ವಿಜಯಪುರ: ೨೦೨೪ರ ಚುನಾವಣೆಯ ವಿಜಯಪುರ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾದ ರಮೇಶ ಜಿಗಜಿಣಗಿಯವರಿಗೆ ಮಾದಿಗ ಸಮಾಜದ ಬೆಂಬಲಾರ್ಥಕವಾಗಿ ಇಂದು ನಗರದ ಬಿಜೆಪಿ ಪ್ರಚಾರ ಕಚೇರಿಯಲ್ಲಿ ಮಾದಿಗ ಸಮಾಜದ ಬೆಂಬಲವನ್ನು ಸೂಚಿಸಲಾಯಿತು.
ಈ ಸಮಯದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾ ನಗರ ಮಂಡಲ ಕಾರ್ಯದರ್ಶಿ ಹಾಗೂ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಸದಾನಂದ ಗುನ್ನಾಪೂರ ಮಾತನಾಡಿ, ಕಾಂಗ್ರೆಸ್ ಸರಕಾರವು ತನ್ನ ಅಧಿಕಾರ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು ಬಿಟ್ಟರೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ, ಕಾಂಗ್ರೆಸ್ ಅವಧಿಯಲ್ಲಿ ಆರ್ಥಿಕ ಮಟ್ಟವು ೧೪ನೇ ಮಟ್ಟಕ್ಕೆ ಇದ್ದಿದ್ದು, ಸದ್ಯಕ್ಕೆ ಬಿಜೆಪಿ ಸರಕಾರದಲ್ಲಿ ೪ನೇ ಮಟ್ಟಕ್ಕೆ ಬಂದಿದೆ. ಕಾಂಗ್ರೆಸ್ ತನ್ನ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಹೇರಿ ಅಧಿಕಾರ ಶಾಹಿ ಧೋರಣೆಯನ್ನು ತೋರಿದ್ದು ಬಿಟ್ಟರೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ ಎಂದರು.
ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಪರಶುರಾಮ ರೋಣಿಹಾಳ ಮಾತನಾಡಿ, ಬಿಜೆಪಿಯು ತನ್ನ ೧೦ ವರ್ಷಗಳ ಅಧಿಕಾರಾವಧಿಯಲ್ಲಿ ನಿರ್ಗತಿಕರಿಗೆ ಮನೆ, ಸುಸಜ್ಜಿತ ರಸ್ತೆ ಸುಧಾರಣೆ, ರೈತರಿಗೆ ವಿಮೆ, ರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ಹೇರಲಾದ ೩೭೧ ಕಾಯ್ದೆಯನ್ನು ರದ್ದುಪಡಿಸಿ ಎಲ್ಲ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. ಅದರೆ ಕಾಂಗ್ರೆಸ್ ಸರಕಾರವು ಜನರಿಗೆ ಹಸಿ ಸುಳ್ಳುಗಳನ್ನು ಹೇಳುತ್ತಾ, ಜನರಲ್ಲಿ ದ್ವೇಷ ಮನೋಭಾವನೆ ಹುಟ್ಟಿಸುವಲ್ಲಿ ಕೆಲಸ ಮಾಡಿದೆ ವಿನಃ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿರುವ ಉದಾಹರಣೆ ಇಲ್ಲ ಎಂಬುದು ಜನರಿಗೆ ಗೊತ್ತಿರುವ ವಿಷಯವಾಗಿದೆ. ಅದೇ ರೀತಿ ರಮೇಶ ಜಿಗಜಿಣಗಿಯವರು ಮುತ್ಸುದ್ದಿ ರಾಜಕಾರಣಿಗಳಾಗಿದ್ದು, ಎಲ್ಲ ಜನಾಂಗದ ಜನರಲ್ಲಿ ಪ್ರೀತಿಯಿಂದ ಕಾಣುವ ವ್ಯಕ್ತಿ ಆಗಿದ್ದಾರೆ. ಇಂತಹ ವ್ಯಕ್ತಿಗೆ ಆರಿಸಿ ತರುವದರಿಂದ ಮೋದಿಜೀಯವರನ್ನು ಪ್ರಧಾನಿಯನ್ನಾಗಿ ಮಾಡುವಲ್ಲಿ ನಮ್ಮ ಮಾದಿಗ ಸಮಾಜದ ಸಂಪೂರ್ಣ ಬೆಂಬಲವಿದೆ ಎಂದರು.
ಈ ಸಂದರ್ಭದಲ್ಲಿ ಅಯ್ಯಪ್ಪ ದೊಡಮನಿ, ಮಹಾದೇವ ನಾಗಠಾಣ, ಶಿವಾನಂದ ತಿಕೋಟಿಕರ, ಪ್ರದೀಪ ಕಟ್ಟಿಮನಿ, ಜೆಟ್ಟೆಪ್ಪ ಮಾದರ, ಶರಣಪ್ಪ ಬಸನಾಳ, ಸಾಗರ ಪೂಜಾರಿ, ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

