ವಿಜಯಪುರ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಅಭ್ಯರ್ಥಿಯಾದ ರಮೇಶ ಜಿಗಜಿಣಗಿಯವರ ಪರವಾಗಿ ಇಂದು ನಗರ ಶಾಸಕರ ಚಿರಂಜೀವಿಯಾದ ರಾಮನಗೌಡ ಪಾಟೀಲ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರವನ್ನು ಶಿವಶಕ್ತಿ ನಗರ, ಪಾಣಿ ನಗರ, ಸರಸ್ವತಿ ನಗರ, ಸಾಯಿಸಮರ್ಥ ನಗರ, ರಾಜರತ್ನ ಕಾಲನಿ, ಮಿಣಿಮಾದರ ಓಣಿ, ರಜಪೂತ ಗಲ್ಲಿಯಲ್ಲಿ ಬಿರುಸಿನ ಪ್ರಚಾರ ಹಮ್ಮಿಕೊಳ್ಳಲಾಗಿದೆ.
ಈ ಸಮಯದಲ್ಲಿ ರಾಮನಗೌಡ ಪಾಟೀಲ ರವರು ಮಾತನಾಡಿದ ೨೦೧೪ ಮತ್ತು ೨೦೧೯ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೇಶದ ಜನತೆ ಪೂರ್ಣ ಬಹುಮತ ನೀಡಿದ್ದು, ಬಿಜೆಪಿ ೧೦ ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ, ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ನಂತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ಅಥವಾ ಅವಧಿಯನ್ನು ವಿಸ್ತರಿಸಿಲ್ಲ. ಅದರ ಬದಲಿಗೆ ಮೋದಿ ನೇತೃತ್ವದ ಮತ್ತು ಅಮಿತ್ ಶಾ ಅವರ ಕೌಶಲ್ಯಪೂರ್ಣ ಮಾರ್ಗದರ್ಶನದ ಈ ಸರ್ಕಾರ ಪೂರ್ಣ ಬಹುಮತವನ್ನು ೩೭೦ ನೇ ವಿಧಿಯನ್ನು ತೆಗೆದುಹಾಕಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸಲು, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಲಾಕ್ಡೌನ್ ಹೇರಲು, ಸಿಎಎ ತರಲು ಮತ್ತು ಭಗವಾನ್ ಶ್ರೀರಾಮನ ಮಂದಿರ ನಿರ್ಮಾಣದ ಮಾರ್ಗವನ್ನು ಸುಗಮಗೊಳಿಸಲು ಬಳಸಿಕೊಂಡಿದೆ. ಕಾಂಗ್ರೆಸ್ ಪಕ್ಷವು ಈ ೭೦ ವರ್ಷಗಳಲ್ಲಿ ಕೇವಲ ಹಸಿ ಬಿಸಿ ಸುಳ್ಳಗಳನ್ನು ಹಬ್ಬಿಸಿ, ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜೇಶ ದೇವಗಿರಿ, ರಾಜು ಕುರಿಯವರ, ಶ್ರೀಮತಿ ಸ್ವಪ್ನಾ ಕಣಮಚನಾಳ, ವಿಠ್ಠಲ ಹೊಸಪೇಟಿ, ಮುಖಂಡರಾದ ಚಿದಾನಂದ ಚಲವಾದಿ, ಶಂಕರ ನಾಟೀಕಾರ, ರಮೇಶ ಪಡಸಲಗಿ, ಉಮೇಶ ವೀರಕರ, ಬಸವರಾಜ ಗೊಳಸಂಗಿ, ಮನೋಜ ಜಿಗಜಿಣಗಿ, ಶ್ರೀಧರ ದೇವರ, ಅಶೋಕ ಬೆಲ್ಲದ, ಮಲ್ಲು ಗುಜರಿ, ಪ್ರಕಾಶ ತಾಳಿಕೋಟಿ, ವಿಠ್ಠಲ ಅಂಬಿಗೇರ, ಅರ್ಜುನ ಕಾಂಬಳೆ, ಗುರುಸ್ವಾಮಿ ಹಿರೇಮಠ, ಗಂಗಾಧರ ಹಿರೇಮಠ, ಇಂಚಗೇರಿ ಸರ್, ಇಂಡಿ ಸರ್, ಕಿರಣ ರಾಠೋಡ, ಸುನೀಲ ಚಲವಾದಿ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

