ಬಾಗಲಕೋಟ: ಬಾಗಲಕೋಟೆ ಅಭಿವೃದ್ಧಿಗೆ ಈ ಬಾರಿ ಯುವಕನಾದ ನನಗೆ ಬಹುಮತದಿಂದ ಆರಿಸಿ ತರುವ ಮೂಲಕ ಅಭಿವೃದ್ಧಿಗೆ ನಾಂದಿಹಾಡಬೇಕೆಂದು ಪಕ್ಷೇತರ ಅಭ್ಯರ್ಥಿ ದತ್ತಾತ್ರೇಯ ತಾವರೆ ಹೇಳಿದರು ನಗರದಲ್ಲಿ ಹಮ್ಮಿಕೊ೦ಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ
ಅವರು, ನಾನು ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲೆಯ ಜನತೆಯ ಆಶೀರ್ವಾದ ಹಾಗೂ ಬೆ೦ಬಲದೊ೦ದಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನಾನು
ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮೊಟ್ಟ ಮೊದಲಿಗೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿ ಅವರ ಭವಿಷ್ಯ ನಿರ್ಮಾಣದ ಹಿತದೃಷ್ಟಿಯಿಂದ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾದ ಕಲ್ಯಾಣ ಕರ್ನಾಟಕ ೩೭೧ ಜೆ ಮೀಸಲಾತಿ ಕಲ್ಪಿಸುವಲ್ಲಿ ನಿರಂತರ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ, ರಸಗೊಬ್ಬರ, ಬಿತ್ತನೆ ಬೀಜ, ರೈತರ ದಾರಿ ಸಮಸ್ಯೆ ಸೇರಿದ೦ತೆ ಕೃಷಿ ಕಾಯಕಕ್ಕೆ
ಅನುಕೂಲವಾಗುವ ಸಕಲ ಸೌಲಭ್ಯ ಕಲ್ಪಿಸಲು ಪ್ರಯತ್ನಮಾಡುವೆ. ಪೌರ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿಸಲು ಪ್ರಯತ್ನ ಮಾಡುತ್ತೇನೆ. ನಿರ್ಗತಿಕರಿಗೆ ವೃದ್ಧರಿಗೆ ಸರ್ಕಾರದಿಂದ ಜಿಲ್ಲೆಯಲ್ಲಿ ವೃದ್ಧಾಶ್ರಮ, ಅನಾಥಾಶ್ರಮ, ಕನ್ನಡ ಮತ್ತು ಇಂಗ್ಲಿಷ್‌ಮಾಧ್ಯಮದಲ್ಲಿ ಉತ್ತಮ ಗುಣಮಟ್ಟದ
ವಸತಿ, ನಿರುದ್ಯೋಗ ಯುವಕರಿಗೆ ಔದ್ಯೋಗಿಕ ತರಬೇತಿ, ಮಹಿಳೆಯರ ಸಬಲೀಕರಣಕ್ಕೆ ಕೌಶಲ್ಯ ತರಬೇತಿ ಸೇರಿದಂತೆ ಸ್ವಾವಲಂಬಿ ಬದುಕು
ನಿರ್ಮಾಣಕ್ಕೆ ಶ್ರಮಿಸುವೆ. ಜಿಲ್ಲೆಯ ಜನ ಅವರ ಸ್ಟೇತೋಸ್ಕೋಪ್ ಗುರುತಿಗೆ ಮತ ನೀಡಿ, ಬಹು ಮತಗಳಿಂದ ಆರಿಸಿ ತಂದು ಜಿಲ್ಲೆಯ ಜನತೆಯ ಸೇವೆ ಮಾಡಲು ನನಗೆ ಒ೦ದು ಸದಾವಕಾಶ ಮಾಡಿಕೊಡ ಬೇಕೆಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಹಾದೇವ ತೆಲಸಂಗ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ನನ್ನನ್ನು ಆರಿಸುವ ಮೂಲಕ ಅಭಿವೃದ್ಧಿಗೆ ನಾಂದಿಹಾಡಿ :ದತ್ತಾತ್ರೇಯ
Related Posts
Add A Comment

