Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಸೌಕರ್ಯಗಳು ಚಡಚಣ: ಮೇ.೦೭ ರ ಮಂಗಳವಾರದಂದು ನಡೆಯಲಿರುವ ೨೦೨೪ ನೇ ಸಾಲಿನ ಲೋಕಸಭಾ ಕ್ಷೇತ್ರದ ಸದಸ್ಯರ ಚುನಾವಣೆಯ ಮುನ್ನಾ ದಿನವಾದ ಸೋಮವಾರದಂದು ಸಾಯಂಕಾಲ ೦೫ ಗಂಟೆಗೆ ರೇವತಗಾಂವ ಗ್ರಾಮದ ನಾಲ್ಕು ಮತಗಟ್ಟೆಗಳಿಗೆ ನೇಮಗೊಂಡ ಸಿಬ್ಬಂದಿ ಮತದಾನಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ತೆಗೆದುಕೊಂಡು ಆಗಮಿಸಿದರು.ವಿಶೇಷ ಮೆಡಿಕಲ್ ಕಿಟ್: ಬಿಸಿಲಿನ ತಾಪಮಾನ ಹಾಗೂ ಶಾಖಾಘಾತದ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್, ಓಆರ್‌ಎಸ್ ಕಿಟ್‌ಗಳನ್ನು ಮಸ್ಟರಿಂಗ್ ಸಂದರ್ಭದಲ್ಲಿಯೇ ಒದಗಿಸಲಾಗಿದೆ.ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ ರ‍್ಯಾಂಪ್, ವೀಲ್‌ಚೇರ್ ವ್ಯವಸ್ಥೆ ಮಾಡಿದೆ. ತೀವ್ರ ಬಿಸಿಲಿನ ಬೇಗೆ ಇರುವುದರಿಂದ ಫ್ಯಾನ್ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿದ್ದಾರೆ.ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಕೆಲವು ನಿಯಮಗಳನ್ನು ತಿಳಿಸಲು ಬಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಅದರಲ್ಲಿ ವಿವಿ ಪ್ಯಾಟ್ ಮಶಿನ್ ಮೂಲಕ ಮತಚಲಾಯಿಸಿದ ಮೇಲೆ…
ಕೊಲ್ಹಾರ: ತಾಲೂಕ ಸ್ವೀಪ್ ಸಮಿತಿ, ತಾಲೂಕ ಪಂಚಾಯತ್ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲ ನಾಗರಿಕರು ಕಡ್ಡಾಯವಾಗಿ ಮಂಗಳವಾರ ನಡೆಯುವ ಮತದಾನದಲ್ಲಿ ತಪ್ಪದೇ ಮತ ಚಲಾಯಿಸಿ ಲೋಕಸಭೆ ಚುನಾವಣೆಯನ್ನು ಯಶಸ್ವಿಗೊಳಿಸಿಬೇಕೆಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಹುಕ್ಕೇರಿರವರು ಮನವಿ ಮಾಡಿದರು.ಪಟ್ಟಣದ ಬಸ್ ನಿಲ್ದಾಣದಲ್ಲಿ ಲೋಕಸಭಾ ಚುನಾವಣೆ ೨೦೨೪ ರ ಹಿನ್ನಲೆಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಯಾಣಿಕರೊಂದಿಗೆ ಮಾಹಿತಿ ವಿನಿಮಯ ನೀಡಿ, ಚುನಾವಣಾ ಆಯೋಗ ಗುರುತು ಮಾಡಿರುವ ದಾಖಲೆಗಳೊಂದಿಗೆ ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಹಿರಿಯಯರು, ವಿಶೇಷ ಚೇತನರಿಗೆ ಪ್ರಥಮ ಆದ್ಯತೆ ನೀಡಿ, ನಾಗರಿಕರು ಶಾಂತಿಯುತವಾಗಿ ಸಹಕರಿಸಿ ತಾಲೂಕಿನಲ್ಲಿ ೧೦೦ ರಷ್ಟು ಮತದಾನ ಆಗುವಂತೆ ತಾವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.