದೆ. ಕಾಂಗ್ರೆಸ್ ತನ್ನ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿ ಅಧಿಕಾರ ಶಾಹಿ ಧೋರಣೆಯನ್ನು ತೋರಿದ್ದು ಬಿಟ್ಟರೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದರು.ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಪರಶುರಾಮ ರೋಣಿಹಾಳ ಮಾತನಾಡಿ, ಬಿಜೆಪಿಯು ತನ್ನ ೧೦ ವರ್ಷಗಳ ಅಧಿಕಾರಾವಧಿಯಲ್ಲಿ ನಿರ್ಗತಿಕರಿಗೆ ಮನೆ, ಸುಸಜ್ಜಿತ ರಸ್ತೆ ಸುಧಾರಣೆ,…
ಬಾಗಲಕೋಟ: ಬಾಗಲಕೋಟೆ ಅಭಿವೃದ್ಧಿಗೆ ಈ ಬಾರಿ ಯುವಕನಾದ ನನಗೆ ಬಹುಮತದಿಂದ ಆರಿಸಿ ತರುವ ಮೂಲಕ ಅಭಿವೃದ್ಧಿಗೆ ನಾಂದಿಹಾಡಬೇಕೆಂದು ಪಕ್ಷೇತರ ಅಭ್ಯರ್ಥಿ ದತ್ತಾತ್ರೇಯ ತಾವರೆ ಹೇಳಿದರು ನಗರದಲ್ಲಿ ಹಮ್ಮಿಕೊ೦ಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ನಾನು ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲೆಯ ಜನತೆಯ ಆಶೀರ್ವಾದ ಹಾಗೂ ಬೆ೦ಬಲದೊ೦ದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನುಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮೊಟ್ಟ ಮೊದಲಿಗೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಅವರ ಭವಿಷ್ಯ ನಿರ್ಮಾಣದ ಹಿತದೃಷ್ಟಿಯಿಂದ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾದ ಕಲ್ಯಾಣ ಕರ್ನಾಟಕ ೩೭೧ ಜೆ ಮೀಸಲಾತಿ ಕಲ್ಪಿಸುವಲ್ಲಿ ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ, ರಸಗೊಬ್ಬರ, ಬಿತ್ತನೆ ಬೀಜ, ರೈತರ ದಾರಿ ಸಮಸ್ಯೆ ಸೇರಿದ೦ತೆ ಕೃಷಿ ಕಾಯಕಕ್ಕೆಅನುಕೂಲವಾಗುವ ಸಕಲ ಸೌಲಭ್ಯ ಕಲ್ಪಿಸಲು ಪ್ರಯತ್ನಮಾಡುವೆ. ಪೌರ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿಸಲು ಪ್ರಯತ್ನ ಮಾಡುತ್ತೇನೆ. ನಿರ್ಗತಿಕರಿಗೆ ವೃದ್ಧರಿಗೆ ಸರ್ಕಾರದಿಂದ ಜಿಲ್ಲೆಯಲ್ಲಿ ವೃದ್ಧಾಶ್ರಮ, ಅನಾಥಾಶ್ರಮ,…
ವಿಜಯಪುರ: ರಾಜ್ಯದಲ್ಲಿ ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೈ ಬಲಪಡಿಸಲು ಜಿಲ್ಲೆಯ ಅಹಿಂತ ವರ್ಗದ ಜನತೆ ಈ ಸಾರಿ ಜಿಲ್ಲಾ ಅದ್ಯಕ್ಷರು, ತಾಲೂಕಾ ಅಧ್ಯಕ್ಷರು ಹಾಗೂ ಅಹಿಂದ ವರ್ಗದ ಎಲ್ಲ ಸಂಘಟನೆಗಳು ಕಾರ್ಯನಿರತರಾಗಿದ್ದಾರೆ. ಅಹಿಂದ ಬಹುಸಂಖ್ಯಾತರ ವರ್ಗದವರಾದ ರಾಜು ಆಲಗೂರ್ ರವರನ್ನು ಬೆಂಬಲಿಸುವುದಾಗಿ ತೀರ್ಮಾನಿಸಲಾಗಿದೆ.ಕಳೆದ ೭೦ ವರ್ಷಗಳಿಂದ ಅಹಿಂದ ವರ್ಗವು ತುಳಿತಕ್ಕೆ ಒಳಪಡುತ್ತಿದ್ದು, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ವರ್ಗ ಬೆಂಬಲಿಸಬೇಕೆಂದು ಅಹಿಂದ ರಾಜ್ಯ ಅದ್ಯಕ್ಷರಾದ ಪ್ರಭುಲಿಂಗ ದೊಡನಿ ರವರು ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಅಹಿಂದ ವರ್ಗದ ಜನತೆಯನ್ನು ಸಂಘಟಿಸುತ್ತಿದ್ದಾರೆ. ಅಹಿಂದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಯಾಕೂಬ ಜತ್ತಿ ಎಮ್.