ವಿಜಯಪುರ: ರಾಜ್ಯದಲ್ಲಿ ಅಹಿಂದ ವರ್ಗದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕೈ ಬಲಪಡಿಸಲು ಜಿಲ್ಲೆಯ ಅಹಿಂತ ವರ್ಗದ ಜನತೆ ಈ ಸಾರಿ ಜಿಲ್ಲಾ ಅದ್ಯಕ್ಷರು, ತಾಲೂಕಾ ಅಧ್ಯಕ್ಷರು ಹಾಗೂ ಅಹಿಂದ ವರ್ಗದ ಎಲ್ಲ ಸಂಘಟನೆಗಳು ಕಾರ್ಯನಿರತರಾಗಿದ್ದಾರೆ. ಅಹಿಂದ ಬಹುಸಂಖ್ಯಾತರ ವರ್ಗದವರಾದ ರಾಜು ಆಲಗೂರ್ ರವರನ್ನು ಬೆಂಬಲಿಸುವುದಾಗಿ ತೀರ್ಮಾನಿಸಲಾಗಿದೆ.
ಕಳೆದ ೭೦ ವರ್ಷಗಳಿಂದ ಅಹಿಂದ ವರ್ಗವು ತುಳಿತಕ್ಕೆ ಒಳಪಡುತ್ತಿದ್ದು, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಹಿಂದ ವರ್ಗ ಬೆಂಬಲಿಸಬೇಕೆಂದು ಅಹಿಂದ ರಾಜ್ಯ ಅದ್ಯಕ್ಷರಾದ ಪ್ರಭುಲಿಂಗ ದೊಡನಿ ರವರು ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಅಹಿಂದ ವರ್ಗದ ಜನತೆಯನ್ನು ಸಂಘಟಿಸುತ್ತಿದ್ದಾರೆ. ಅಹಿಂದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಯಾಕೂಬ ಜತ್ತಿ ಎಮ್.ಸಿ. ಮುಲ್ಲಾ, ವಿಠ್ಠಲಗೌಡ ಬಿರಾದಾರ (ಗುಗ್ಗದಡ್ಡಿ), ಫಯಾಜ ಕಲಾದಗಿ, ಶ್ರೀಶೈಲ ಕೌಲಗಿ, ಪ್ರಕಾಶ ಗುಡಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