ಈ ಸಮಯದಲ್ಲಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಹುಕ್ಕೇರಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಕಿರ್ತಿ ರವರು ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿ ಕುರಿತ ಪೋಸ್ಟರ್ಗಳನ್ನು ಗೋಡೆಗಳ ಮೇಲೆ…
ಮುದ್ದೇಬಿಹಾಳ: ಲೋಕಸಭಾ ಚುನಾವಣೆ ೨೦೨೪ ರ ಕರ್ತವ್ಯದಲ್ಲಿ ಭಾಗಿಯಾಗಿರುವ ಪೊಲೀಸ್, ಪ್ಯಾರಾ ಮಿಲಿಟರಿ ಮತ್ತು ಸಶಸ್ತ್ರ ಸೀಮಾ ಬಲ ಯೋಧರಿಗೆ ರವಿವಾರ ಜ್ಞಾನಭಾರತಿ ಶಾಲೆ ಪಕ್ಕದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಮಲೇರಿಯಾ ಹಾಗೂ ಪೈಲೇರಿಯಾ ರೋಗಗಳ ತಪಾಸಣೆ ನಡೆಸಲಾಯಿತು.ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ (ಡಿವಿಬಿಡಿಸಿಪಿ) ಅಡಿ ತಾಲೂಕು ಆರೋಗ್ಯ ಇಲಾಖೆಯಿಂದ ನಡೆದ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಿಗೂ ಆರ್‌ಡಿಟಿ ಕಿಟ್ ಹಾಗೂ ರಕ್ತ ಲೇಪನ ತಗೆದು ರಕ್ತ ಪರೀಕ್ಷೆ ನಡೆಸಿ ಮುಂಜಾಗ್ರತೆಯಾಗಿ ಮಲೇರಿಯಾ ಮತ್ತು ಪೈಲೇರಿಯಾ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಯಿತು.ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಛಲವಾದಿ ಮಾತನಾಡಿ ಭಾರತದೇಶವನ್ನು ೨೦೨೫ರ ವೇಳೆಗೆ ಮಲೇರಿಯಾ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಹಾಗೂ ೨೦೨೭ರ ವೇಳೆಗೆ ಆನೆಕಾಲು / ಫೈಲೇರಿಯಾ ಗುರಿ ಸಾಧನೆಯ ಉದ್ದೇಶವನ್ನು ಹೊಂದಿದೆ. ಅನೇಕ ಮೈಲುಗಲ್ಲುಗಳನ್ನು ಈಗಾಗಲೇ ಕ್ರಮಿಸಲಾಗಿದ್ದು ಜಿಲ್ಲೆಯಾದ್ಯಂತ ಮಲೇರಿಯಾ ಮುಂಜಾಗ್ರತಾ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊರರಾಜ್ಯದಿಂದ ಇಲ್ಲಿಗೆ ಚುನಾವಣಾ ಭದ್ರತೆಗಾಗಿ ಆಗಮಿಸಿರುವ ಯೋಧರಿಗೂ…