ಸಿ. ಮುಲ್ಲಾ, ವಿಠ್ಠಲಗೌಡ ಬಿರಾದಾರ (ಗುಗ್ಗದಡ್ಡಿ), ಫಯಾಜ ಕಲಾದಗಿ, ಶ್ರೀಶೈಲ ಕೌಲಗಿ, ಪ್ರಕಾಶ ಗುಡಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಅಭ್ಯರ್ಥಿಯಾದ ರಮೇಶ ಜಿಗಜಿಣಗಿಯವರ ಪರವಾಗಿ ಇಂದು ನಗರ ಶಾಸಕರ ಚಿರಂಜೀವಿಯಾದ ರಾಮನಗೌಡ ಪಾಟೀಲ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರವನ್ನು ಶಿವಶಕ್ತಿ ನಗರ, ಪಾಣಿ ನಗರ, ಸರಸ್ವತಿ ನಗರ, ಸಾಯಿಸಮರ್ಥ ನಗರ, ರಾಜರತ್ನ ಕಾಲನಿ, ಮಿಣಿಮಾದರ ಓಣಿ, ರಜಪೂತ ಗಲ್ಲಿಯಲ್ಲಿ ಬಿರುಸಿನ ಪ್ರಚಾರ ಹಮ್ಮಿಕೊಳ್ಳಲಾಗಿದೆ.ಈ ಸಮಯದಲ್ಲಿ ರಾಮನಗೌಡ ಪಾಟೀಲ ರವರು ಮಾತನಾಡಿದ ೨೦೧೪ ಮತ್ತು ೨೦೧೯ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೇಶದ ಜನತೆ ಪೂರ್ಣ ಬಹುಮತ ನೀಡಿದ್ದು, ಬಿಜೆಪಿ ೧೦ ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ, ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ನಂತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ಅಥವಾ ಅವಧಿಯನ್ನು ವಿಸ್ತರಿಸಿಲ್ಲ. ಅದರ ಬದಲಿಗೆ ಮೋದಿ ನೇತೃತ್ವದ ಮತ್ತು ಅಮಿತ್ ಶಾ ಅವರ ಕೌಶಲ್ಯಪೂರ್ಣ ಮಾರ್ಗದರ್ಶನದ ಈ ಸರ್ಕಾರ ಪೂರ್ಣ ಬಹುಮತವನ್ನು ೩೭೦ ನೇ ವಿಧಿಯನ್ನು ತೆಗೆದುಹಾಕಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸಲು, ಕರೋನಾ ಸಾಂಕ್ರಾಮಿಕ ಸಮಯದಲ್ಲಿ…
ಚಿಮ್ಮಡ: ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆಯ ಹೊಡೆತಕ್ಕೆ ನಲುಗುತಿದ್ದ ದೇಶವನ್ನು ನರೆಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದ್ದು ಅಂಥಹ ವಿಶ್ವ ನಾಯಕನನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಿ.ಸಿ. ಗದ್ದಿಗೌಡರಿಗೆ ಮತನೀಡಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬ್ರಹತ್ ರೋಡಷೋನಲ್ಲಿ ಭಾಗವಹಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು. ರಾಮಮಂದಿರ ನಿರ್ಮಾಣಕ್ಕೆ ಪದೇ ಪದೇ ತೊಡಕು ತಂದಿಡುತಿದ್ದ ಕಾಂಗ್ರೆಸ್, ಮೋದಿ ಪ್ರಧಾನಿಯಾಗುತಿದ್ದಂತೆಯೇ ಮಂದಿರ ನಿರ್ಮಾಣದೊಂದಿಗೆ ದೇಶದಲ್ಲಿ ಅಭಿವೃದ್ದಿ ಪರ್ವವೇ ಪ್ರಾರಂಭವಾಗಿದ್ದು ಯಾವುದೇ ಜಾತಿ ಧರ್ಮ ನೋಡದೇ ಅಭಿವೃದ್ದಿಯೊಂದೇ ಗುರಿಯಾಗಿಸಿಕೊಂಡಿರುವ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಮತ ನೀಡುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.ಶಾಸಕ ಸಿದ್ದು ಸವದಿ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರ ಆಸ್ತಿನ್ನು ಸರ್ವೇ ಮಾಡಿಸಿ ಬಹು ಸಂಖ್ಯಾತರು ಹಗಲು ರಾತ್ರಿ ದುಡಿದು ಗಳಿಸಿದ ಶೇ. ೫೫ ಆಸ್ತಿಯನ್ನು ರೋಹಿಂಗ್ಯಾ ಮುಸ್ಲೀಮರಿಗೆ ಹಂಚಲಿದ್ದಾರೆ,ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ಬಡವರಿಂದ ೧೦ ಸಾವಿರ ನಾನಾರೂಪದಲ್ಲಿ…
