ಚಿಮ್ಮಡ: ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆಯ ಹೊಡೆತಕ್ಕೆ ನಲುಗುತಿದ್ದ ದೇಶವನ್ನು ನರೆಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದ್ದು ಅಂಥಹ ವಿಶ್ವ ನಾಯಕನನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಿ.ಸಿ. ಗದ್ದಿಗೌಡರಿಗೆ ಮತನೀಡಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಗ್ರಾಮದಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಬ್ರಹತ್ ರೋಡಷೋನಲ್ಲಿ ಭಾಗವಹಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು. ರಾಮಮಂದಿರ ನಿರ್ಮಾಣಕ್ಕೆ ಪದೇ ಪದೇ ತೊಡಕು ತಂದಿಡುತಿದ್ದ ಕಾಂಗ್ರೆಸ್, ಮೋದಿ ಪ್ರಧಾನಿಯಾಗುತಿದ್ದಂತೆಯೇ ಮಂದಿರ ನಿರ್ಮಾಣದೊಂದಿಗೆ ದೇಶದಲ್ಲಿ ಅಭಿವೃದ್ದಿ ಪರ್ವವೇ ಪ್ರಾರಂಭವಾಗಿದ್ದು ಯಾವುದೇ ಜಾತಿ ಧರ್ಮ ನೋಡದೇ ಅಭಿವೃದ್ದಿಯೊಂದೇ ಗುರಿಯಾಗಿಸಿಕೊಂಡಿರುವ ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಮತ ನೀಡುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕಾಗಿದೆ ಎಂದರು.
ಶಾಸಕ ಸಿದ್ದು ಸವದಿ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರ ಆಸ್ತಿನ್ನು ಸರ್ವೇ ಮಾಡಿಸಿ ಬಹು ಸಂಖ್ಯಾತರು ಹಗಲು ರಾತ್ರಿ ದುಡಿದು ಗಳಿಸಿದ ಶೇ. ೫೫ ಆಸ್ತಿಯನ್ನು ರೋಹಿಂಗ್ಯಾ ಮುಸ್ಲೀಮರಿಗೆ ಹಂಚಲಿದ್ದಾರೆ,
ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ಬಡವರಿಂದ ೧೦ ಸಾವಿರ ನಾನಾರೂಪದಲ್ಲಿ ಸುಲಿಗೆ ಮಾಡಿ ಎರಡು ಸಾವಿರ ನೀಡಿ ಜನರನ್ನು ಮರಳು ಗೊಳಿಸುತ್ತಿದ್ದು ಜನ ಇದನ್ನು ಅರ್ಥಮಾಡಿಕೊಳ್ಳ ಬೇಕಾಗಿದೆ ಎಂದರು.
ಜಿ.ಪಂ. ಮಾಜಿ ಸದಸ್ಯೆ ಸಾವಿತ್ರಿ ಬಾಬಾಗೌಡ ಪಾಟೀಲ ಸಚಿವರಿಗೆ ಸಾಥನೀಡಿದರು. ಕಾರ್ಯಕರ್ತರಿಂದ ಪುಷ್ಪವೇಷ್ಠಿಯೊಂದಿಗೆ ಸಚಿವರನ್ನು ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