ದೇವರಹಿಪ್ಪರಗಿ: ಪಶುಆಸ್ಪತ್ರೆಯ ವೈದ್ಯರು ನಿಗದಿತ ಸಮಯಕ್ಕೆ ಬಂದು ಚಿಕಿತ್ಸೆ ನೀಡದ ಪರಿಣಾಮ ಎಮ್ಮೆ ಸಾವಿಗೀಡಾಗಿದೆ ಎಂದು ಆರೋಪಿಸಿ ರೈತರು ಎಮ್ಮೆಯ ಕಳೇಬರದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ಕೈಗೊಂಡರು.ಪಟ್ಟಣದಲ್ಲಿ ಸೋಮವಾರ ಈ ಘಟನೆ ಜರುಗಿದ್ದು, ಈ ಕುರಿತು ರೈತ ಹಾಗೂ ಎಮ್ಮೆಯ ಮಾಲೀಕ ಅಜೀಜ್ ಯಲಗಾರ ಮಾತನಾಡಿ, ಎಮ್ಮೆ ಕಳೆದ ೫ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕಾರಣ ದಿ;೨ ರಂದು ಆಸ್ಪತ್ರೆಗೆ ತೆರಳಿ ಎಮ್ಮೆಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದೇ ಆದರೆ ವೈದ್ಯರು ಅನಗತ್ಯ ಕಾರಣ ನೀಡಿ ಚಿಕಿತ್ಸೆ ನೀಡದೇ ಇದ್ದ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಎಮ್ಮೆ ಹೆಚ್ಚು ಜ್ವರದಿಂದ ಬಳಲಿ ಸಾವಿಗೀಡಾಯಿತು. ವೈದ್ಯರು ಸ್ವಲ್ಪವೇ ಮಾನವೀಯತೆ ಮೆರೆದಿದ್ದರೇ ನನ್ನ ಲಕ್ಷ ರೂ. ಬೆಲೆ ಬಾಳುವ ಎಮ್ಮೆ ಬದುಕುತ್ತಿತ್ತು. ಆದರೆ ಅವರ ಬೇಜವಾಬ್ದಾರಿ ವರ್ತನೆ ಹಾಗೂ ನಡುವಳಿಕೆ ಇಂದು ಮೂಕ ಪ್ರಾಣಿಯ ಸಾವಿಗೆ ಕಾರಣವಾಗಿದೆ. ವೈದ್ಯರ ಈ ತೆರನಾದ ವರ್ತನೆ ಇದೇ ಮೊದಲಲ್ಲ. ಇಲ್ಲಿನ ಅನೀಲ ಕಕ್ಕಳಮೇಲಿ ಹಾಗೂ ಚಿಕ್ಕರೂಗಿ ಪಶುಆಸ್ಪತ್ರೆಯ ನಾಗೇಂದ್ರ ಹರಸೂರ…
ದೇವರಹಿಪ್ಪರಗಿ: ಲೋಕಸಭಾ ಚುನಾವಣಾ ಅಂಗವಾಗಿ ಚುನಾವಣಾ ಸಾಮಗ್ರಿಗಳನ್ನು ಪಡೆದ ಸಿಬ್ಬಂದಿ ನಿಗದಿ ಪಡಿಸಿದ ಗ್ರಾಮಗಳ ಮತಗಟ್ಟೆಗಳಿಗೆ ತೆರಳುವ ಮುನ್ನ ಪರಿಶೀಲನೆ ನಡೆಸಿದರು.ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕೆ ಕಾಲೇಜು ಆವರಣದಲ್ಲಿ ಸೋಮವಾರ ಸೇರಿದ ೨೩ ಸೆಕ್ಟರ್‌ಗಳ ೨೫೨ ಮತಗಟ್ಟೆಗಳ ಚುನಾವಣಾ ಸಿಬ್ಬಂದಿ ತಮಗೆ ನಿಗದಿಪಡಿಸಿದ ಮತಗಟ್ಟೆಗಳ ಮಾಹಿತಿ ಹಾಗೂ ಸಾಮಗ್ರಿಗಳನ್ನು ಪಡೆದು ಪರಿಶೀಲನೆ ನಡೆಸಿದರು. ನಂತರ ಊಟ ಸೇವಿಸಿ ನಿಗದಿತ ಸಮಯಕ್ಕೆ ಬಸ್ ಹಾಗೂ ಕ್ರೂಸರ್‌ಗಳಲ್ಲಿ ಪ್ರಯಾಣ ಬೆಳೆಸಿದರು.