ಝಳಕಿ: ನರೇಂದ್ರ ಮೋದಿ ಅವರ ನಾಯಕತ್ವ ದೇಶದ ಭದ್ರತೆ ವಿಚಾರದಲ್ಲಿ ಅನಿವಾರ್ಯವಾಗಿದೆ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಟ್ಟು,ವಕಸಿತ ಭಾರತದ ಸಂಕಲ್ಪದೊಂದಿಗೆ ದೇಶವಾಸಿಗಳ ರಕ್ಷಣೆಗೆ ಪಣತೊಟ್ಟಿರುವ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಗೆಲ್ಲಿಸಿ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಹೇಳಿದರು.ಸಮೀಪದ ಜೇವೂರ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಪಸೆ ಹಾಗೂ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.ಬಿಜೆಪಿ ಸರ್ಕಾರದಲ್ಲಿ ಕಳೆದ ಹತ್ತು ವರ್ಷಗಳ ಸಾಧನೆಗಳು, ಜನಪರ ಯೋಜನೆಗಳು, ದೇಶದಲ್ಲಾದ ಸಕಾರಾತ್ಮಕ ಬದಲಾವಣೆಗಳ ಜೊತೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರು ನಡೆ,ನುಡಿ ಮತ್ತು ಅವರ ತಾಯಿ ಗುಣ ಹೊಂದಿದವರು ಅವರು ಸಕಾರಾತ್ಮಕ ಗುಣದವರು ಬಿಜೆಪಿ ಪಕ್ಷಕ್ಕೆ ಬೆಂಬಲಿಸಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಆಶಿರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.ಪ್ರತಿ ಮನೆಗಳಲ್ಲಿ ಸಿಕ್ಕ…
ಇಂಡಿ: ತಾಲೂಕ ಆಡಳಿತ ಇಂಡಿ , ತಾಲೂಕ ಸ್ವೀಪ್ ಸಮಿತಿ ಇಂಡಿ ಮತ್ತು ಪುರ ಸಭೆ ಇಂಡಿ ಸಹಯೋಗದೊಂದಿಗೆ ವಿಶೇಷ ಚೇತನರಿಂದ ಇಂಧನ ಚಾರಿತ ವಾಹನಗಳ ಬ್ಯೆಕ್ ರ‍್ಯಾಲಿಯು ನಗರದ ಅಂಬೇಡ್ಕರ್ ಸ್ಟೇಡಿಯಂ ನಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ನಿಲಗಂಗಾ ಬಬಲಾದ ಮತ್ತು ಉಪ ವಿಭಾಗಾಧಿಕಾರಿಗಳು ಅಭಿದ್ ಗದ್ಯಾಳರವರು ಹಸಿರು ನಿಶಾನೆ ತೋರಿಸುವವರ ಮೂಲಕ ಚಾಲನೆ ನೀಡಿದರು.ಅಂಬೇಡ್ಕರ್ ಸ್ಟೇಡಿಯಂ ನಿಂದ ಪ್ರಾರಂಭವಾಗಿ ಕೆ ಇ ಬಿ, ಸರ್ಕಾರಿ ತಾಲೂಕ ಆಸ್ಪತ್ರೆ, ಬಸವೇಶ್ವರ , ಅಂಬೇಡ್ಕರ್ , ಮಹಾವೀರ್ ಸರ್ಕಲ್, ಪೊಲೀಸ್ ಸ್ಟೇಷನ್ ಮಾರ್ಗವಾಗಿ ತಾಪಂ ಕಾರ್ಯಾಲಯದಲ್ಲಿ ಮುಕ್ತಾಯಗೊಳ್ಳಲಾಯಿತು ಸುಮಾರು ೨ ಕಿಲೋ ಮೀಟರ್ ಬೈಕ್ ರ‍್ಯಾಲಿ ಮಾಡಲಾಯಿತು.ಹಿರೇರೂಗಿ ಮತ್ತು ಬಳ್ಳೊಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಬಬಲಾದ ರವರು ಸುಮಾರು ೭೦ ಕ್ಕೂ ಹೆಚ್ಚು ತ್ರಿ ಚಕ್ರ ವಾಹನಗಳ ಸವಾರರರಿಗೆ ಹಾಗೂ ಅವರ ಜೊತೆ ಕುಳಿತಿರುವ ಒಟ್ಟು ೧೫೦ ಕ್ಕೂ ನಾಗರಿಕರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.ಜಿಲ್ಲಾ ವೀಕಲ…
