ಮುದ್ದೇಬಿಹಾಳ: ಲೋಕಸಭಾ ಚುನಾವಣೆ ೨೦೨೪ ರ ಕರ್ತವ್ಯದಲ್ಲಿ ಭಾಗಿಯಾಗಿರುವ ಪೊಲೀಸ್, ಪ್ಯಾರಾ ಮಿಲಿಟರಿ ಮತ್ತು ಸಶಸ್ತ್ರ ಸೀಮಾ ಬಲ ಯೋಧರಿಗೆ ರವಿವಾರ ಜ್ಞಾನಭಾರತಿ ಶಾಲೆ ಪಕ್ಕದಲ್ಲಿರುವ ಬಿಸಿಎಂ ಹಾಸ್ಟೆಲ್‌ನಲ್ಲಿ ಮಲೇರಿಯಾ ಹಾಗೂ ಪೈಲೇರಿಯಾ ರೋಗಗಳ ತಪಾಸಣೆ ನಡೆಸಲಾಯಿತು.
ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ (ಡಿವಿಬಿಡಿಸಿಪಿ) ಅಡಿ ತಾಲೂಕು ಆರೋಗ್ಯ ಇಲಾಖೆಯಿಂದ ನಡೆದ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಿಗೂ ಆರ್‌ಡಿಟಿ ಕಿಟ್ ಹಾಗೂ ರಕ್ತ ಲೇಪನ ತಗೆದು ರಕ್ತ ಪರೀಕ್ಷೆ ನಡೆಸಿ ಮುಂಜಾಗ್ರತೆಯಾಗಿ ಮಲೇರಿಯಾ ಮತ್ತು ಪೈಲೇರಿಯಾ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಯಿತು.
ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಛಲವಾದಿ ಮಾತನಾಡಿ ಭಾರತದೇಶವನ್ನು ೨೦೨೫ರ ವೇಳೆಗೆ ಮಲೇರಿಯಾ ಮುಕ್ತ ಮಾಡುವ ಗುರಿ ಹೊಂದಲಾಗಿದೆ ಹಾಗೂ ೨೦೨೭ರ ವೇಳೆಗೆ ಆನೆಕಾಲು / ಫೈಲೇರಿಯಾ ಗುರಿ ಸಾಧನೆಯ ಉದ್ದೇಶವನ್ನು ಹೊಂದಿದೆ. ಅನೇಕ ಮೈಲುಗಲ್ಲುಗಳನ್ನು ಈಗಾಗಲೇ ಕ್ರಮಿಸಲಾಗಿದ್ದು ಜಿಲ್ಲೆಯಾದ್ಯಂತ ಮಲೇರಿಯಾ ಮುಂಜಾಗ್ರತಾ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊರರಾಜ್ಯದಿಂದ ಇಲ್ಲಿಗೆ ಚುನಾವಣಾ ಭದ್ರತೆಗಾಗಿ ಆಗಮಿಸಿರುವ ಯೋಧರಿಗೂ ಸರ್ಕಾರದ ನಿರ್ದೇಶನದನ್ವಯ ತಪಾಸಣಾ ಶಿಬಿರ ನಡೆಸಿದ್ದು ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಇಲಾಖೆಯ ಸಿಬ್ಬಂದಿಗಳಾದ ಇಸ್ಮಾಯಿಲ್ ವಾಲೀಕಾರ, ಸಿ.ಜಿ.ಬಿದರಕುಂದಿ ಎಸ್.ಆರ್.ಸಜ್ಜನ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಮೊಮ್ಮದರಫೀಕ್ ನಾಗರಾಳ ಹಾಗೂ ವ್ಹಿಬಿಡಿ ಮೇಲ್ವಿಚಾರಕ ಎಸ್.ಸಿ.ರುದ್ರವಾಡಿ ಶಿಬಿರದ ನೇತೃತ್ವ ವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