ದೇವರಹಿಪ್ಪರಗಿ ಮತಕ್ಷೇತ್ರದ ಕುರಿತಾಗಿ ತಹಶೀಲ್ದಾರ ಪ್ರಕಾಶ ಸಿಂದಗಿ ಮಾಹಿತಿ ನೀಡಿ ಒಟ್ಟು ೨೫೨ ಮತಗಟ್ಟೆಗಳಲ್ಲಿ ೦೫ಪಿಂಕ್‌ಮತಗಟ್ಟೆ, ೦೧ ಯುವಸಮೂಹ, ೦೧ ವಿಕಲಹೀನತೆಯ ವಿಶೇಷ ಮತಗಟ್ಟೆಗಳಿವೆ. ಕ್ಷೇತ್ರದಲ್ಲಿ ೧೧೩೬೫೦ ಪುರುಷರು, ೧೦೯೭೩೬ ಮಹಿಳೆಯರು ಸೇರಿದಂತೆ ೨೨೩೪೦೭ ಮತದಾರರಿದ್ದಾರೆ. ಇವರ ಮತದಾನದ ಕಾರ್ಯಕ್ಕೆ ೨೫೨ ಪಿಆರ್‌ಓ, ೨೫೨ಎಪಿಆರ್‌ಓ ೨೫೨ಪಿಓ, ೨೫೨ಪಿಓ೨ ಹಾಗೂ ಮೀಸಲು ಸಿಬ್ಬಂದಿ ಸೇರಿದಂತೆ ಒಟ್ಟು ೧೨೨೪ ಸಿಬ್ಬಂದಿಗಳು. ೨೩ ಸೆಕ್ಟರ್ ಅಧಿಕಾರಿಗಳು, ೨೩ ಮಾಸ್ಟರ್ ಟ್ರೇನರ್‌ಗಳು, ೧೫ ಮೈಕ್ರೋ ಆಬ್ರ‍್ವರ್, ೪೦೦ ಪೊಲೀಸ್ ಸಿಬ್ಬಂದಿ…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಬಾಲತಪಸ್ವಿ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೭೫ ನೇ ಯಾತ್ರಾ ಮಹೋತ್ಸವ, ತಪೋಭೂಷಣ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೩ ನೇ ಸಂಸ್ಮರಣೋತ್ಸವದಂಗವಾಗಿ ಸೋಮವಾರ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಶಿವಧೀಕ್ಷಾ ಕಾರ್ಯಕ್ರಮ ನೆರವೇರಿತು.
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಪಟ್ಟೀಕಂಥಿ ಹಿರೇಮಠದ ಬಾಲತಪಸ್ವಿ ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ೭೫ ನೇ ಯಾತ್ರಾ ಮಹೋತ್ಸವ, ತಪೋಭೂಷಣ ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೨೩ ನೇ ಸಂಸ್ಮರಣೋತ್ಸವದಂಗವಾಗಿ ಸೋಮವಾರ ಸುಭಾಸಗೌಡ ಪಾಟೀಲ, ವಿಶ್ವನಾಥಗೌಡ ಪಾಟೀಲ ಅವರಿಂದ ವೀರಶೈವ ಧರ್ಮ ಧ್ವಜಾರೋಹಣ ನೆರವೇರಿತು. ನಂತರ ಸಾಮೂಹಿಕ ಶಿವದೀಕ್ಷಾ ಕಾರ್ಯಕ್ರಮ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಇಂಗಳೇಶ್ವರದ ಬೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಿತು.ನಂತರ ಕುಂಭಮೇಳ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಚನ್ನಗೌಡ ಸಂಗನಗೌಡ ಪಾಟೀಲ ಅವರ ಮನೆಯಿಂದ ಗುರು ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ನೂತನ ರಜತ ಮೂರ್ತಿ, ಲಿಂ.ಉಮೇಶ ಮಹಾಜನಶೆಟ್ಟಿ ಮಲಘಾಣ ಅವರ ಸೇವೆಯ ರಜತ ಕಳಸ, ಮಹಾಜನಶೆಟ್ಟಿ ಭಕ್ತರ ಸೇವೆಯೊಂದಿಗೆ ಕಳಸಾಗಮನ, ಲಿಂ. ಶಿವಯ್ಯ ಲಟಗಿ, ಸಿದ್ದಯ್ಯ ಮಠ, ಸಿದ್ದಯ್ಯ ಮಠ, ವಿವೇಕಾನಂದ ಮಠ, ಮಹಾಂತಯ್ಯ ತಂಬೂರಿಯವರ ಪೌರೋಹಿತ್ಯದಲ್ಲಿ ಗುರು ಮಹಾಂತೇಶ್ವರರ, ಗುರು ಸಂಗನಬಸವ ಶಿವಾಚಾರ್ಯರ ಕರ್ತೃ ಗದ್ದುಗೆಗಳಿಗೆ ಯರನಾಳದ ಸಂಗನಬಸಪ್ಪ ತಳೇವಾಡ ಅವರ ಕುಟುಂಬದಿಂದ,ಅನೇಕ ಭಕ್ತರ ಸೇವೆಯಿಂದ ರುದ್ರಾಭಿಷೇಕ,…
