ದೇವರಹಿಪ್ಪರಗಿ: ಲೋಕಸಭಾ ಚುನಾವಣಾ ಅಂಗವಾಗಿ ಚುನಾವಣಾ ಸಾಮಗ್ರಿಗಳನ್ನು ಪಡೆದ ಸಿಬ್ಬಂದಿ ನಿಗದಿ ಪಡಿಸಿದ ಗ್ರಾಮಗಳ ಮತಗಟ್ಟೆಗಳಿಗೆ ತೆರಳುವ ಮುನ್ನ ಪರಿಶೀಲನೆ ನಡೆಸಿದರು.
ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ಎ.ಬಿ.ಸಾಲಕ್ಕೆ ಕಾಲೇಜು ಆವರಣದಲ್ಲಿ ಸೋಮವಾರ ಸೇರಿದ ೨೩ ಸೆಕ್ಟರ್‌ಗಳ ೨೫೨ ಮತಗಟ್ಟೆಗಳ ಚುನಾವಣಾ ಸಿಬ್ಬಂದಿ ತಮಗೆ ನಿಗದಿಪಡಿಸಿದ ಮತಗಟ್ಟೆಗಳ ಮಾಹಿತಿ ಹಾಗೂ ಸಾಮಗ್ರಿಗಳನ್ನು ಪಡೆದು ಪರಿಶೀಲನೆ ನಡೆಸಿದರು. ನಂತರ ಊಟ ಸೇವಿಸಿ ನಿಗದಿತ ಸಮಯಕ್ಕೆ ಬಸ್ ಹಾಗೂ ಕ್ರೂಸರ್‌ಗಳಲ್ಲಿ ಪ್ರಯಾಣ ಬೆಳೆಸಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಕುರಿತಾಗಿ ತಹಶೀಲ್ದಾರ ಪ್ರಕಾಶ ಸಿಂದಗಿ ಮಾಹಿತಿ ನೀಡಿ ಒಟ್ಟು ೨೫೨ ಮತಗಟ್ಟೆಗಳಲ್ಲಿ ೦೫ಪಿಂಕ್‌ಮತಗಟ್ಟೆ, ೦೧ ಯುವಸಮೂಹ, ೦೧ ವಿಕಲಹೀನತೆಯ ವಿಶೇಷ ಮತಗಟ್ಟೆಗಳಿವೆ. ಕ್ಷೇತ್ರದಲ್ಲಿ ೧೧೩೬೫೦ ಪುರುಷರು, ೧೦೯೭೩೬ ಮಹಿಳೆಯರು ಸೇರಿದಂತೆ ೨೨೩೪೦೭ ಮತದಾರರಿದ್ದಾರೆ. ಇವರ ಮತದಾನದ ಕಾರ್ಯಕ್ಕೆ ೨೫೨ ಪಿಆರ್‌ಓ, ೨೫೨ಎಪಿಆರ್‌ಓ ೨೫೨ಪಿಓ, ೨೫೨ಪಿಓ೨ ಹಾಗೂ ಮೀಸಲು ಸಿಬ್ಬಂದಿ ಸೇರಿದಂತೆ ಒಟ್ಟು ೧೨೨೪ ಸಿಬ್ಬಂದಿಗಳು. ೨೩ ಸೆಕ್ಟರ್ ಅಧಿಕಾರಿಗಳು, ೨೩ ಮಾಸ್ಟರ್ ಟ್ರೇನರ್‌ಗಳು, ೧೫ ಮೈಕ್ರೋ ಆಬ್ರ‍್ವರ್, ೪೦೦ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಮತದಾರರ ಮತದಾನಕ್ಕೆ ೩೧ ಸಾರಿಗೆ ಬಸ್ ಹಾಗೂ ೫ ಕ್ರೂಸರ್ ಸೇರಿದಂತೆ ಚುನಾವಣೆಗೆ ಅಗತ್ಯವಾದ ವಿವಿಧ ವಾಹನ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿ, ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವುದರ ಜೊತೆಗೆ ತಾಲ್ಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಿರಸ್ತೇದಾರ ಸುರೇಶ ಮ್ಯಾಕೇರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಸರ್ವೆತಪಾಸಕ ವಿ.ವೈ.ಹಳ್ಳಿ, ಸಿಬ್ಬಂದಿ ಸಂತೋಷ ತಳವಾರ, ಅನೀಲಕುಮಾರ ರಾಠೋಡ, ರಾಜಕುಮಾರ ಕಂಠಿ, ಬಸಮ್ಮ ಭಾಟಿ, ಅಕ್ಷಯ ಹಿರೇಮಠ ಸೇರಿದಂತೆ ಚುನಾವಣಾ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

