ಇಂಡಿ: ತಾಲೂಕ ಆಡಳಿತ ಇಂಡಿ , ತಾಲೂಕ ಸ್ವೀಪ್ ಸಮಿತಿ ಇಂಡಿ ಮತ್ತು ಪುರ ಸಭೆ ಇಂಡಿ ಸಹಯೋಗದೊಂದಿಗೆ ವಿಶೇಷ ಚೇತನರಿಂದ ಇಂಧನ ಚಾರಿತ ವಾಹನಗಳ ಬ್ಯೆಕ್ ರ‍್ಯಾಲಿಯು ನಗರದ ಅಂಬೇಡ್ಕರ್ ಸ್ಟೇಡಿಯಂ ನಲ್ಲಿ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ನಿಲಗಂಗಾ ಬಬಲಾದ ಮತ್ತು ಉಪ ವಿಭಾಗಾಧಿಕಾರಿಗಳು ಅಭಿದ್ ಗದ್ಯಾಳರವರು ಹಸಿರು ನಿಶಾನೆ ತೋರಿಸುವವರ ಮೂಲಕ ಚಾಲನೆ ನೀಡಿದರು.
ಅಂಬೇಡ್ಕರ್ ಸ್ಟೇಡಿಯಂ ನಿಂದ ಪ್ರಾರಂಭವಾಗಿ ಕೆ ಇ ಬಿ, ಸರ್ಕಾರಿ ತಾಲೂಕ ಆಸ್ಪತ್ರೆ, ಬಸವೇಶ್ವರ , ಅಂಬೇಡ್ಕರ್ , ಮಹಾವೀರ್ ಸರ್ಕಲ್, ಪೊಲೀಸ್ ಸ್ಟೇಷನ್ ಮಾರ್ಗವಾಗಿ ತಾಪಂ ಕಾರ್ಯಾಲಯದಲ್ಲಿ ಮುಕ್ತಾಯಗೊಳ್ಳಲಾಯಿತು ಸುಮಾರು ೨ ಕಿಲೋ ಮೀಟರ್ ಬೈಕ್ ರ‍್ಯಾಲಿ ಮಾಡಲಾಯಿತು.
ಹಿರೇರೂಗಿ ಮತ್ತು ಬಳ್ಳೊಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ ಬಬಲಾದ ರವರು ಸುಮಾರು ೭೦ ಕ್ಕೂ ಹೆಚ್ಚು ತ್ರಿ ಚಕ್ರ ವಾಹನಗಳ ಸವಾರರರಿಗೆ ಹಾಗೂ ಅವರ ಜೊತೆ ಕುಳಿತಿರುವ ಒಟ್ಟು ೧೫೦ ಕ್ಕೂ ನಾಗರಿಕರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಜಿಲ್ಲಾ ವೀಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ ರಾಜಶೇಖರ್ ದೈವಾಡಿ , ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಸಂಜಯ್ ಖಡಿಗೆಕರ್ ರವರು ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ನೆರವೇರಿಸಿ ಕೊಟ್ಟರು ಹಾಗೂ ಮತದಾರರಲ್ಲಿ ಮಂಗಳವಾರ ಮೇ ೦೭ ರಂದು ತಪ್ಪದೆ ಮತದಾನ ಮಾಡಿ ಎಂದು ಸರ್ವರಲ್ಲಿ ಮನವಿ ಮಾಡಿಕೊಂಡರು.
ಜಿಲ್ಲಾ ಚುನಾವಣಾ ರಾಯಭಾರಿ ರಾಜೇಶ್ ಪವಾರ್ ತಾಪಂ ಅಭಿವೃದ್ಧಿ ಅಧಿಕಾರಿಗಳು , ತಾಪಂ ಎಲ್ಲಾ ಸಿಬ್ಬಂದಿಗಳು ತಾಂತ್ರಿಕ ಸಿಬ್ಬಂದಿಗಳು ಆಡಳಿತ ಸಿಬ್ಬಂದಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