ಬಸವನಬಾಗೇವಾಡಿ: ಇಲ್ಲಿಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಯ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣೆಯ ಸಿಬ್ಬಂದಿಗಳ ಮಕ್ಕಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಆರೈಕೆ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಮಕ್ಕಳು ಇರದೇ ಇರುವದರಿಂದಾಗಿ ಕೇವಲ ಸಿಬ್ಬಂದಿಗಳು ಮಾತ್ರ ಕಂಡುಬಂದರು.
ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಮೇ.೭ ರಂದು ನಡೆಯಲಿರುವ ವಿಜಯಪುರ ಮೀಸಲು ಲೋಕಸಭಾ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯ ವಿವಿಧೆಡೆಗಳಿಂದ ನಿಯೋಜಿಸಿದ ಚುನಾವಣಾ ಸಿಬ್ಬಂದಿಗಳು ಚುನಾವಣೆ ಸಾಮಗ್ರಿಗಳನ್ನು ಪರಿಶೀಲಿಸಿದ ನಂತರ ತಮ್ಮ ನಿಗದಿ ಪಡಿಸಿದ ವಾಹನಗಳ ಮೂಲಕ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ಮಾಹಿತಿ ಕೇಂದ್ರ, ಹಾಜರಾತಿ ವಿಭಾಗ, ಕಾಯ್ದಿರಿಸಿದ ಸಿಬ್ಬಂದಿಗಳಿಗೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಬೆಳಗ್ಗೆ ಉಪಹಾರ ವ್ಯವಸ್ಥೆ, ಮಧ್ಯಾನ್ಹದ ಊಟದ ವ್ಯವಸ್ಥೆ, ಬಿಸಿಲಿನ ಪ್ರಖರತೆ ಇರುವದರಿಂದಾಗಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ, ಊಟದಲ್ಲಿ ಮಜ್ಜಿಗೆ, ಶರಬತ್ ತಾಲೂಕಾಡಳಿತವು ವ್ಯವಸ್ಥೆ ಮಾಡಿತ್ತು.ಪ್ರತಿ ಮತಗಟ್ಟೆ ಕೇಂದ್ರಗಳಿಗೆ ನಿಯೋಜಿಸಿರುವ ಸಿಬ್ಬಂದಿ ಮಾಹಿತಿಯನ್ನು ಬೋರ್ಡ್ಗಳಿಗೆ ಹಚ್ಚಲಾಗಿತ್ತು. ಸಿಬ್ಬಂದಿಗಳು ಇದರ ಸಹಾಯದಿಂದ ತಮಗೆ ಯಾವ ಮತಗಟ್ಟೆ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತಿರುವುದು ಕಂಡುಬಂದಿತ್ತು.ಚುನಾವಣೆಗೆ ನಿಯೋಜಿಸಿದ ಸಿಬ್ಬಂದಿಗಳು ಒಂದು ವೇಳೆ ತಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಬಂದರೆ ಮಕ್ಕಳಿಗಾಗಿ ಮಹಿಳಾ ಮತ್ತು ಮಕ್ಕಳ…
